Categories: ಕೋಲಾರ

ಮಕ್ಕಳಿಗೆ ಭವಿಷ್ಯ ರೂಪಿಸಲು ಪ್ಲೇ ಹೋಂ ಶಾಲೆಗಳು ಸಹಕಾರಿ: ಓಂಶಕ್ತಿ ಚಲಪತಿ

ಕೋಲಾರ: ಪೋಷಕರು ತಮ್ಮ ಮಕ್ಕಳಲ್ಲಿ ಮುಂದಿನ ಭವಿಷ್ಯವನ್ನು ರೂಪಿಸಲು ಶಿಕ್ಷಣದ ಪ್ರಾರಂಭಿಕ ಹಂತದಲ್ಲಿನ ಇಂತಹ ಪ್ಲೇ ಹೋಂ ಶಾಲೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಕುಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಸಾಯಿ ಬಾಬಾ ಮಂದಿರದಲ್ಲಿ ಶನಿವಾರ ಅಕ್ಷರ ಪ್ಲೇ ಹೋಂ ಶಾಲೆಯ ಎರಡನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದ ಮೂಲ ಆಶಯಗಳನ್ನು ಆಟಪಾಠಗಳೊಂದಿಗೆ ಇಂತಹ ಶಾಲೆಗಳು ಕಲಿಸಿಕೊಡುತ್ತವೆ ಪೋಷಕರು ತಮ್ಮ ಕೆಲಸಗಳ ಒತ್ತಡದ ಮಧ್ಯೆ ಶಾಲೆಗೆ ಸೇರಿಸಿದರೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಮಹತ್ವ, ಅರಿವು ಹಾಗೂ ಮುಂದಿನ ಭವಿಷ್ಯದ ಕಣ್ಣೋಟ ತಿಳಿಸಲು ಸಾಧ್ಯವಾಗುತ್ತದೆ ಎಂದರು.

ಇವತ್ತು ಸಮಾಜದಲ್ಲಿ ಬರೀ ಹಣ ಸಂಪಾದನೆಗೆ ಎನ್ನುವ ಪ್ರವೃತ್ತಿ ದೂರವಾಗಿ ಒಳ್ಳೆಯ ಮೌಲ್ಯಯುತವಾದ ಶಿಕ್ಷಣ ಅವಶ್ಯಕತೆಯ ಬಗ್ಗೆ ಯೋಚಿಸಬೇಕಾಗಿದೆ ಮಕ್ಕಳಿಗೆ ದೇಶ, ಧರ್ಮ, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಕಾಳಜಿ ತರಬೇಕಾಗಿದೆ ಉತ್ತಮ ಪ್ರಜೆಯಾಂತೆ ಪ್ರತಿಯೊಬ್ಬರೂ ಭಾರತದಲ್ಲಿ ಇದ್ದೇವೆ ಎಂಬುದನ್ನು ಅರಿತು ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ್ ಹಂಸ ಮರೀಯಾ ಮಾತನಾಡಿ ಇಂತಹ ಶಾಲೆಗಳಿಂದ ಮಕ್ಕಳಿಗೆ ಮೊದಲು ಆಟ ನಂತರ ಪಾಠ ಎನ್ನುವ ಮನಸ್ಥಿತಿ ಬರುತ್ತದೆ ತಂದೆ ತಾಯಿಗೆ ಮಕ್ಕಳ ಚಿಂತೆ ದೂರವಾಗುತ್ತದೆ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸುವಂತೆ ಶಿಕ್ಷಣದ ಪ್ರಾರಂಭದಲ್ಲೇ ಸಾಧ್ಯವಾದರೆ ಮುಂದೆ ಉತ್ತಮ ಮಕ್ಕಳಾಗಿ ಬೆಳೆಯಲು ಕೂಡ ಸಾಧ್ಯವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಶಿಕ್ಷಕಿ ಪುಷ್ಪ ಓಂಶಕ್ತಿ ಚಲಪತಿ, ಅಕ್ಷರ ಪ್ಲೇ ಹೋಂ ಶಾಲೆಯ ಪ್ರಾಂಶುಪಾಲರಾದ ಶ್ರೀಲತಾ , ವಕೀಲ ರಘು, ಶಾಲೆಯ ಸುಭದ್ರಮ್ಮ, ಭರತ್ ಮುಂತಾದವರು ಇದ್ದರು

Ramesh Babu

Journalist

Recent Posts

ಎಂಎಸ್ ಜಿಪಿ ಘಟಕಕ್ಕೆ ಬಂದ ಹೆಚ್ಚುವರಿ ಕಸದ ಲಾರಿಗಳು: ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಲಾರಿಗಳಿಗೆ ತಡೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಂಕಳಾದ ಬಳಿಯ ಬೆಂಗಳೂರು ಕಸದ ವಿಲೇವಾರಿ ಘಟಕ ಎಂಎಸ್ ಜಿಪಿ ಘಟಕಕ್ಕೆ ಮಂಗಳವಾರ ಹೆಚ್ಚುವರಿ ಕಸದ ಲಾರಿಗಳು…

7 hours ago

40 ಸಾವಿರ ಲಂಚ ಪಡೆಯುವಾಗ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ.!

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಶಿವಮೊಗ್ಗ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು…

8 hours ago

Accident Update: ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ‌ ಪ್ರಕರಣ: ಬೈಕ್ ಸವಾರ ಸಾವು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಸುಮಾರು…

8 hours ago

ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ ಸುಮಾರು…

8 hours ago

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಟ

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಶಿಕ್ಷಣ…

11 hours ago

ಗೀತಂ ಯೂನಿವರ್ಸಿಟಿಯಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ: ಸ್ಥಳಕ್ಕೆ ಎಸ್ಪಿ‌ ಚಂದ್ರಕಾಂತ್ ಭೇಟಿ, ಪರಿಶೀಲನೆ, ಪ್ರತಿಕ್ರಿಯೆ

ಆಕೆ ತಂದೆ ತಾಯಿಗೆ ಇದ್ದ ಏಕೈಕ‌ ಮಗಳು. ಹಾಗಾಗಿ ತಂದೆ ತಾಯಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ‌. ಮಗಳು ಚೆನ್ನಾಗಿ…

12 hours ago