ಮಂಗಳೂರಿನ ಸಸಿಹಿತ್ತಲಿನಲ್ಲಿ ಮೊಟ್ಟಮೊದಲ ಬಾರಿಗೆ ಮೊಟ್ಟೆ ಗೂಡು ಮಾಡಿದ್ದ ಅಪರೂಪದ ಆಲಿವ್ ರಿಡ್ಲಿ ಆಮೆಗಳು ಮೊಟ್ಟೆಯೊಡೆದು ಮರಿಯಾಗಿವೆ. 113 ಮೊಟ್ಟೆಗಳ ಪೈಕಿ 88 ಮರಿಗಳು ಸಮುದ್ರಕ್ಕೆ ಸೇರಿದವು. ನಿರಂತರ ನಿಗಾವಹಿಸಿ ಇಂದು ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಿದ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ.
ಆಲಿವ್ ರಿಡ್ಲಿ ಆಮೆಗಳನ್ನ ಸಾಮಾನ್ಯವಾಗಿ ಪೆಸಿಫಿಕ್ ರಿಡ್ಲಿ ಸಮುದ್ರ ಆಮೆಗಳು ಎಂದೂ ಕರೆಯಲಾಗುತ್ತದೆ, ಇದು ಚೆಲೋನಿಡೆ ಜಾತಿಯ ಕುಟುಂಬಕ್ಕೆ ಸೇರಿದೆ ಎನ್ನಲಾಗಿದೆ.
ಆಲಿವ್ ರಿಡ್ಲಿ ಆಮೆಗಳು ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಉಷ್ಣವಲಯದ ಪ್ರದೇಶಗಳಲ್ಲಿ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ, ಅವು ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕರಾವಳಿಯಲ್ಲಿ ಕಂಡುಬರುತ್ತವೆ.
ಕರ್ನಾಟಕದ ಕಡಲತೀರ ಪ್ರದೇಶದಲ್ಲಿ ಮೂರು ಪ್ರಬೇಧದ ಆಮೆಗಳನ್ನ ನಾವು ಕಾಣಬಹುದಾಗಿದೆ. ಗ್ರೀನ್ ಟರ್ಟಲ್, ಹಾಕ್ ಬಿಲ್ಡ್, ಆಲಿವ್ ರಿಡ್ಲೆ ಹೀಗೆ ಮೂರು ಪ್ರಬೇಧಗಳಿವೆ.
ಇದರಲ್ಲಿ ಆಲಿವ್ ರಿಡ್ಲಿ ಆಮೆಯು ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನು ತನ್ನ ಸಂತಾನವೃದ್ಧಿ ಸ್ಥಳವಾಗಿ ಆರಿಸಿಕೊಂಡಿದೆ. ಮುಖ್ಯವಾಗಿ ಈ ಆಮೆಗಳು ಜನವರಿಯಿಂದ ಮಾರ್ಚ್ ವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಹುಣ್ಣಿಮೆಯ ಬೆಳಕಲ್ಲಿ ನಿಶ್ಯಬ್ಧ ಕಡಲತೀರದ ಪ್ರದೇಶಕ್ಕೆ ಬಂದು ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮತ್ತೆ ಗೂಡನ್ನು ಮುಚ್ಚಿ ಸಮುದ್ರಕ್ಕೆ ವಾಪಸಾಗುತ್ತಾ ಬಂದ ದಾರಿಯನ್ನೇ ಅಳಿಸಿಬಿಡುತ್ತವೆ.
ಈ ಆಮೆಗಳ ಪ್ರಾಮುಖ್ಯತೆ ಎಂದರೆ, ಅವು ಸಮುದ್ರದ ಆಹಾರ ಸರಪಳಿಯನ್ನು ಭದ್ರಪಡಿಸುತ್ತವೆ. ಅನುಪಯುಕ್ತ ಜೆಲ್ಲಿ ಮೀನುಗಳನ್ನು ತಿನ್ನುವುದರಿಂದ ಮೀನುಗಾರರಿಗೆ ಮೀನು ಸಂತಾನೋತ್ಪತ್ತಿಯಲ್ಲಿ ಬಹಳ ಉಪಯುಕ್ತ ಪಾತ್ರವನ್ನು ವಹಿಸುತ್ತವೆ.
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…