ಭಾರತದಲ್ಲೂ ಪಿಕಲ್‌ಬಾಲ್‌ ಆಟವನ್ನು ಜನಪ್ರಿಯಗೊಳಿಸಲು ಆಲ್‌ ಇಂಡಿಯಾ ಪಿಕಲ್‌ಬಾಲ್‌ ಅಸೋಸಿಯೇಷನ್‌ನೊಂದಿಗೆ ಸಹಯೋಗ

ಬೆಂಗಳೂರು: ವಿಶ್ವದೆಲ್ಲೆಡೆ ಹೆಚ್ಚು ಚಾಲ್ತಿಯಲ್ಲಿರುವ “ಪಿಕಲ್‌ಬಾಲ್‌” ಆಟವನ್ನು ಭಾರತದಲ್ಲೂ ಪ್ರಸಿದ್ಧಿಗೆ ತರುವ ಉದ್ದೇಶದಿಂದ ಆಲ್‌ ಇಂಡಿಯಾ ಪಿಕಲ್‌ಬಾಲ್‌ ಅಸೋಸಿಯೇಷನ್‌ ಐಟಿಸಿ ಅವರ “ಬಿಂಗೋ” ತಿಂಡಿಯೊಂದಿಗೆ ಸಹಯೋಗತ್ವವನ್ನು ಘೋಷಿಸಿದೆ.

ಬಿಂಗೊ ಸಹಭಾಗಿತ್ವದಲ್ಲಿ “ವಿಶ್ವ ಪಿಕಲ್‌ಬಾಲ್‌ ಚಾಂಪಿಯನ್‌ಶಿಪ್‌”ಗೆ ನಟಿ ಮಂದಿರಾ ಬೇಡಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಐಟಿಸಿ ಸ್ನ್ಯಾಕ್ಸ್, ನೂಡಲ್ಸ್ ಮತ್ತು ಪಾಸ್ಟಾ ವಿಭಾಗದ ವಿಪಿ ಸುರೇಶ್‌ ಚಂದ್‌, ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ (WPC), ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದ್ದು, ಈ ಕ್ರೀಡೆಯನ್ನು ಭಾರತದಲ್ಲೂ ಉತ್ತೇಜಿಸಲು ನಾವು ಮುಂದಾಗಿದ್ದೇವೆ.
ಪಿಕಲ್‌ಬಾಲ್‌ ಆಟವು ಈಗಾಗಲೇ 84 ದೇಶಗಳಾದ್ಯಂತ 5 ಮಿಲಿಯನ್ ಆಟಗಾರರನ್ನು ಸೆಳೆದಿದ್ದು, ಶೇ.40ರಷ್ಟು ಮಹಿಳಾ ಆಟಗಾರರೇ ಭಾಗವಹಿಸುತ್ತಿದ್ದಾರೆ.

ಭಾರತದಲ್ಲಿ, ಕಳೆದ ಮೂರು ವರ್ಷಗಳಲ್ಲಿ ಈ ಕ್ರೀಡೆಯ ಸಕ್ರಿಯ ಆಟಗಾರರಲ್ಲಿ ಶೇ.275 ರಷ್ಟು ಬೆಳವಣಿಗೆ ಕಂಡಿದ್ದು, 2028 ರ ವೇಳೆಗೆ ಒಂದು ಮಿಲಿಯನ್ ಸಕ್ರಿಯ ಆಟಗಾರರನ್ನು ಮೀರಿಸುವ ನಿರೀಕ್ಷೆಯಿದೆ. ಪ್ರಸ್ತುತ ಬಿಂಗೋ ಸಹಭಾಗಿತ್ವದಲ್ಲಿ ಈ ಆಟವನ್ನು ಇನ್ನಷ್ಟು ಪ್ರಚಲಿತಗೊಳಿಸಲು 23 ರಾಜ್ಯಗಳ ಎಲ್ಲಾ ಕಾಲೇಜುಗಳ ಪಂದ್ಯಾವಳಿಗಳಲ್ಲಿ ಪಿಕಲ್‌ಬಾಲ್‌ ಆಟವನ್ನು ಪರಿಚಯಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಶಿಕ್ಷಣದ ಸಂದರ್ಭದಿಂದಲೇ ಈ ಆಟದಲ್ಲಿ ನಿರತರಾಗಲು ಹಾಗೂ ಅಭ್ಯಾಸಿಸಲು ಸಹಕಾರಿಯಾಗಲಿದೆ ಎಂದರು.

ಅಖಿಲ ಭಾರತ ಪಿಕಲ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಅರವಿಂದ್ ಪ್ರಭು, ನಟ ಅಲಿ ಫಜಲ್ ಮತ್ತಿತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

9 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

19 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

1 day ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

1 day ago