ರಾಜ್ಯದಲ್ಲಿ ಮದುವೆಗೆ ಹೆಣ್ಣು ಸಿಗದೆ ಯುವಕರು ಪಾದಯಾತ್ರೆ, ಹರಕೆಗಳ ಮೊರೆ ಹೋಗುತ್ತಿರುವುದು ಹೊಸತೇನಲ್ಲ. ಆದರೆ, ಇದೇ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್‌ವೊಂದು ಯುವಕನಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮದುವೆ ಮಾಡಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.
ತುಮ್ಮಿನಕಟ್ಟಿ ಗ್ರಾಮದ ರವೀಂದ್ರ ಜವಳಿ ಎಂಬ ಯುವಕ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇದನ್ನು ತಿಳಿದ ಬ್ರೋಕರ್, ರೇಖಾ ಎಂಬಾಕೆಯನ್ನು ಪರಿಚಯಿಸಿದ್ದಾರೆ. ರೇಖಾ ನೋಡಲು ಲಕ್ಷಣವಾಗಿದ್ದಾಳೆಂದು ನಂಬಿದ ರವೀಂದ್ರ ಮತ್ತು ಅವರ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ನೀಡಿದ್ದಾರೆ.
ಈ ಐನಾತಿ ಲೇಡಿ ಮತ್ತು ಆಕೆಯ ಗ್ಯಾಂಗ್ ಮದುವೆಗೆ ಮುನ್ನವೇ ವಧುದಕ್ಷಣೆಯ ಹೆಸರಿನಲ್ಲಿ ರವೀಂದ್ರ ಅವರಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಅಷ್ಟೇ ಅಲ್ಲದೆ, ವಯಸ್ಸಿನ ವ್ಯತ್ಯಾಸ ತಿಳಿಯಬಾರದೆಂದು ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನೇ ಎಡಿಟ್ ಮಾಡಿ ವಂಚಿಸಿದ್ದರು. ಇಬ್ಬರು ಮಕ್ಕಳ ತಾಯಿಯಾಗಿದ್ದ ರೇಖಾ, ತಾನು ಕನ್ಯೆ ಎಂದು ನಂಬಿಸಿ ರವೀಂದ್ರ ಅವರೊಂದಿಗೆ ವೈವಾಹವಾಗಿದ್ದಾರೆ.
ಮದುವೆಯಾಗಿ ಕೇವಲ ಐದು ದಿನಗಳು ಕಳೆದಿರಲಿಲ್ಲ, ಅಷ್ಟರಲ್ಲೇ ಈ ಯುವತಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಮನೆಗೆ ಬಂದಿದ್ದ ರೇಖಾಳಿಗೆ ಆಕೆಯ ಮಕ್ಕಳು ಫೋನ್ ಮಾಡಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಿದ್ದಾಗ ಬಂದ ಅನುಮಾನದಿಂದ ರವೀಂದ್ರ ರೇಖಾಳನ್ನು ವಿಚಾರಿಸಿದ್ದಾರೆ. ಬಳಿಕ ತನಗೆ ಈಗಾಗಲೇ ಎರಡು-ಮೂರು ಮದುವೆಯಾಗಿರುವುದು ಮತ್ತು ಇಬ್ಬರು ಮಕ್ಕಳಿರುವ ಸತ್ಯವನ್ನು ಆಕೆ ಒಪ್ಪಿಕೊಂಡಿದ್ದಾಳೆ.
ತನ್ನ ಕಳ್ಳಾಟ ಬಯಲಾಗುತ್ತಿದ್ದಂತೆ ರೇಖಾ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಗ್ರಾಮದಿಂದ ಸುಮಾರು 2 ಕಿಲೋಮೀಟರ್ ದೂರದವರೆಗೂ ಓಡಿ ಹೋಗಿದ್ದಾಳೆ. ಆದರೆ ಬಿಡದ ರವೀಂದ್ರ ಮತ್ತು ಗ್ರಾಮಸ್ಥರು ಆಕೆಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸದ್ಯ ಹತಾಶನಾಗಿರುವ ರವೀಂದ್ರ, ಅತ್ತ ಮದುವೆಯೂ ಇಲ್ಲದೆ, ಇತ್ತ ಹಣವೂ ಇಲ್ಲದೆ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಹಲಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…
ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…