ಬ್ಯೂಟಿ ಪಾರ್ಲರ್ ಆಂಟಿಯ ಸ್ಕೆಚ್: ಫೈನಾನ್ಶಿಯರ್ ನಿಂದ ಮುಹೂರ್ತ: ಜಿಮ್ ಟ್ರೈನರ್ ಮರ್ಡರ್: ಮೂವರು ಪರಿಚಿತರ ನಡುವಿನ ಕ್ರೈಂ ಕಹಾನಿ…!

ಬ್ಯೂಟಿ ಪಾರ್ಲರ್ ಆಂಟಿಯ ಮೇಲಿನ ವ್ಯಾಮೋಹಕ್ಕೆ ಬಿದ್ದು ಆಂಟಿಯನ್ನ ಪರಿಚಯ ಮಾಡಿಕೊಟ್ಟ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಅ.25ರ ರಾತ್ರಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಕೋಡಿ ಬಳಿ ನಡೆದಿದೆ.

ಕೆ.ಆರ್.ಪುರಂ ನಿವಾಸಿ ಚೇತನ್ ಹತ್ಯೆಗೊಳಗಾದ ವ್ಯಕ್ತಿ, ಗಂಡನನ್ನ ಬಿಟ್ಟು ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಶೋಭಾ ಎಂಬಾಕೆಯ ಜೊತೆ ಚೇತನ್ ಒಡನಾಟ ಇಟ್ಟಿಕೊಂಡಿದ್ದ, ಚೇತನ್ ಹಾಗೂ ಶೋಭಾ ಕೆಲಕಾಲ ಪ್ರೀತಿಸುತ್ತಿದ್ದರು. ಚೇತನ್ ಒಂದು ದಿನ ತನ್ನ ಗೆಳೆಯನಾದ ಸತೀಶ್ ನನ್ನು ಶೋಭಾಳಿಗೆ ಪರಿಚಯ ಮಾಡಿಕೊಟ್ಟ. ಪರಿಚಯ ಮಾಡಿಕೊಟ್ಟ ತಪ್ಪಿಗೆ ಸತೀಶ್ ನಿಂದಲೇ ಚೇತನ್ ಕೊಲೆಯಾಗಿಟ್ಟ.

ಸ್ನೇಹಿತನನ್ನೇ ಸತೀಶ್ ಕೊಲೆ ಮಾಡಿದ್ದೇಕೆ?

ಶೋಭಾಳಿಗೆ ಸತೀಶ್ ಪರಿಚಯವಾದ ನಂತರ ಚೇತನ್ ಜೊತೆ ಒಡನಾಟ ಕಡಿಮೆ ಮಾಡಿದ್ದಾಳೆ. ಚೇತನ್ ನಿಂದಲೇ ಹಣ ತೆಗೆದುಕೊಂಡು ಸತೀಶ್ ಜೊತೆ ಶೋಭಾ ಸುತ್ತಾಡುತ್ತಿದ್ದಳು. ಇದನ್ನ ಗಮನಿಸಿದ ಚೇತನ್ ಶೋಭಾಗೆ ಕ್ಲಾಸ್ ತೆಗೆದುಕೊಂಡಿದ್ದ.ಈ ಕುರಿತು ಶೋಭಾ ಸತೀಶ್ ಗೆ ದೂರು ನೀಡಿದ್ದಳು. ಆಗ ಹೇಗಾದರೂ ಮಾಡಿ ಚೇತನನ್ನ ಮುಗಿಸಲೇಬೇಕು ಎಂದು ಸತೀಶ್ ಹಾಗೂ ಶೋಭಾ ಪ್ಲಾನ್ ಮಾಡಿ, ಬರ್ತಡೇ ನೆಪದಲ್ಲಿ ಚೇತನನ್ನ ಪಾರ್ಟಿಗೆ ಕರೆದು ಹೊಸಕೋಟೆ ಬಾರ್ ನಲ್ಲಿ ಕಂಠಪೂರ್ತಿ ಕುಡಿಸಿ ಎಣ್ಣೆಮತ್ತಲ್ಲಿ ಹೊಸಕೋಟೆಯಿಂದ ಮಧ್ಯರಾತ್ರಿ ವರ್ತೂರು ಕೋಡಿ ಬಳಿ ಚೇತನ್ ನನ್ನ ಕರೆತಂದು ತಲೆಗೆ ಮಚ್ಚು ಬೀಸಲಾಗಿದೆ.

ಕೊಲೆಯಾದ ನಂತರ ಮೃತದೇಹವನ್ನ ಬಿಸಾಡಿ ಕಾರಲ್ಲಿ ಸತೀಶ್, ಶೋಭಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದಾರೆ. ಮೃತ ಚೇತನ್ ಕುಟುಂಬಸ್ಥರು ಅಕ್ಟೋಬರ್ 24 ರಂದು ಕೆ.ಆರ್.ಪುರಂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಮಾಡಿದ್ದಾರೆ.

ಮೃತ ಚೇತನ್ ನ ಕಾಲ್ ಡೀಟೆಲ್ಸ್ ಪರಿಶೀಲಿಸಿದಾಗ ರೆಕಾರ್ಡ್ಸ್ ನಲ್ಲಿ ಸತೀಶ್ ಹಾಗೂ ಶೋಭಾ ನಡುವಿನ ಫೋನ್ ಕಾಲ್ ವಿವರ ಪತ್ತೆಯಾಗಿದೆ. ಸತೀಶನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಆಂಟಿಯ ಪ್ರೇಮಪ್ರಸಂಗ ಬೆಳಕಿಗೆ ಬಂದಿದೆ.

ಗಂಡನ ಮನೆಯಲ್ಲೂ ಶೋಭಾ ಕಿರಿಕ್

ಕಳೆದ ಎರಡು ವರ್ಷಗಳ ಹಿಂದೆ ಅತ್ತಿಬೆಲೆ ವ್ಯಾಪ್ತಿಯ ಯಡುವನಹಳ್ಳಿಯಲ್ಲಿ ತನ್ನ ಗಂಡ ಹಾಗೂ ಅತ್ತೆಯನ್ನ ಕೊಲೆ ಮಾಡಲು ಇದೇ ಶೋಭಾ ಯತ್ನಿಸಿದ್ದಳು ಎಂಬ ಆರೋಪ ಕೂಡ ಶೋಭಾ ಮೇಲ‌ಎ ಇದೆ. ಗ್ಯಾಸ್ ಸಿಲಿಂಡರ್ ಆನ್ ಮಾಡಿ ಗಂಡ ಅತ್ತೆ ನಿದ್ದೆ ಮಾಡುವ ವೇಳೆ ಮನೆ ಬಾಗಿಲು ಲಾಕ್ ಮಾಡಿ ಹೊರಗೆ ಕೂತಿದ್ದಳಂತೆ. ಅಕ್ಕಪಕ್ಕದವರು ಗ್ಯಾಸ್ ಸ್ಮೆಲ್ ಬರ್ತಿದೆಯೆಂದು ಬಂದು ಮನೆ ಡೋರ್ ಒಪನ್ ಮಾಡಿದ್ದರು‌. ಕಡೆಗೆ ಪೊಲೀಸರ ವಿಚಾರಣೆ ವೇಳೆ ಶೋಭಾ ಕೊಲೆಗೆ ಯತ್ನಿಸಿರೋದು ಗೊತ್ತಾಗಿ ಈ ಹಿಂದೆ ಜೈಲು ಸೇರಿದ್ದಳಂತೆ. ಜೈಲು ಸೇರಿ ಹೊರಬಂದ ನಂತರ ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿಪಾರ್ಲರ್  ಮಾಡಿದ್ದಳು.

ಸದ್ಯ ಸರ್ಜಾಪುರ ಪೊಲೀಸರಿಂದ ಆರೋಪಿಗಳಾದ ಶೋಭ, ಸತೀಶ್ ಹಾಗೂ ಆತನ ಗೆಳೆಯ ಶಶಿ ಬಂಧನವಾಗಿದೆ.

Ramesh Babu

Journalist

Recent Posts

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

14 hours ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

14 hours ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

19 hours ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

20 hours ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

1 day ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

1 day ago