ದೊಡ್ಡಬಳ್ಳಾಪುರ: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಗುಂಡಮಗೆರೆ ಸಮೀಪದಲ್ಲಿ ನಡೆದಿದೆ.
ಮೃತ ಯುವಕನನ್ನು ದೊಡ್ಡಬಳ್ಳಾಪುರ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜು ರಸ್ತೆಯ ಚೈತನ್ಯ ನಗರ ನಿವಾಸಿ ಪುನಿತ್ ಕುಮಾರ್ ಡಿ.ಎಸ್ (27) ಎಂದು ಗುರುತಿಸಲಾಗಿದೆ.
ಮೃತನು ದ್ವಿಚಕ್ರ ವಾಹನದಲ್ಲಿ ಬಂಕೇನಹಳ್ಳಿ ಕಡೆಯಿಂದ ಬರುವ ವೇಳೆ ವಾಬಸಂದ್ರ-ಗುಂಡಮಗೆರೆ ನಡುವಿನ ತಿರುವಿನಲ್ಲಿ ಎದುರು ಬಂದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ ಎಂದು ಪೊಲೀಸರು ಮೂಲಗಳಿಂದ ತಿಳಿದುಬಂದಿದೆ.
ಎದುರು ಬಂದ ಬೈಕ್ ನ್ನು ಪಾರು ಮಾಡಲು ಹೋದ ಕೆಎಸ್ಆರ್ಟಿಸಿ ಬಸ್, ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿದೆ.
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಮಹಿಳೆಯರ ಸುರಕ್ಷತೆ ಹಾಗೂ ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಗೃಹ…
ದೊಡ್ಡಬಳ್ಳಾಪುರ: ವಡ್ಡರಹಳ್ಳಿ ಮತ್ತು ಮಾಕಳಿದುರ್ಗ ರೈಲು ನಿಲ್ದಾಣಗಳ ನಡುವಿನ ಏಳುಕಮಾನು ರೈಲ್ವೆ ಸೇತುವೆ ಸಮೀಪದ ಘಾಟಿ ಗೋಶಾಲೆ ಬಳಿ ರೈಲ್ವೆ…
ಬೆಂಗಳೂರು: ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ…
ದೊಡ್ಡಬಳ್ಳಾಪುರ: ದಾಬಸ್ಪೇಟೆ–ಹೊಸಕೋಟೆ ಹೆದ್ದಾರಿಯ ಕೆಸ್ತೂರು ಗೇಟ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ 70 ವರ್ಷದ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…
ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲ ಎನ್ನುತ್ತಿದ್ದವರಿಗೆ ಈಗ ಉತ್ತರ ನೀಡುವ ಸಮಯ ಬಂದಿದೆ. ತುಮಕೂರಿಗೆ ವಾರದೊಳಗೆ ನೀರು ಹರಿಸಿ, ವರ್ಷಕ್ಕೂ…
ದೊಡ್ಡಬಳ್ಳಾಪುರ: ಮೆಣಸಿನಕಾಯಿ ಬೆಳೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಪ್ಪು ಥ್ರಿಪ್ಸ್ ಕೀಟದ ಬಾಧೆ ಹೆಚ್ಚಾಗುತ್ತಿದ್ದು, ಇದರಿಂದ ಶೇ.60ರಷ್ಟು ಇಳುವರಿ ನಷ್ಟ…