ಬೆಳ್ಳಂಬೆಳಗ್ಗೆ ಹಿಟ್ & ರನ್: ಮುಂಜಾನೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

ಇಂದು ಮುಂಜಾನೆ ತಾಲೂಕಿನ ಕೆಸ್ತೂರು ಗೇಟ್‌ ಬಳಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ.

ವಾಕಿಂಗ್ ಮಾಡಲೆಂದು ಬಂದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಹಾರಿ ಡಿವೈಡರ್‌ ಮೇಲೆ‌ ಬಿದ್ದಿದ್ದು, ತಲೆಗೆ ತೀವ್ರ‌ ಪೆಟ್ಟಾಗಿ ರಕ್ತಸ್ರಾವದಿಂದ ವ್ಯಕ್ತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಮೃತ ದುರ್ದೈವಿಯನ್ನು ಕೆಸ್ತೂರು ನಿವಾಸಿ 63 ವರ್ಷದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ramesh Babu

Journalist

Recent Posts

ಎಲ್‌ಪಿಜಿ ಸಿಲಿಂಡರ್ ಗಾಗಿ ಮುಗಿಬಿದ್ದ ಜನ

ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿರುವ ಹಿನ್ನೆಲೆ ದೇಶಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಪ್ರಸ್ತುತ…

34 minutes ago

ಯುಗಾದಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಇಸ್ಪೀಟ್ ಆಟ:‌ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ: ಠಾಣೆಗೆ ಕರೆತಂದಿದ್ದವರ ಪೈಕಿ ಕಾಂತರಾಜು ಅನುಮಾನಾಸ್ಪದ ಸಾವು: ಠಾಣೆಯಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಇಸ್ಪೀಟ್ ಆಡುತ್ತಿದ್ದಾರೆಂದು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಹಿನ್ನೆಲೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ…

6 hours ago

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

1 day ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

1 day ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

1 day ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

1 day ago