Categories: ಲೇಖನ

ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ……..

ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ.

ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ, ರೂಮಿ, ಚಾಣಕ್ಯ, ಗಿಬ್ರಾನ್, ಕಾರ್ಲ್ ಮಾರ್ಕ್ಸ್, ಗಾಲಿಬ್, ಸ್ವಾಮಿ ವಿವೇಕಾನಂದ, ಪರಮಹಂಸ, ಸರ್ವಜ್ಞ, ಭಗವದ್ಗೀತೆ, ಆಚಾರ್ಯತ್ರಯರು, ಖುರಾನ್, ಬೈಬಲ್, ಶರಣರು, ದಾಸರು, ಸೂಫಿ ಸಂತರು ಹೀಗೆ ಅನೇಕರ ವಾಣಿಗಳು ನಮಗಿಷ್ಟವಾಗಿವೆ ಎಂದು ಹಾಕುತ್ತೇವೆ.

ಒಂದು ಹಂತಕ್ಕೆ ಇದೆಲ್ಲಾ ಒಳ್ಳೆಯದೆ. ಆದರೆ ಈ ಸಂದೇಶಗಳನ್ನು ಮತ್ತು ಅದನ್ನು ಹೇಳಿರುವವರನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಅದನ್ನು ಹೇಗೆ ಅಳವಡಿಸಿಕೊಂಡಿದ್ದೇವೆ, ಅದರ ಸಾಮಾಜಿಕ ಪ್ರಸ್ತುತತೆ ಏನು ಎಂಬುದನ್ನು ಅದರೊಂದಿಗೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಒಣ ಸಂದೇಶವಾಗುತ್ತದೆ.

ಏಕೆಂದರೆ ಕಾಲದ ನಿರಂತರತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತವೆ. ಕೆಲವು ಈಗಲೂ ಪ್ರಸ್ತುತವಾದರೆ, ಕೆಲವು ಸವಕಲು ನಾಣ್ಯಗಳು.
ಮತ್ತೆ ಕೆಲವು ಬದಲಾವಣೆಯಾಗಬೇಕಿದ್ದರೆ, ಇನ್ನೊಂದಿಷ್ಟು ಅಪಾಯಕಾರಿಯೂ ಹೌದು.

ಈ ಎಲ್ಲಾ ವ್ಯಕ್ತಿಗಳು ತಾವು ಜೀವಿಸಿದ್ದ ಕಾಲದ ಸ್ಥಿತಿಗತಿಗೆ ಅನುಗುಣವಾಗಿ ಒಂದಷ್ಟು ದೂರದೃಷಿಯಿಂದ ತಮ್ಮ ಚಿಂತನೆಗಳನ್ನು ದಾಖಲಿಸಿರುತ್ತಾರೆ. ಅದು ಈಗ ಎಷ್ಟರ ಮಟ್ಟಿಗೆ ಅಳವಡಿಕೆಗೆ ಯೋಗ್ಯ ಎಂದು ಯೋಚಿಸಬೇಕಾಗುತ್ತದೆ.

ಉದಾಹರಣೆಗೆ ಆಗ ರಾಜಪ್ರಭುತ್ವ ಈಗ ಪ್ರಜಾಪ್ರಭುತ್ವ, ಆಗ ಕಾಲ್ನಡಿಗೆ ಅಥವಾ ಕುದುರೆ.
ಈಗ ವಿಮಾನ, ಆಗ ಪಾರಿವಾಳ ಇಲ್ಲ ಧೂತ ಸಂದೇಶ ವಾಹಕ, ಈಗ ಇಂಟರ್ ನೆಟ್ – ಮೊಬೈಲ್ ( ಸ್ವಲ್ಪ Techniques ಗೊತ್ತಾದರೆ Fake Photoshop! !??). ಆಗ ಜಾತಿಗಳ ಶ್ರೇಷ್ಠತೆ ಈಗ ಸ್ವಲ್ಪ ಶಿಥಿಲತೆ, ಆಗ ಪ್ರಾಮಾಣಿಕತೆ ಈಗ ಭ್ರಷ್ಟತೆ, ಆಗ ಹೆಣ್ಣು ಎರಡನೇ ದರ್ಜೆ ಈಗ ಆಕೆಯೇ ಎಲ್ಲದರಲ್ಲೂ First Class ( ? ), ಆಗ ದೇವರು ದೊಡ್ಡವನು ಈಗ ಹಣ ಅಧಿಕಾರ ಇದ್ದವನೇ ದೇವರು ………….ಹೀಗೆ ನಾನಾ ರೀತಿಯ ಬದಲಾವಣೆಗಳಾಗಿವೆ.

ಆದ್ದರಿಂದ ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳದೆ, ಚಿನ್ನದ ಸೂಜಿಯೆಂದು ಕಣ್ಣಿಗೆ ಚುಚ್ಚಿಕೊಳ್ಳದೆ ಈಗಿರುವ ನಿಮ್ಮ ಜ್ಞಾನದ ಮಿತಿಯಲ್ಲಿ ಒಂದಷ್ಟು ವಿವೇಚನೆಯಿಂದ ನಿಮಗೆ ಸರಿ ಎಂಬುದನ್ನು ಸ್ವೀಕರಿಸಿ. ಕೆಲವನ್ನು ಬದಲಾವಣೆ ಮಾಡಿಕೊಳ್ಳಿ ಇಷ್ಟವಿಲ್ಲದಿದ್ದರೆ ತಿರಸ್ಕರಿಸಿ.

ಅನುಭವದ ಆಧಾರದ ಮೇಲೆ ಎಲ್ಲಾ ಉತ್ತಮ ಅಂಶಗಳನ್ನು ಸೇರಿಸಿ ಹೊಸ ಸಾಮಾಜಿಕ ಮನೋಸ್ಥಿತಿ ನಿರ್ಮಿಸಿಕೊಳ್ಳೋಣ. ಆ ಕಾರಣಕ್ಕಾಗಿ ಮಹಾತ್ಮರ Quote ಗಳಿಗೆ ನಿಮ್ಮ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ. ಏಕೆಂದರೆ ಈ ಕ್ಷಣದಲ್ಲಿ ನಾವು ಜೀವಿಸುತ್ತಿರುವುದು ನಿಮ್ಮೊಂದಿಗೆ ಹೊರತು ಮಹಾತ್ಮರ ಒಡನಾಟದಲ್ಲಿ ಅಲ್ಲ ಆದರೆ ಅವರ ನೆನಪುಗಳೊದಿಗೆ ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಯುವಕರು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು- ವಕೀಲ ಬಿ. ಸುರೇಶ್ ಗೌಡ

ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್…

3 hours ago

ಕದನ ವಿರಾಮ…., ಕೊನೆಗೆ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ

ಕದನ ವಿರಾಮ...... ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ, ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ…

4 hours ago

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

14 hours ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

14 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

14 hours ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

18 hours ago