ಬೆಂಗಳೂರಿನಲ್ಲಿ ಇಂದಿನಿಂದ 6ನೇ ಆವೃತ್ತಿಯ ಅಂತಾರಾಜ್ಯ ಹಾಕಿ ಕಪ್‌ ಪಂದ್ಯಾವಳಿ ಆರಂಭ

ಬೆಂಗಳೂರು: ಬಹು ನಿರೀಕ್ಷಿತ 6ನೇ ಆವೃತ್ತಿಯ “ಚೈರೋಸ್ ಭೀಮಯ್ಯ ಹಾಕಿ ಕಪ್ 2025” ಇಂದಿನಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಹಾಕಿ ಅರೆನಾನಲ್ಲಿ ನಡೆಯಲಿದೆ.

ಕರ್ನಾಟಕ ಹಾಕಿ ಅಸೋಸಿಯೇಷನ್‌ ಹಾಗೂ ಕೂರ್ಗ್ ಚಾಲೆಂಜರ್ಸ್ ಚಿಕ್‌ಪೆಟ್ ಅಸೋಸಿಯೇಷನ್ (CCCA) ಸಹಯೋಗದಲ್ಲಿ ಈ ಅಂತರ್‌-ರಾಜ್ಯ ಪಂದ್ಯಾವಳಿ 5-ಎ-ಸೈಡ್ ಮಾದರಿಯಲ್ಲಿ ಭಾರತೀಯ ಹಾಕಿ ಪ್ರದರ್ಶನ ನಡೆಯಲಿದೆ.

ಹಾಕಿ ಕಪ್‌ ಪಂದ್ಯಾವಳಿಯಲ್ಲಿ ಒಟ್ಟು 180 ಆಟಗಾರರನ್ನೊಳಗೊಂಡ ಒಟ್ಟು 20 ತಂಡಗಳು ಭಾಗವಹಿಸಲಿದ್ದಾರೆ.
ಇಂದಿನಿಂದ ಜನವರಿ ೧೨ರವರೆಗೆ ಪಂದ್ಯಾವಳಿ ನಡೆಯಲಿದ್ದು, ಭಾನುವಾರ ವಿಜೇತರನ್ನು ಘೋಷಿಸಲಾಗುತ್ತದೆ.

ಮಾಜಿ ಭಾರತೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ವಿ.ಎಸ್. ವಿನಯ, ಅಮರ್ ಐಯಮ್ಮ, ನಿತಿನ್ ತಿಮ್ಮಯ್ಯ ಮತ್ತು ನಿಕ್ಕಿನ್ ತಿಮ್ಮಯ್ಯ ಅವರು ಸಹ ಭಾಗವಹಿಸಲಿದ್ದಾರೆ.

ಜನವರಿ 12 ರಂದು ನಡೆಯುವ ಅಂತಿಮ ಸುತ್ತು ನಡೆಯಲಿದ್ದು, ಬಳಿಕ ವಿಜೇತ ತಂಡ ಪದ್ಮಶ್ರೀ ಮತ್ತು ಮಾಜಿ ಭಾರತೀಯ ಹಾಕಿ ಆಟಗಾರ ಎಂ.ಪಿ. ಗಣೇಶ್ ಹಾಗೂ ಧನರಾಜ್‌ ಪಿಳ್ಳೈ ವಿತರಿಸಲಿದ್ದಾರೆ.

ಸಂಘಟಕರನ್ನು ಪ್ರತಿನಿಧಿಸಿದ ಸಿಸಿಸಿಎ ಅಧ್ಯಕ್ಷ ಶ್ರೀ ಕೆ.ಡಿ. ಗಣಪತಿ ಮಾತನಾಡಿ, ಜನವರಿ 10 ರಿಂದ 12 ರವರೆಗೆ ಬೆಂಗಳೂರಿನಲ್ಲಿ 5-ಎ-ಸೈಡ್ ಚೇರೋಸ್ ಭೀಮಯ್ಯ ಹಾಕಿ ಕಪ್‌ನ 6 ನೇ ಆವೃತ್ತಿ ಘೋಷಿಸಲಾಗಿದೆ, ಇದಕ್ಕೆ ಕ್ಯೂನೆಟ್‌ ಅವರ ಪ್ರಾಯೋಜಕ್ವ ನೀಡಿದ್ದು, ಸ್ಪರ್ಧೆ ನಡೆಸಲು ಉತ್ಸಾಹ ಹೆಚ್ಚಿದೆ. ಈ ಪಂದ್ಯಾವಳಿಯು ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಬೆಂಬಲಿಸಲು ಮತ್ತು ಭಾರತದಾದ್ಯಂತದ ಆಟಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ನಮ್ಮ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಈ ಅದ್ಭುತ ಕ್ರೀಡೆಯ ಬೆಳವಣಿಗೆ ಮತ್ತು ಗುರುತಿಸುವಿಕೆಯನ್ನು ಉತ್ತೇಜಿಸುತ್ತದೆ.

ಕ್ಯೂನೆಟ್‌ ಇಂಡಿಯಾ ವಲಯದ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ನಿಶ್ಚಲ್ ಸಿ ಮಾತನಾಡಿ, ಭಾರತೀಯ ನೆಲದ ದೇಸಿ ಆಟವಾದ ಹಾಕಿ ಆಟವನ್ನು ಬೆಳೆಸುವ ಅಗತ್ಯವಿದೆ. ಹೀಗಾಗಿ ಹಾಕಿ ಆಟಕ್ಕೆ ನಮ್ಮ ಪ್ರಾಯೋಜಿಕ್ವತ ಸದಾ ಇರಲಿದೆ. ಹಾಕಿ ಆಟವನ್ನು ಜಾಗತಿಕವಾಗಿ ಪ್ರಸಿದ್ಧಿ ಆಟವನ್ನಾಗಿ ಮಾಡುವತ್ತ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

12 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

17 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

21 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago