ಬುಲೆಟ್ ರಘು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ಪ್ರಮುಖ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಎ1 ಗೌತಮ್ ಸಿ.ಪಿ @ ಗೌತು(32), ಎ2 ಮಹೇಶ್ ಬಿ @ ಚಿಟ್ಟೆ(26), ಎ3 ಅನಿಲ್ ಕುಮಾರ್ ಎಚ್ @ ಅನಿ(32) ಬಂಧಿತ ಆರೋಪಿಗಳು.
ಘಟನೆ ವಿವರ
ಸೆ.25ರಾತ್ರಿ ಬುಲೆಟ್ ರಘು ಭೀಕರವಾಗಿ ಕೊಲೆಯಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸಮೀಪವಿರುವ ಹೋಟೆಲ್ ಜೆಪಿ ಪ್ಯಾಲೆಸ್ ಬಳಿ ನಡೆದಿತ್ತು.
ಮೃತ ರಘು ತನ್ನ ತಾಯಿಯ ಯೋಗಕ್ಷೇಮ ವಿಚಾರಿಸಲು ಬೆಳಗಾವಿಯಿಂದ ಬಂದವನು ದೊಡ್ಡಬಳ್ಳಾಪುರದಲ್ಲಿ ಬೀದಿ ಹೆಣವಾಗಿದ್ದ.
ಸೆ.24ರ ಸಂಜೆ ಸುಮಾರು 6 ಗಂಟೆಯಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಸ್ನೇಹಿತರ ಪಾರ್ಟಿ ಇದೆ, ಅಲ್ಲಿಗೆ ಹೋಗಿ ಬರುತ್ತೇನೆ ಎಂದು ತನ್ನ ತಾಯಿಗೆ ಹೇಳಿ ಹೋಗಿದ್ದವನು ಕೆಲವೇ ಗಂಟೆಗಳಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದ.
ರಘುನನ್ನು ಪೊಲೀಸ್ ಪುಟ್ಟರಾಜು ಮಗನಾದ ಗೌತಮ್ ಎಂಬ ವ್ಯಕ್ತಿ ಕೊಲೆ ಮಾಡಿರಬಹುದು ಎಂದು ಅನುಮಾನಿಸಿದ ರಘು ಪೋಷಕರು ಹಾಗೂ ಸಂಬಂಧಿಕರು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೌತಮ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿ ಕೊನೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೂ ಮುನ್ನ….
ಈ ಬುಲೆಟ್ ರಘು ತನ್ನ ತಾಯಿಯ ಯೋಗ ಕ್ಷೇಮ ವಿಚಾರಿಸಿಕೊಂಡು ಬಂದ ದಾರಿ ಹಿಡಿದಿದ್ದರೆ ಏನು ಆಗುತ್ತಿರಲಿಲ್ಲ.
ಸುಮಾರು ಎರಡು ವರ್ಷಗಳ ಹಿಂದೆ ರಘು ಮತ್ತು ಪೊಲೀಸ್ ಪುಟ್ಟರಾಜು ಮಗನಾದ ಗೌತಮ್ ಎಂಬುವರಿಗೆ ಜಗಳ ನಡೆದಿತ್ತು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಕೋರ್ಟಿನಲ್ಲಿ ಇತ್ಯರ್ಥವಾಗಿತ್ತು.
ಸೆ.24ರ ಬೆಳಗ್ಗೆ ಈ ರಘು ತನ್ನ ಹಳೇ ಕಿರಿಕ್ ದೋಸ್ತ್ ಗೌತಮ್ ಜೊತೆ ಮತ್ತೆ ಕ್ಯಾತೆ ತೆಗೆಯಲು ಫೋನ್ ಕಾಲ್ ಮಾಡುತ್ತಾನೆ. ಗೌತಮ್ ಗೆ ಫೋನ್ ಮಾಡಿ ಭೇಟಿಯಾಗು ಎಂದು ಹೇಳುತ್ತಾನೆ. ರಘು ಫೋನ್ ಗೆ ಕ್ಯಾರೆ ಎನ್ನದೇ ಗೌತಮ್ ಹುಡುಗರ ಜೊತೆ ಕುಡಿಯಲು ಹೋಗುತ್ತಾನೆ. ಗೌತಮ್ ಭೇಟಿಯಾಗದ ಕಾರಣ ಸಂಜೆ ಮತ್ತೊಮ್ಮೆ ಫೋನ್ ಮಾಡಿ ಭೇಟಿಯಾಗು ಅಂತಾ ರಘು ಹೇಳುತ್ತಾನೆ.
ಆಗ ಗೌತಮ್ ತನ್ನ ಸ್ನೇಹಿತರಾದ ಅನಿಲ್ ಕುಮಾರ್, ಮಹೇಶ, ಗೌತಮ್ ದೊಡ್ಡಮ್ಮ ದೇವಾಸ್ಥಾನ ಸಮೀಪದ ಖಾಲಿ ಜಾಗದಲ್ಲಿ ಸಂಜೆ ಕುಡಿಯುತ್ತಾ ಕುಳಿತ್ತಿದ್ದರು.
ಬುಲೆಟ್ ರಘು ಗೌತಮ್ ಗೆ ಯಾವಾಗ ಪದೇ ಪದೇ ಫೋನ್ ಮಾಡಿ ಮಾಡಿ ಸಿಗು ಸಿಗು ಅಂತಾ ಹೇಳೋದಕ್ಕೆ ಶುರು ಮಾಡಿದ್ನೋ ಆವಾಗ ಗೌತಮ್ ಗೆ ಸಿಟ್ಟೆದ್ದು ಇದಕ್ಕೆ ಅಂತ್ಯವಾಡಬೇಕೆಂದು ಮೈಂಡ್ ನಲ್ಲಿ ಫಿಕ್ಸ್ ಆಗ್ತಾನೆ….
ಆಗ ರಘುನಾ ಭೇಟಿ ಮಾಡುವುದಕ್ಕೆ ಗೌತಮ್ & ಗ್ಯಾಂಗ್ ಅಲ್ಲಿಂದ ಹೊರಡುತ್ತದೆ. ರಾತ್ರಿ ಸುಮಾರು 10:45ರಲ್ಲಿ ರೈಲ್ವೆ ನಿಲ್ದಾಣ ಸಮೀಪದ ಅಲಂಕಾರ್ ಡಾಬಾದಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ರಘು ಜೊತೆ ಗೌತಮ್ ಮತ್ತು ಸಂಗಡಿಗರು ಎಣ್ಣೆ ಹಾಕ್ತಾರೆ. ಮತ್ತೆ ಅಲ್ಲಿಂದ ಒಂದೇ ಬೈಕಿನಲ್ಲಿ ನಾಲ್ಕು ಜನ ಬಾಶೆಟ್ಟಿಹಳ್ಳಿ ಬಳಿ ಇರುವ ಹೋಟೆಲ್ ಜೆಪಿ ಪ್ಯಾಲೆಸ್ ನಲ್ಲಿ ಮತ್ತೆ ಎಣ್ಣೆ ಹಾಕಲು ಹೋಗ್ತಾರೆ. ಅಲ್ಲಿ ಶುರುವಾಗುತ್ತೆ ನೋಡಿ ರಘು ಮತ್ತು ಗೌತಮ್, ಆತನ ಸ್ನೇಹಿತರ ನಡುವೆ ಗಲಾಟೆ. ಎಣ್ಣೆ ಹೊಡೆಯುತ್ತಿರುವಾಗಲೆ ಸ್ನೇಹಿತರ ನಡುವೆ ಯಾವುದೋ ವಿಚಾರಕ್ಕೆ ಕಲಹ ಶುರುವಾಗಿದ್ದು, ಅದೇ ವಿಚಾರವಾಗಿ ಮಾತಿನ ಚಕಮಕಿ ಬೆಳೆಸಿಕೊಂಡಿದ್ದಾರೆ. ಆದ್ರೆ ಸುಖಾ ಸುಮ್ಮನೆ ಶುರುವಾದ ಮಾತಿನ ಜಗಳ ನೋಡ ನೋಡ್ತಿದ್ದಂತೆ ವಿಕೋಪಕ್ಕೆ ತಿರುಗಿದ್ದು ರಘು ಮತ್ತು ಸ್ನೇಹಿತರ ನಡುವೆ ಗಲಾಟೆ ನಡೆದಿದೆ.
ಮೊದಲು ಕ್ಯಾಶ್ ಕೌಂಟರ್ ಬಳಿ ಗೌತಮ್ ಸ್ನೇಹಿತನಾದ ಅನಿಲ್ ಕುಮಾರ್ ಗೆ ರಘು ಹೊಡೆಯುತ್ತಾನೆ. ನಂತರ ತಿರುಗಿಸಿ ರಘುಗೆ ಅನಿಲ್ ಕುಮಾರ್ ಹೊಡೆಯುತ್ತಾನೆ. ಹೊಡೆದಾಟ ಬಡೆದಾಟ ಜೋರಾಗಿ ಶುರುವಾಗುತ್ತದೆ. ಯಾವಾಗ ರಘು ಮೇಲೆ ಮೂರು ಜನ ಬೀಳಲು ಮುಂದಾಗುತ್ತಾರೆ ಆಗ ರಘು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾನೆ. ರಘು ಓಡಿ ಹೋಗುವುದನ್ನು ತಡೆಯುವಂತೆ ಅನಿಲ್ ಕುಮಾರನು ಮಹೇಶ್ ಗೆ ಹೇಳುತ್ತಾನೆ. ಆಗ ರಘುನಾ ಮಹೇಶ್ ತಡೆದಾಗ ರಘು ರಸ್ತೆ ಮೇಲೆ ಆಯಾತಪ್ಪಿ ಕೆಳಗೆ ಬೀಳುತ್ತಾನೆ. ಬಿದ್ದ ಕೂಡಲೇ ಮಹೇಶ್ ರಘುಗೆ ಕಲ್ಲಿನಿಂದ ಹೊಡೆಯುತ್ತಾನೆ. ನಂತರ ಗೌತಮ್ ಅಲ್ಲಿಗೆ ಎಂಟ್ರಿಯಾಗಿ ಪಕ್ಕದಲ್ಲೇ ಇದ್ದ ಹಾಲೋ ಬ್ರಿಕ್ಸ್ ನಿಂದ ರಘುವಿನ ತಲೆ ಮೇಲೆ ಎತ್ತಿ ಹಾಕುತ್ತಾನೆ. ಆಗ ರಘು ತೀವ್ರ ರಕ್ತಸ್ರಾವದಿಂದ ನರಳಿ ನರಳಿ ಸಾಯುತ್ತಾನೆ…
ಕೊಲೆ ನಂತರ….
ರಘುನನ್ನು ಸಾಯಿಸಿದ ನಂತರ ಮೂರು ಜನ ಕೊಲೆ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಎಸ್ಕೇಪ್ ಆದವರು, ಗೌತಮ್ ರಾಜಾನುಕುಂಟೆಯಲ್ಲಿ ಬಾಡಿಗೆ ಮನೆ ಮಾಡಿರುತ್ತಾನೆ. ಆ ಬಾಡಿಗೆ ಮನೆಗೆ ಹೋಗಿ ಅಲ್ಲಿ ಮಲಗಿ ಬೆಳಗಿನ ಜಾವ ಸುಮಾರು ಐದು ಗಂಟೆಗೆ ಮನೆ ಖಾಲಿ ಮಾಡಿ ಮೈಸೂರಿಗೆ ಹೋಗುತ್ತಾರೆ. ಅಲ್ಲಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗಿ ದೇವರ ದರ್ಶನ ಮಾಡಿ ಕೊಳ್ಳೆಗಾಲಕ್ಕೆ ಹೋಗುತ್ತಾರೆ. ನಂತರ ಅಲ್ಲಿಂದ ಮತ್ತೆ ಸೆ.29ರಂದು ಬೆಂಗಳೂರಿಗೆ ವಾಪಸ್ ಬರುವಾಗ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ….
ಮೃತ ರಘು ಅಲಿಯಾಸ್ ಬುಲೆಟ್ ರಘು ಹಿನ್ನೆಲೆ….
ಕಳೆದ ಏಳು ವರ್ಷಗಳಿಂದೆ ಪ್ರೀತಿಸಿ ಮದುವೆಯಾಗಿದ್ದು ಪ್ರೀತಿಸಿದವಳ ಜೊತೆಯಲ್ಲೆ ಕೈಹಿಡಿದು ಬೆಳಗಾವಿಯಲ್ಲಿ ಹೋಟೆಲ್ ಬಿಸಿನೆಸ್ ಸ್ಟಾರ್ಟ್ ಮಾಡಿ ಸೆಟ್ಲ್ ಆಗಿದ್ದ. ಇವರಿಗೆ ಎರಡು ವರ್ಷದ ಒಂದು ಗಂಡು ಮಗುವಿರುತ್ತೆ. ಬೆಳಗಾವಿಯಿಂದ ಬಂದು ದೊಡ್ಡಬಳ್ಳಾಪುರದಲ್ಲಿ ದುರಂತ ಅಂತ್ಯ ಕಂಡಿದ್ದಾನೆ.
ಒಟ್ಟಾರೆ, ತಾನಾಯಿತು ತನ್ನ ಕುಟುಂಬವಾಯಿತು ಅಂತ ಕುಟುಂಬ ಸಮೇತ ಬೆಳಗಾಂ ನಲ್ಲಿ ಸೆಟ್ಲ್ ಆಗಿದ್ದವನು ಹಳೇ ಸ್ನೇಹಿತರ ಸಹವಾಸ ಮಾಡಿ ದುರಂತ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನೂ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ (ಎಂ.ಪಿ.ಆರ್.ಎ.ಸಿ.ಎಸ್.) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ…
ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು…
ಬೆಂಗಳೂರು: ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ಹೂವಿನ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಾರಂಭಿಸಿದೆ. ರಾಜ್ಯದಲ್ಲಿ ಅನಿರೀಕ್ಷಿತ ಬರ,…
ದೊಡ್ಡಬಳ್ಳಾಪುರ: ಟೊಮೆಟೊ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಕೂಗೇನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗ್ಗೆ…
ಸ್ವಾತಂತ್ರ್ಯ........ ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ...... ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ…
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಿರುವ 'ಕುವೆಂಪು ಥೀಮ್ ಪಾರ್ಕ್'ಅನ್ನು…