ಬಿ.ಸಿ ಆನಂದ್ ಕಾಂಗ್ರೆಸ್ ಭಿಕ್ಷೆ: ನಾವಲ್ಲ ಅಡಾ**ಸ್: ಬಿ.ಸಿ ಆನಂದ್ ಡಬಲ್ ಅಡಾ**ಸ್- ಮಾಜಿ ಶಾಸಕ‌ ಟಿ.ವೆಂಕಟರಮಣಯ್ಯ ವಾಗ್ದಾಳಿ

ಕಳೆದ ಬಮೂಲ್ ಚುನಾವಣೆಯಲ್ಲಿ‌ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಚುನಾವಣೆ ಗೆದ್ದನಂತರ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಮಾಧ್ಯಮಗಳ ಮೂಲಕ‌ ತಿಳಿದುಬಂದಿದೆ. ಇದು ಅತ್ಯಂತ ಖಂಡನೀಯ, ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಕಿಡಿಕಾರಿದ್ದಾರೆ.

ಈ‌ ಕುರಿತು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಎಲ್ಲಾ ರೀತಿಯ ಅಧಿಕಾರಿಗಳನ್ನು ಅನುಭವಿಸಿ, ಒಂದು ಹಂತಕ್ಕೆ ಬೆಳೆದು ಪಕ್ಷ‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು, ಇದೀಗ ಬೆಳೆಸಿದ ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

ನಾವಲ್ಲ ಅಡಾಸ್ ಬಿ.ಸಿ.ಆನಂದ್ ಡಬಲ್ ಅಡಾಸ್:

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರ ತಂದೆ, ನಮ್ಮ ತಂದೆಯವರ ಬಗ್ಗೆ ಮಾತನಾಡಿರುವುದು ನಮಗೆ ಬಹಳ ನೋವಾಗಿದೆ. ನಮ್ಮನ್ನು ಅಡಾಸ್ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ,‌‌ ನಾವಲ್ಲ ಅಡಾಸ್, ಈ‌ ಮಾತನ್ನು ಹೇಳಿದ ಬಿ.ಸಿ ಆನಂದ್ ಡವಲ್ ಅಡಾಸ್ ಎಂದು ಗರಂ ಆದರು.

ನಮ್ಮ ಭಿಕ್ಷೆಯಿಂದ ಬೆಳೆದ ಬಿ.ಸಿ ಆನಂದ್

ನಮ್ಮ ಭಿಕ್ಷೆಯಿಂದ ಬೆಳೆದ ವ್ಯಕ್ತಿ, ಈಗ ನಮಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾನೆ. ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ರೀತಿಯ ಅಕಾರಗಳನ್ನು ಕೊಟ್ಟಿದೆ. ಮೊದಲನೇ ಭಿಕ್ಷೆ: ಬಿ.ಸಿ.ಆನಂದ್ ಮೊದಲಿಗೆ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾಗ ನನ್ನ ಸಹೋದರ ರಾಮಣ್ಣ ಸಹ ಆಕಾಂಕ್ಷಿಯಾಗಿ ಸ್ಪರ್ಧಿಸಲು ಸಿದ್ದವಾಗಿದ್ದರು. ಆಗ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ, ರಾಮಣ್ಣ ಬದಲಾಗಿ ಕಾಂಗ್ರೆಸ್‍ನಿಂದ ಬಿ.ಸಿ.ಆನಂದ್ ಸ್ಪರ್ಧಿಸುವಂತೆ ಮಾಡಿ ಅವರ ಗೆಲುವಿಗೆ ಶ್ರಮಿಸಿದ್ದೆವು.

ಎರಡನೇ ಭಿಕ್ಷೆ: ಸೋಮಶೇಖರ್ ಸಹಕಾರ ಸಚಿವರಾಗಿದ್ದಾಗ ಕೆಎಂಎಫ್ ನಿರ್ದೇಶಕರನ್ನಾಗಿ ಮಾಡಿದೆವು.

ಮೂರನೇ ಭಿಕ್ಷೆ: ಕೊಳಗೇರಿ ಅಭಿವೃದ್ದಿ ಮಂಡಲಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಅವರು ಕಾಂಗ್ರೆಸ್ ಗೆ ಸೇರಿಸಿದರು..

ನಾಲ್ಕನೇ ಭಿಕ್ಷೆ:ಬಿ.ಸಿ ಆನಂದ್ ಪತ್ನಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ನೀಡಿ ಗೆಲ್ಲಲು ಶ್ರಮಿಸಿದ್ದೆವು.

ಐದನೇ ಭಿಕ್ಷೆ: ಹಾಲಿನ ಡೈರಿಗೆ ನಾಮಿನಿ ಮಾಡುವ ಮೂಲಕ ನಾನು ಭಿಕ್ಷೆ ನೀಡಿದ್ದೇನೆ…

ಹೀಗೆ ಎಲ್ಲಾ ಕಾಲದಲ್ಲೂ, ಎಲ್ಲಾ ಸಮಯದಲ್ಲೂ ನಮ್ಮ ಭಿಕ್ಷೆಯಿಂದ ಅಧಿಕಾರ ಅನುಭವಿಸಿದ್ದಾನೆ. ಇದೀಗ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ಇಷ್ಟೆಲ್ಲಾ  ಅಕಾರಗಳನ್ನು ಅನುಭವಿಸಿರುವ ಆನಂದ್ ಅವರು ಉಂಡ ಮನೆಗೆ ದ್ರೋಹ ಬಗೆದು ನಮ್ಮನ್ನು ಅಡಾಸ್ ಎಂಬ ಶಬ್ದ ಬಳಸಿ ನಿಂದನೆ ಮಾಡಿರುವುದು ಹಾಗೂ ನಮ್ಮ ತಂದೆಯನ್ನು ಎಳೆತಂದಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.

ಬಿ.ಸಿ ಆನಂದ್ ಪಡೆದಿರುವ ಈ ಸ್ಥಾನಗಳು ಎಲ್ಲವೂ ನಾವು ಹಾಕಿರುವ ಭಿಕ್ಷೆಯಾಗಿದ್ದು, ಇದರಲ್ಲಿ ಸುಳ್ಳಿದ್ದರೆ, ಧರ್ಮಸ್ಥಳದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದರಿದ್ದೇವೆ ಅವರೂ ಸಹ ಬಂದು ಸತ್ಯ ಹೇಳಲಿ ಎಂದು ಸವಾಲು ಹಾಕಿದರು.

ಹಿರಿಯ ಮುಖಂಡ ರಂಗರಾಜು ಅವರಿಗೆ ಅದು ಇದು ಹೇಳಿ ತಲೆ ಕೆಡಿಸಿ ಪಕ್ಷ ಬಿಡಿಸಿದ್ದಾನೆ. ಬಿಜೆಪಿ ಶಾಸಕರನ್ನು ಇಂದ್ರ, ಚಂದ್ರ ಅಂತಾ ಹೇಳಿ ನಾಟಕವಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಅವರಿಗೂ ತಿರುಗು ಮುರುಗು ಮಾಡುತ್ತಾನೆ ನೋಡಿ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ

ನಾನು ಹತ್ತು ವರ್ಷ ಅಧಿಕಾರದಲ್ಲಿ ಇದ್ದಾಗ ತಾಲೂಕು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತಾಲೂಕು ಆಸ್ಪತ್ರೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಅದಿಕ್ಕಿಂತ ಏನು ಬೇಕು ನನಗೆ ಎಂದರು.

ನಾನು ಕ್ಷೇತ್ರದಲ್ಲಿ 10 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದು, ಯಾವತ್ತೂ ಇನ್ನೊಬ್ಬರನ್ನು ಹೀಯಾಳಿಸಿ ಮಾತನಾಡಿಲ್ಲ. ನಮ್ಮ ಹಿರಿಯ ರಾಜಕಾರಣಿಗಳು ಸಹ ಇಂತಹ ರಾಜಕೀಯ ಮಾಡಲ್ಲ. ಅಕಾರ ಇಲ್ಲದಿದ್ದರೂ ನನ್ನ ಸೇವೆ ಕ್ಷೇತ್ರದ ಜನರಿಗೆ ನಿರಂತರವಾಗಿರುತ್ತದೆ. ನಾನು ಶಾಸಕನಾಗಿದ್ದಾಗ ಇಎಸ್‍ಐ ಆಸ್ಪತ್ರೆ ನಿರ್ಮಾಣವಾಗಿದ್ದು, ಇದುವರೆವಿಗೂ ಅದು ಉದ್ಘಾಟನೆಯಾಗಿಲ್ಲ. ಸಾವಿರಾರು ಕೋಟಿ ರೂ ಕಾಮಗಾರಿಗಳನ್ನು ಮಾಡಿದ್ದರೂ ಸಹ ಫ್ಲೆಕ್ಸ್ ಮೂಲಕ ಪ್ರಚಾರ ಮಾಡಿಲ್ಲ. ಆದರೆ ಈಗಿನ ಶಾಸಕರು 5ರಿಂದ 10 ಲಕ್ಷ ಕೆಲಸ ಮಾಡಿಸಿದರೂ ಸಹ ಫ್ಲೆಕ್ಸ್ ಹಾಕಿಸಿಕೊಳ್ಳುತ್ತಾರೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿಸಿಎಂ ರಾಜೀನಾಮೆಗೆ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಕುರಿತು ನ್ಯಾಯಾಂಗ ತನಿಖೆಗೆ ನಡೆಯುತ್ತಿದೆ. ತನಿಖೆಯಾದ ನಂತರ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಇದರಲ್ಲಿ ಬೇಜವಾಬ್ದಾರಿಯಾಗಿ ಕೆಲಸ ಮಾಡಿದ ಪೊಲೀಸರನ್ನ ಅಮಾನತು ಮಾಡಲಾಗಿದೆ. ರಾಜೀನಾಮೆ ಕೊಡಿ ಅಂತಾ ಕೇಳಿದ್ರೆ, ಹಿಂದೆ‌ ನಡೆದ ಘಟನೆಗಳಲ್ಲಿ ಯಾಕೆ ಕೇಂದ್ರ ರಾಜ್ಯದವರು ರಾಜೀನಾಮೆ ಕೊಡಲಿಲ್ಲ, ಟೀಕೆ ಮಾಡುತ್ತಿರೋದು ವಿರೋಧ ಪಕ್ಷದವರ‌ ಕೆಲಸ ಮಾಡಲಿ ಎಂದರು.

ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಇಂತಹ ಘಟನೆಗಳು ನಡೆದಿವೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ, ಸರ್ಕಸ್ ದುರಂತ, ತಿರುಪತಿಯಲ್ಲಿ ಆದ ಘಟನೆ ಇರಬಹುದು, ಇವೆಲ್ಲಾ ಆಕಸ್ಮಿಕವಾಗಿ ಹಾಗಿರೊಂತದ್ದು ಎಂದು ಹೇಳಿದರು.

ಸರ್ಕಾರಕ್ಕೆ ಒಂದು ಇತಿಮಿತಿ ಇದೆ, ಯಾರಾದ್ರು 25 ಲಕ್ಷ ಪರಿಹಾರ ಕೊಟ್ಟಿರೋ ಉದಾಹರಣೆ ಇದೆಯಾ, ಈಗಾಗಲೇ ಸರ್ಕಾರದ ಇತಿಮಿತಿಗಳಲ್ಲಿ ಮೃತಪಟ್ಟಿರೋರಿಗೆ ಪರಿಹಾರ ಘೋಷಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ, ನಗರಸಭಾ ಸದಸ್ಯ ಅಲ್ತಾಫ್, ಮುಖಂಡರಾದ ಆಂಜಿನ ಮೂರ್ತಿ, ಶರತ್, ನಾರಾಯಣ್, ಜವಾಜಿ ರಾಜೇಶ್, ಮಂಜುನಾಥ್ ಮೊದಲಾದವರು ಹಾಜರಿದ್ದರು.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

13 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

18 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

21 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago