ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಕಸುವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ಗಾಗಿ ಆಗ್ರಹ: ಪ್ರತ್ಯೇಕ ವಾರ್ಡ್ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು…..

ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಸುವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡಬೇಕು. ಇಲ್ಲದಿದ್ದಲ್ಲಿ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡದೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಕಾರಣ ಹೆಚ್ಚು ಜನಸಂಖ್ಯೆ, ಭೂ ವಿಸ್ತೀರ್ಣ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ವಂಚನೆ ಮಾಡಲಾಗಿದೆ. ಈ ಕುರಿತು ಪ್ರಶ್ನೆ ಮಾಡದ ಪ್ರತಿನಿಧಿಗಳಿಲ್ಲದೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಅವರಿಗೆ  ನಮ್ಮ ಗ್ರಾಮಗಳ ಅಭಿವೃದ್ಧಿ ಕಡೆ ಗಮನವೇ ಇಲ್ಲದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಕಸುವನಹಳ್ಳಿ ಗ್ರಾಮಸ್ಥ ರವಿ ಕುಮಾರ್ ಮಾತನಾಡಿ, 2020ರಲ್ಲಿ ಬಾಶೆಟ್ಟಿಹಳ್ಳಿ ಪಂಚಾಯತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು, 2022ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ಆದರೆ, ಈ ವಾರ್ಡ್ ವಿಂಗಡಣೆ  ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ  ಭೌಗೋಳಿಕವಾಗಿ ಹೆಚ್ಚು ಪ್ರದೇಶ ಹೊಂದಿರುವ ಹಾಗೂ ಅತಿ ಹೆಚ್ಚು ಕೃಷಿಕರನ್ನು ಹೊಂದಿರುವ ನಮ್ಮ ಕಸುವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಲಾಗಿದೆ. ನಮಗಿಂತಲೂ ಕಡಿಮೆ ಜನಸಾಂದ್ರತೆ ಹೊಂದಿರುವ ತಮಗೆ ಬೇಕಿರುವ ಹಲವು ಬಡಾವಣೆಗಳನ್ನು, ಲೇಔಟ್ ಗಳನ್ನು ವಾರ್ಡ್ ಎಂದು ಪರಿಗಣಿಸಲಾಗಿದೆ ಎಂದು ಗುಡುಗಿದರು.

2011 ಹಾಗೂ 2015 ರ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ  ಬಿಸುವನಹಳ್ಳಿ ಹಾಗೂ ಕಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ಮತಗಟ್ಟೆಗಳನ್ನು(ಬೂತ್) ಮಾಡಲಾಗಿತ್ತು. ಆದರೆ, ವಾರ್ಡ್ ವಿಂಗಡಣೆ ಸಮಯದಲ್ಲಿ ನಮ್ಮ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಏಕ ಪಕ್ಷಿಯ ನಿರ್ಧಾರ ಕೈಗೊಳ್ಳಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡುಗಳ ಪೈಕಿ ನಮ್ಮ ವಾರ್ಡ್ ಅತಿ ಹೆಚ್ಚು  ಮತದಾರರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ನಾಯಕನಿಲ್ಲದ ಊರು ನಡೆಸಬೇಕಾಗುತ್ತದೆ ಎಂದರು.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯು ವಾರ್ಡ್ ವಿಂಗಡಣೆ ಸಮಯದಲ್ಲಿ ಅವೈಜ್ಞಾನಿಕ ನೀತಿಯನ್ನು ಅನುಸರಿಸಿದೆ‌ ಕೇವಲ 369 ಮತದಾರರಿರುವ ಸ್ಥಳಗಳಿಗೆ ವಾರ್ಡ್ ನೀಡಿರುವ ಪಂಚಾಯತಿ 1448 ಮತದಾರರನ್ನು  ಹಾಗೂ ಭೌಗೋಳಿಕ ವಿಸ್ತೀರ್ಣ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಇರುವುದು ವಿಪರ್ಯಾಸವೇ ಸರಿ. ಈಗಲಾದರೂ ಪಟ್ಟಣಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ  ಮುಂದಿನ ದಿನಗಳಲ್ಲಿ ನಾಯಕರ ಇಲ್ಲದ  ಗ್ರಾಮಗಳನ್ನು  ನೋಡಬೇಕಾಗುತ್ತದೆ. ಪ್ರಶ್ನೆ ಮಾಡಲು ಪ್ರತಿನಿಧಿಗಳೇ ಇಲ್ಲದೆ ಇದ್ದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯಲಿದೆ. ಈ ನಡವಳಿಕೆ ಬದಲಾಗಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡುವ ಮೂಲಕ ಸಹಕರಿಸಬೇಕು ಎಂದರು.

ಬಿಸುವನಹಳ್ಳಿ ಗ್ರಾಮಸ್ಥ ನಾರಾಯಣಸ್ವಾಮಿ ಮಾತನಾಡಿ , ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಿ  ತರಾತುರಿಯಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ  ಚುನಾವಣೆ ಘೋಷಣೆ ಮಾಡಿದೆ. ಸ್ಥಳೀಯ ಗ್ರಾಮಸ್ಥರು ಕಳೆದ 2022ರಿಂದಲ್ಲೂ ನಮಗೆ ಪ್ರತ್ಯೇಕ ವಾರ್ಡ್ ಕಲ್ಪಿಸಬೇಕೆಂದು ಮನವಿ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಆದರೆ, ಈವರೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹೋಗಿ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುವ ಅಧಿಕಾರಿಗಳು ಕೇವಲ ತಮ್ಮ ಸ್ವಾಹಿತಾಸಕ್ತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಪಟ್ಟಣ ಪಂಚಾಯಿತಿಯೇ ಉತ್ತಮ ಉದಾಹರಣೆ. ಯಾವ ಮಾನದಂಡಗಳ ಆಧಾರದ ಮೇಲೆ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಕೆಲ ಪ್ರಮುಖರ ಒತ್ತಡಕ್ಕೆ ಮಣಿದು ರಾಜಕೀಯ ಪ್ರೇರಿತರಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು  ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಿನಾರಾಯಣ ಹೊಸಹಳ್ಳಿ, ಮೋಪರಹಳ್ಳಿ ಹಾಗೂ ನಾಗದೇನಹಳ್ಳಿ ಮೂರು ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ. ಅಂತೇ ಕಸುವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ ವಿಂಗಡಣೆಯಾಗಿದೆ. ನಮ್ಮ ಗ್ರಾಮದಲ್ಲಿ ವೃದ್ಧರು ಅಂಗವಿಕಲರು ಇದ್ದಾರೆ ಕಸುವನಹಳ್ಳಿಯ ಮತಗಟ್ಟೆಗೆ ತೆರಳಿ ಮತ ಹಾಕಬೇಕಾದರೆ ಕನಿಷ್ಠ 3 ಕಿಲೋ ಮೀಟರ್ ನಡೆದು ಸಾಗಬೇಕಿದೆ ಎಂದರು.

ನಮ್ಮ ಗ್ರಾಮಸ್ಥರನ್ನು ಮನವೊಲಿಸಿ ಮತದಾನ ಮಾಡಿಸುತ್ತೇವೆ ಎಂದು ಅಧಿಕಾರಿಗಳು ಭಾವಿಸಿದ್ದರು  ಅದು ಖಂಡಿತ ಸಾಧ್ಯವಿಲ್ಲ , ನಮ್ಮ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್ ನೀಡಿದರೆ ನಾವು ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಮತದಾನ ಮಾಡುತ್ತೇವೆ. ಪ್ರತ್ಯೇಕ ವಾರ್ಡ್ ಮಾಡದಿದ್ದರೆ ಎಲ್ಲ ಗ್ರಾಮಸ್ಥರು ಒಮ್ಮತದಿಂದ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎರಡು ಗ್ರಾಮದ ಗ್ರಾಮಸ್ಥರು ಮತದಾನ ಮಾಡದೆ ಚುನಾವಣೆ ಬಹಿಷ್ಕರಿಸುವ ಮೂಲಕ ಅಧಿಕಾರಿಗಳ ಧೋರಣೆ ವಿರುದ್ಧ ಹೋರಾಟ ನಡೆಸಲಿದ್ದೆವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಯಶೋದಮ್ಮ, ವೆಂಕಟರಮಣಪ್ಪ, ತಿಮ್ಮರಾಯ, ಎನ್.ಶೇಖರ್, ಬಿ ಕೆ ಪರಶುರಾಮ, ನಾರಾಯಣಸ್ವಾಮಿ, ಎಂ ಮಾರಪ್ಪ, ಲೋಕೇಶ್, ಮುನಿಯಪ್ಪ, ಸತೀಶ್, ಮಂಜುನಾಥ್, ಕಸುವನಹಳ್ಳಿ ಕಾನೂನು ವಿದ್ಯಾರ್ಥಿ ಮತ್ತು ಜನಧ್ವನಿ ವೇದಿಕೆಯ ಮುಖಂಡ ರವಿಕುಮಾರ್, ನಾರಾಯಣಸ್ವಾಮಿ ಮತ್ತು ಗ್ರಾಮಸ್ಥರು ಮುಖಂಡರು ಸ್ತ್ರೀ ಶಕ್ತಿ ಸ್ವಹಾಯಕ ಸಂಘದ ಮಹಿಳೆಯರು, ಅಂಬೇಡ್ಕರ್ ಸಂಘದ ಮುಖಂಡರು, ವಾಲ್ಮೀಕಿ ಸಂಘದ ಮುಖಂಡರು ಮತ್ತು ಯುವಕರು ಹಾಜರಿದ್ದರು.

Ramesh Babu

Journalist

Recent Posts

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

2 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

11 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

13 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

23 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

1 day ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

1 day ago