ಬಲಾಢ್ಯನಿಂದ ಸಾರ್ವಜನಿಕ ರಸ್ತೆ ಒಡೆದು ಕಾಂಪೌಂಡ್ ನಿರ್ಮಾಣಕ್ಕೆ ಯತ್ನ ಆರೋಪ: ವಿರೋಧವ್ಯಕ್ತಪಡಿಸಿದ ಜನ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ: ರಸ್ತೆ ಉಳಿಸುವ ಭರವಸೆ

ಶತ ಶತಮಾನಗಳಿಂದ ಸುಮಾರು ಹತ್ತಾರು ಗ್ರಾಮಗಳ ಜನರು ಬಳಕೆ ಮಾಡುತ್ತಿರುವ ರಸ್ತೆಯನ್ನು ಬಲಾಢ್ಯನೊಬ್ಬ ಏಕಾಏಕಿ ಈ ರಸ್ತೆ ನನ್ನ ಜಮೀನಿನಲ್ಲಿ ಹಾದು ಹೋಗಿದೆ ಎಂದು ಹೇಳಿ ರಸ್ತೆ ಒಡೆದು ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದಾನೆ ಎಂದು ಆರೋಪಿಸಿದ ಜನರು ತಹಶೀಲ್ದಾರ್, ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.

ಯೆಸ್, ಈ ಘಟನೆ ನಡೆದಿರೋದು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಕತ್ತಿಹೊಸಹಳ್ಳಿ ಗ್ರಾಮದಲ್ಲಿ. ರಸ್ತೆಯನ್ನು ಬಲಾಢ್ಯನಿಂದ ರಕ್ಷಿಸುವಂತೆ ಸಾರ್ವಜನಿಕರಿಂದ ಬಂದ ದೂರಿನ‌ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೂಡಲೇ ದಾಖಲೆಗಳನ್ನು ಪರಿಶೀಲನೆ‌‌ ನಡೆಸಿ, ಸರ್ವೇ ಕಾರ್ಯ ನಡೆಸಿ ಈಗಿರುವ ರಸ್ತೆಯನ್ನ ಹಾಗೇ ಉಳಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.

ಕತ್ತಿಹೊಸಹಳ್ಳಿಯಿಂದ ತರಬನಹಳ್ಳಿ, ಕಸಾಘಟ್ಟಾ, ಗುಟ್ಟಹಳ್ಳಿ ಜೋಯಿಸಾ ದೇವಸ್ಥಾನ‌ ಅಗ್ರಹಾರ, ಪಟ್ಟೆ ಬಸವಣ್ಣ ದೇವಸ್ಥಾನ, ಹೆಜ್ಜಾಜಿ ಆಸ್ಪತ್ರೆ, ನೆಲಮಂಗಲ ಹೆದ್ದಾರಿ ಸೇರಿದಂತೆ ಹಲವಾರು ಗ್ರಾಮಗಳನ್ನು ಸಂಪರ್ಕಿಸಲು ಇರುವ ಏಕೈಕ ರಸ್ತೆಯನ್ನು ಕತ್ತಿಹೊಸಹಳ್ಳಿ ಮೂಲದ ಬೆಂಗಳೂರಿನಲ್ಲಿ ವಾಸವಿರುವ ವಕೀಲ‌ ನರಸಿಂಹಯ್ಯ ಎಂಬ ವ್ಯಕ್ತಿ ಈ ರಸ್ತೆ ನನ್ನ ಜಮೀನಿನಲ್ಲಿ ಹಾದು ಹೋಗಿದೆ ಎಂದು ಹೇಳಿ ರಸ್ತೆ ಒಡೆದು ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದಾನೆ. ಮಾರ್ಕ್ ಮಾಡಿ ರಸ್ತೆಯನ್ನು ಒಡೆಯುವಾಗ ಗ್ರಾಮಸ್ಥರಾದ ನಾವು ರಸ್ತೆ ಉಳಿವಿಗಾಗಿ ತೀವ್ರ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್, ಹಾಗೂ ಪೊಲೀಸರ ಗಮನಕ್ಕೆ ತಂದಿದ್ದೇವೆ. ಈ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಅವರು, ರಸ್ತೆ ಉಳಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥ ಚಿಕ್ಕವೀರಣ್ಣ ಹೇಳಿದರು.

ಕತ್ತಿಹೊಸಹಳ್ಳಿ ಗ್ರಾಮದ ಚೌಡನರಸಪ್ಪನವರ ಹೆಣ್ಣು ಮಕ್ಕಳ ಪಾಲಿಗೆ ಬಂದಿದ್ದ ಸುಮಾರು 15 ಗುಂಟೆ ಭೂಮಿಯನ್ನು ಇತ್ತೀಚೆಗೆ ವಕೀಲ ನರಸಿಂಹಯ್ಯ ಎಂಬ ವ್ಯಕ್ತಿ ಖರೀದಿ ಮಾಡಿದ್ದಾರೆ. ಈ ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಅವರ ಜಮೀನಿಗೆ ಕಾಂಪೌಂಡ್ ನಿರ್ಮಿಸಿಕೊಂಡರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ರಸ್ತೆ ನನ್ನ ಜಮೀನಿನಲ್ಲಿ ಹಾದುಹೋಗಿದೆ. ನಾನು ಯಾವುದೇ ಕಾರಣಕ್ಕೂ ನನ್ನ ಜಮೀನಿನಲ್ಲಿ ರಸ್ತೆಯನ್ನು ಬಿಡುವುದಿಲ್ಲ ಎಂದು ರಸ್ತೆಯನ್ನು ಒಡೆದು ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನು ನಾವು ಪ್ರಶ್ನೆ ಮಾಡಿದ್ದಕ್ಕೆ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹತ್ತಾರು ಗ್ರಾಮಗಳ ಜನರಿಗೆ ಅನುಕೂಲಕಕ್ಕಾಗಿರುವ ಏಕೈಕ ರಸ್ತೆಯನ್ನು ಒಡೆಯುವುದು ಎಷ್ಟರ ಮಟ್ಟಿಗೆ ಸರಿ, ನಾವು ಯಾವುದೇ ಕಾರಣಕ್ಕೂ ಈ ರಸ್ತೆಯನ್ನು ಬಿಟ್ಟುಕೊಡುವುದಿಲ್ಲ. ರಸ್ತೆ ಉಳಿವಿಗಾಗಿ ಉಗ್ರ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ನಂತರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ರಸ್ತೆಗೆ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ. ಖುದ್ದಾಗಿ ನಾವು ಹಾಗೂ ಎಡಿಎಲ್ ಆರ್ ಉಪಸ್ಥಿಯಲ್ಲಿ ಸರ್ವೇ ಕಾರ್ಯ ನಡೆಸುತ್ತೇವೆ. ಶತಮಾನಗಳಿಂದ ಬಳಕೆಯಲ್ಲಿರುವ ರಸ್ತೆಯನ್ನು ಹಾಗೇ ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

4 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

8 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

11 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

14 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago