Categories: ಲೇಖನ

“ಬದುಕಿನ ಬೆಳದಿಂಗಳು”

ಬದುಕಿನ ಬೆಳದಿಂಗಳಲ್ಲಿ ನಮ್ಮ ಹುರುಪು, ಹುಕುಂಗಳು ಹಾಗೂ ಹಲವು ವಿಭಿನ್ನತೆಗಳ ವಿಚಾರಾರ್ಥಗಳು ನೆನೆಗುದಿಗೆ ಬಿದ್ದಿದ್ದುಂಟು. ಹಾಗೆಯೇ ಸದ್ಗುಣ-ದುರ್ಗುಣಗಳ ವ್ಯತ್ಯಾಸವನು ಅರಿತು ನಡೆಯಬೇಕಾದ ಬುದ್ದಿ ಜೀವಿ (ಮನುಷ್ಯ) ದೈಹಿಕ, ಮಾನಸಿಕತೆಯನ್ನು ಚೊಟ್ಟಾಗಿಸಿಕೊಂಡಿದ್ದಾನೆ. ಇವೆಲ್ಲ ಮನದಲ್ಲಿಟ್ಟುಕೊಂಡು ಬದುಕನ್ನು ಹಸನಾಗಿಸಿಕೊಳ್ಳುವ ಕಾರ್ಯ ಮಾನವನ ಅನುಸರಣೆ. ನಮ್ಮ ಸ್ವಾವಲಂಬನೆಯ ಬದುಕಿನ ಕೋಲ್ಮಿಂಚು ಸದಾ ನಮಗೆ ಬೆಳಕಾಗಿರಬೇಕು. ಆದರೆ ಅರಳಬೇಕಾದ ಹೂವುಗಳು ಇವತ್ತು ನಲುಗಿ ಗಾಳಿಗೆ ಸಿಕ್ಕ ಗಿಡದ ತಪ್ಪಲಿ (ಎಲೆ) ನಂತೆ ಹಾರಾಡುತಿವೆ. ಚಿಗುರಾಗಿ ಜನ್ಮ ತಾಳಿ ದೊಡ್ಡವರಾದ ನಾವುಗಳು ಇಂದು ತಾಜಾವಿಲ್ಲದ ಹಣ್ಣಾಗಿಬಿಟ್ಟಿಲ್ಲವೇ? ಒಬ್ಬ ದಾರಿ ಹೋಕ ತನ್ನ ದಾರಿ ಅರಿಯದಿದ್ದರೂ ಎಲ್ಲರ ಸಹಾಯ ಕೋರಿ ಮುಂದೆ ಸಾಗುತ್ತಾನೆ. ಕಾರಣ ದಡ ಸೇರುವ ತವಕದ ಸ್ಪಷ್ಟ ನಿಲುವು ಅವನಲ್ಲಿರುತ್ತದೆ. ಚಿಕ್ಕವರಿದ್ದಾಗ ಚಂದಿರನೇತಕೆ ಓಡುವನಮ್ಮ? ಎಂದು ಕೇಳಿದ್ದುಂಟು ಆದರೀಗ ಚಂದ್ರನ ಮೇಲೆ ಹೋಗಿ ಬರುವ ದಕ್ಷತೆ ನಮ್ಮಲ್ಲಿದ್ದರು ಆತ್ಮಸ್ಥೈರ್ಯ ಕುಂಠಿತವಾದಂತೆ ಭಾಸವಾಗುತ್ತಿದೆ. ಬೆಳದಿಂಗಳು ಎಂಬುದು ಬದುಕಿನ ಸಂತೋಷ, ನೆಮ್ಮದಿ, ಸೌಂದರ್ಯ ಮತ್ತು ಭರವಸೆಯನ್ನು ಸೂಚಿಸುತ್ತದೆ. ಬದುಕಿನ ಹಲವು ಆಯಾಮಗಳ ನಡುವೆಯೂ ಸಿಗುವ ಸಕಾರಾತ್ಮಕ ಅಂಶಗಳನ್ನು ಹಾಗೂ ಸುಂದರ ಕ್ಷಣಗಳನ್ನು ತೋರಿಸುತ್ತದೆ. ಬೆಳದಿಂಗಳು ಎಂದರೆ ಸಾಮಾನ್ಯವಾಗಿ ಚಂದ್ರನ ಬೆಳಕು ಅಥವಾ ರಾತ್ರಿಯಲ್ಲಿ ಚಂದ್ರನ ಬೆಳಕಿನಿಂದ ಉಂಟಾಗುವ ಪ್ರಕಾಶಮಾನವಾದ ನೋಟ. ಬೆಳದಿಂಗಳು ಶಾಂತಿ, ನೆಮ್ಮದಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಹೀಗಾಗಿ ‘ಬದುಕಿನ ಬೆಳದಿಂಗಳು’ ಎಂಬುದು ಬದುಕಿನ ಸಕಾರಾತ್ಮಕ, ಸಂತೋಷದಾಯಕ ಮತ್ತು ಪ್ರಕಾಶಮಾನವಾದ ಭಾಗಗಳನ್ನು ತಿಳಿಸುತ್ತದೆ. ಇದು ಪ್ರತಿ ಕ್ಷಣದ ನಡುವೆಯೂ ಕಾಣಸಿಗುವ ಸೌಂದರ್ಯ, ಪ್ರೀತಿ ಮತ್ತು ಆಶಾವಾದವನ್ನು ತೋರಿಸುತ್ತದೆ. ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಂಡು, ಕಷ್ಟಗಳನ್ನು ಎದುರಿಸುವುದು ಕಲಿತು, ಧೈರ್ಯವನ್ನು ಹೊತ್ತು ಭರವಸೆ ಎಂಬ ಶಕ್ತಿಯನ್ನು ತುಂಬಿಕೊಂಡು ಮುನ್ನಡೆದಾಗ ಬದುಕಿನ ಬೆಳಕು ನಮಗೆ ಗಾಢವಾಗಿ ಗೋಚರಿಸುತ್ತದೆ.

ಒಂದಷ್ಟು ಅಂಶಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕು ಕಾರಣ ಬದುಕಲು ಒಂದು ಮಾರ್ಗದ ಅವಶ್ಯವಿದೆ. ಹೀಗೆ ಬದುಕಬೇಕು ಎಂದಾಗ ಬದುಕು ಮಾದರಿಯಾಗುತ್ತದೆ. ಬದುಕನ್ನು ಎಲ್ಲರೂ ಬದುಕುತ್ತಾರೆ. ಅದು ಕ್ರಮಬದ್ದವಾಗಿ ಇರಬೇಕು ಅಂದಾಗ ಅದು ಸಫಲತೆಯ ಬದುಕಾಗಿ ನಿರ್ಮಾಣವಾಗುತ್ತದೆ. ಒಂದಷ್ಟು ಅಂಶಗಳನ್ನು ಮೆಲಕು ಹಾಕೋಣ.

1) ಬದುಕು ಅನಿವಾರ್ಯ: ಯಾವ ಸನಿಹವಾದ ವ್ಯಕ್ತಿಯೂ ನಮ್ಮ ಅನಿವಾರ್ಯಕ್ಕೆ ಇರುವರೋ, ಅವಶ್ಯಕತೆಗೆ ತಕ್ಕಂತೆ ಬದಲಾಗುವರೋ ಅದನ್ನು ಕಂಡಾಗ ನಾವು ಕಂಡುಕೊಳ್ಳುವುದು ಒಂದೇ ನಮ್ಮ ಸಂದರ್ಭಕ್ಕೆ ನಾವೇ ರೂವಾರಿ. ಅಣುಕಿಸುವರ ಮಧ್ಯೆ ಇದ್ದು ಸೆಟದು ಸಂಭ್ರಮಿಸಬೇಕು. ಈ ಅನಿವಾರ್ಯದಲ್ಲಿ ಕಲಿಕೆ, ಸಂಬಂಧ, ಜವಾಬ್ದಾರಿ ಇವುಗಳಲ್ಲಿ ಎಲ್ಲರೂ ಅನಿವಾರ್ಯವಾಗಿ ಬೇಕೇ ಬೇಕು. ಅನೇಕ ಅನುಭವಗಳನ್ನು ಎದುರಿಸಿ, ಕಲಿತು ಮುಂದುವರೆದು ಜೀವನ ನಡೆಸುವುದು, ಹಾಗೆ ಒಂದು ಕಡೆ ಹುಟ್ಟು ಇನ್ನೊಂದು ಕಡೆ ಕೊನೆ ಎಂದು ಪ್ರತಿ ಕ್ಷಣ ಉಸಿರಾಡುತ ಬದುಕು ಸವೆಸುವ ನಾವು ಅನಿವಾರ್ಯದ ಕೊರತೆಯಿಂದ ಕ್ಷಣ ಕ್ಷಣದ ಆನಂದವನ್ನು ಮರೆಯುತ್ತೇವೆ. ಹುಟ್ಟು-ಸಾವುಗಳ ನಡುವಿನ ನಿರಂತರ ಕಾಲವೇ ಬದುಕು. ಅದು ತಪ್ಪದ ಅನಿವಾರ್ಯ ಸತ್ಯ.

2) ಸರಳತೆ: ಬದುಕನ್ನು ಸಾರ್ಥಕಗೊಳಿಸಲು ಸರಳತೆ ತುಂಬಾ ಅವಶ್ಯ. ನಾವು ಅರಿತಿರುವ ಅನುಭವದ ಸಾರದಲ್ಲಿ ಸರಳತೆ ಏಕೆ? ಎಂದರೆ ಕಾರಣವಿಷ್ಟೆ ಆಸೆಗಳು, ಅಮಲು, ಆಡಂಬರ, ಅಜ್ಞಾನ ಮುಖ್ಯವಾಗಿ ಅಂತರಂಗದ ವೇದನೆಗಳು ದಿನಕಳೆದಂತೆ ಧುಮುಕುವ ಪಾತಾಳದಂತೆ, ಇವೆಲ್ಲ ಸರಿಯಾದ ನಿಟ್ಟಿನಲ್ಲಿ ಮನವರಿಕೆ ಉಂಟಾದಾಗ ಜೀವನ ಸರಳೀಕರಣವಾಗುತ್ತೆ. ಆಗ ಎಲ್ಲವೂ ಸಮಾಧಾನಕರವಾಗಿ ಬಿಂಬಿಸುತ್ತೆ. ಹೆಚ್ಚು ಮನುಷ್ಯ (ಬುದ್ದಿ) ಮನುಷ್ಯರಾಗಲು ಇಚ್ಛಿಸಿದಾಗ ಅಲ್ಲಿಗೆ ಸರಳತೆಯು ಸಾಕಾರಗೊಳ್ಳುತ್ತದೆ.

3) ಆಂತರಿಕ ಅರಿವು: ಎಂದರೆ ಒಬ್ಬರ ಅಂತರಿಕ ಸ್ಥಿತಿಗಳಾದ ಭಾವನೆಗಳು, ಆಸೆಗಳು, ಮತ್ತು ಆಲೋಚನೆಗಳ ಬಗ್ಗೆ ತಿಳಿದುಕೊಳ್ಳುವುದು. ಒಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ. ಹಾಗೂ ಭಾವನೆಗಳ ಅರಿವು, ಆಲೋಚನೆಯ ರೀತಿ, ಸಾಮರ್ಥ್ಯದ ಅರಿವು, ದೌರ್ಬಲ್ಯದ ಕೊರತೆ ಅರಿತಾಗ ಅದು ನಮ್ಮನ್ನು ನಾವು ಅರಿತುಕೊಂಡು ಬೇರೆಯವರನ್ನು ಆಂತರಿಕವಾಗಿ ಅರಿಯಲು ಸಹಾಯವಾಗುತ್ತದೆ. ಇದು ನಮ್ಮ ಇರುವಿಕೆ ಯಾವ ರೀತಿಯಾಗಿ ಇರಬೇಕೆಂದು ಅರಿಸುತ್ತದೆ. ಅಂದರೆ ವ್ಯವಹಾರ, ಸಂಬಂಧ, ಜೀವನದಲ್ಲಿನ ಏರಿಳಿತಗಳು ಎಲ್ಲದಕ್ಕಿಂತ ಮುಖ್ಯವಾಗಿ ಆಂತರಿಕ ಶಾಂತಿ ಬೆಳೆಸಲು ಪ್ರಮುಖವಾಗಿದೆ. ಮನುಷ್ಯ ಆಂತರಿಕವಾಗಿ ತನ್ನನ್ನು ತಾನು ತಿಳಿದುಕೊಳ್ಳಬೇಕು, ಸ್ವಂತ ಆತ್ಮವನ್ನು ಅರಿತು ಅದನ್ನು ಅರ್ತಿಸಬೇಕು. (ಆನಂದ ಪಡಬೇಕು.) ಅದು ಬದುಕಿನ ಆಂತರಿಕತೆಯನ್ನು ಚಿತ್ರಿಸುತ್ತದೆ.

4) ಆದರ್ಶಮಯ ಬದುಕು:
ಆದರ್ಶಮಯ ಬದುಕು ಎಂದರೆ, ಪ್ರತಿಯೊರ್ವ ವ್ಯಕ್ತಿ ತನ್ನ ಬದುಕನ್ನು ಅರ್ಥಪೂರ್ಣವಾಗಿ ಸಂತೋಷದಿಂದ ಮತ್ತು ತೃಪ್ತಿಯಿಂದ ಬದುಕುವದು ಎಂಬ ಧ್ಯೇಯವಾಗಿದೆ. ಆದರ್ಶ ಬದುಕಿಗೆ ಬೇಕಾದ ಕೆಲವು ಅಂಶಗಳನ್ನು ಅಳವಡಿಸಿಕೊಂಡಾಗ ಒಳ್ಳೆಯ ಸಂಬಂಧಗಳು, ಉದ್ದೇಶ, ಬೆಳವಣಿಗೆ, ಕೃತಜ್ಞತಾ ಭಾವ, ಸಮಾಜಕ್ಕೆ ಕೊಡುಗೆ, ನೆಮ್ಮದಿ, ಇವೆಲ್ಲವೂಗಳು ಒಂದಿಷ್ಟು ಖಾತ್ರಿ ಅಂಶಗಳನ್ನು ಅಳವಡಿಸಿಕೊಂಡಾಗ ಆದರ್ಶಮಯ ಬದುಕಾದಿತು. ಒಬ್ಬ ವ್ಯಕ್ತಿ ಬೇರೆಯವರಿಗೆ ಆದರ್ಶವಾಗಿರಬೇಕೆಂಬುದು ಹಿರಿಯರ ಗೀತೋಪದೇಶ ನಿರಂತರ ಪಠಿಸಬೇಕು. ನಾವು ಯಾವ ತೆರನಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬುದು ನಾವು ಅರಿಯದಿದ್ದರೂ ಬೇರೆಯವರು ನಮ್ಮನ್ನು ಗಾಢವಾಗಿ ಪರೀಕ್ಷಿಸುತ್ತಿರುತ್ತಾರೆ. ಅದಕ್ಕಿರುವ ಮಾರ್ಗ ನಮ್ಮನ್ನು ಬೇರೆಯವರು ವಿಮರ್ಶೆ ಮಾಡುವಷ್ಟು ಇರುವಿಕೆ ಇಲ್ಲವಾದರೂ ಮೆಚ್ಚಿಕೊಳ್ಳುವ ನಡುವಳಿಕೆ, ಆದರ್ಶ ವ್ಯಕ್ತಿತ್ವ, ಸರ್ವೋತ್ತಮ ಆಚಾರ-ವಿಚಾರಗಳ ಶಿಸ್ತು ಜೀವನವೇ ಆದರ್ಶಮಯ ಬದುಕು.

5) ಜೀವನದ ಅರ್ಥ:
ವ್ಯಕ್ತಿಯ ನೈಜತೆ ತನ್ನ ಆಂತರಿಕ ನಿರ್ಧಾರದಿಂದ ಬರುತ್ತದೆ. ಅನುಭವ, ಅಧ್ಯಯನ ಕ್ರಮ, ಪ್ರೀತಿಯ ಪರೋಪಕಾರ, ನೆನೆಸಿಕೊಂಡು ಸಂಬಂಧಕ್ಕೆ ಸತ್ಕರಿಸಿ ತದನಂತರ ಜೀವನದ ಅರ್ಥ ಅರಿಯಲು ಮುನ್ನಡೆಯುವ ಸಾಹಸ ಮಾಡಬೇಕು. ವ್ಯಕ್ತಿ ತನ್ನ ಸ್ವಭಾವ, ಆದರ್ಶಗುಣಗಳು, ಆಕಾಂಕ್ಷೆಗಳು, ಸ್ವಂತಸ್ಥಾನ ಮತ್ತು ಕೌಶಲಗಳು ಏನು ಎಂದು ಅತಿಯಾಗಿ ಅರಿಯಬೇಕಾಗಿದೆ. ಮುಂದುವರೆದು ಅಂತರಂಗವನು ಶುಚಿಯಾಗಿಸಿಕೊಂಡು, ನಾವು ನೆಲೆಸಿರುವ ಪರಿಸರ ಅತ್ಯಂತ ವಿಶೇಷತೆಯಿಂದ ಕೂಡಿದ್ದು, ಒಂದಷ್ಟು ಇರುವಿಕೆಯಲ್ಲಿ ಭಿನ್ನತೆ ನೋಡಬಹುದು, ಇದಕ್ಕೆ ಜೀವನದ ಪುನರ್ವಿಮರ್ಶೆ ಅಗತ್ಯತೆ ಇದೆ. ಮತ್ತು ನಾವುಗಳು ಪಡೆಯುವ ಜ್ಞಾನ ನಿರಂತರವಾಗಿರಬೇಕು, ನಂತರ ಪಡೆದ ಜ್ಞಾನ, ನೇರವಾದ ಅನುಭವಗಳು ನೀಡುತ್ತವೆ. ನಂತರ ಜೀವನದ ಅರ್ಥ ಮತ್ತು ಉದ್ದೇಶವೂ ಬಿಂಬಿಸುತ್ತೆ.
ಇದನೆಲ್ಲ ಗಮನಿಸಿ ನಾವೂ ಬದುಕನ್ನು ಒಂಚೂರು ಭಾರವಾಗಿಸದೆ ಸಂಭ್ರಮಿಸೋಣ, ನಗುನಗುತ ಬಾಳೋಣ.

*ಹವ್ಯಾಸಿ ಬರಹಗಾರರು: ದುಂಡೇಶ್ ಕೆ.ಬಿ (ವಿಜಯಪುರ ಜಿಲ್ಲೆ,)

Ramesh Babu

Journalist

Recent Posts

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

6 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

7 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

12 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

14 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

17 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

18 hours ago