ಪ್ರಾಪರ್ಟಿ ಪರೇಡ್: 75ಲಕ್ಷ ಮೌಲ್ಯದ ಗ್ಯಾಜೆಟ್‌ಗಳನ್ನ ಕದ್ದಿದ್ದ ಕಂಪ್ಯೂಟರ್ ಸೈನ್ಸ್ ಪದವೀಧರ

ನಗರದಲ್ಲಿ ಐಟಿ ಉದ್ಯೋಗಿಗಳ ಪೇಯಿಂಗ್ ಗೆಸ್ಟ್ ವಸತಿಗೃಹದಿಂದ(ಪಿಜಿ) 75 ಲಕ್ಷ ರೂ. ಮೌಲ್ಯದ 133 ಲ್ಯಾಪ್‌ಟಾಪ್, 19 ಮೊಬೈಲ್ ಫೋನ್ ಮತ್ತು ನಾಲ್ಕು ಟ್ಯಾಬ್ಲೆಟ್‌ಗಳನ್ನು ಕಳ್ಳತನ ಮಾಡಿದ್ದ ಕಂಪ್ಯೂಟರ್ ಸೈನ್ಸ್ ಪದವೀಧರ. ಈ ಆರೋಪದ ಮೇರೆಗೆ ಕಂಪ್ಯೂಟರ್ ಸೈನ್ಸ್ ಪದವೀಧರನನ್ನು ಬಂಧಿಸಿ 75 ಲಕ್ಷ ರೂ. ಮೌಲ್ಯದ ಗ್ಯಾಜೆಟ್‌ಗಳನ್ನ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

ಇಂದು ನಗರದ ವಿವಿಧ ಠಾಣೆಗಳ ಸಿಬ್ಬಂದಿ ಯಶಸ್ವಿಯಾಗಿ ಬೇಧಿಸಿದ ಹಲವಾರು ಪ್ರಕರಣಗಳ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪೇಯಿಂಗ್ ಗೆಸ್ಟ್ ಮತ್ತು ಬ್ಯಾಚುಲರ್ ವಸತಿಗಳಿಗೆ ಭೇಟಿ ನೀಡಿ ಅಲ್ಲಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದನು. ಕದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಹ ಪೊಲೀಸರು ಬಂಧಿಸಲಾಗಿದೆ. ಸದ್ಯ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೇ ಮತ್ತೊಂದು ಪ್ರಕರಣದಲ್ಲಿ 5 ಜನರನ್ನು ಬಂಧಿಸಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎರಡು ತಲೆ ಇರುವ 2 ಹಾವು, 12 ಲಕ್ಷ ಮೌಲ್ಯದ 12 ಜಿಂಕೆ ಕೊಂಬುಗಳು ಮತ್ತು 5 ಲಕ್ಷ ಮೌಲ್ಯದ ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟು 1399 ಗ್ರಾಂ ಮೌಲ್ಯದ 84 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆ ಪ್ರಕರಣದಡಿ 5 ಮಂದಿಯನ್ನು ಬಂಧಿಸಲಾಗಿದ್ದು, 65 ಲಕ್ಷ ನಗದು, 8.5 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 4 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ ಪಿ ಆರ್ ಗೆ ಸಂಬಂಧಿಸಿದ ಪ್ರಕರಣಗಳು, ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಗಳು, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು, ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು‌ ವಿವರಿಸಿದರು.

Ramesh Babu

Journalist

Recent Posts

ನಾಳೆ(ಮಾರ್ಚ್ 11ರಿಂದ) ರಾಜ್ಯ ಸರ್ಕಾರಿ ಆಸ್ಪತ್ರೆಗಳ ವೈದ್ಯರ‌ ಮುಷ್ಕರ: ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆಗಳು ಸ್ಥಗಿತ ಸಾಧ್ಯತೆ

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮಾರ್ಚ್ 11ರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು…

2 hours ago

ಮಾ.19 ರಿಂದ ಮಾ.22ರವರೆಗೆ ಮೇಲಿನ ಜೂಗಾನಹಳ್ಳಿಯಲ್ಲಿ ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ

ಮೇಲಿನ ಜೂಗಾನಹಳ್ಳಿ ಕ್ರಿಕೆಟರ್ಸ್ ವತಿಯಿಂದ (ದಿವಂಗತ ಡಾ. ಪುನಿತ್ ರಾಜ್‌ಕುಮಾರ್‌ ಸವಿನೆನಪಿಗಾಗಿ) ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿಮೆಂಟನ್ನು ಮಾ.19 ರಿಂದ…

2 hours ago

25 ವರ್ಷಗಳ ನಂತರ ತಮಗೆ ಶಿಕ್ಷಣ ನೀಡಿದ ಗುರುಗಳ ಪಾದಪೂಜೆ

ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ಧ್ಯೇಯ ವಾಕ್ಯದೊಂದಿಗೆ ತಾನು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಹಿಂದಿರುಗಿ…

5 hours ago

ಮುಂದಿದ್ದ ವಾಹನವನ್ನ ಹಿಂದಿಕ್ಕುವ ಭರ: ನಿಯಂತ್ರಣ ತಪ್ಪಿದ ಸರಕು ಸಾಗಣೆಯ ಟೆಂಪೋ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಡಿಕ್ಕಿ

ಮುಂದಿದ್ದ ವಾಹನವನ್ನ ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿದ ಸರಕು ಸಾಗಣೆಯ ಟೆಂಪೋ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಡಿಕ್ಕಿ ಹೊಡೆದಿರುವ ಘಟನೆ…

5 hours ago

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…

14 hours ago