Categories: ಲೇಖನ

ಪ್ರಶಂಸನೀಯ ಕೆಲಸಕ್ಕಾಗಿ ಅಭಿನಂದನೆಗಳು….

ಕರ್ನಾಟಕದ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವರಿಗೆ ಸ್ವಲ್ಪ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಹೇಳೋಣವೇ……..

ನಿಜ, ಇದು ಅವರ ಕರ್ತವ್ಯ. ಅದಕ್ಕಾಗಿ ಅವರು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಸಣ್ಣ ಜವಾಬ್ದಾರಿ ಎಂದು ಭಾವಿಸುತ್ತಾ…….

ಇತ್ತೀಚಿನ ಕೆಲವು ತಿಂಗಳುಗಳಿಂದ ಆರೋಗ್ಯ ಇಲಾಖೆ ಆಹಾರ ಕಲಬೆರಕೆ, ಆಹಾರದಲ್ಲಿ ವಿಷಯುಕ್ತ ರಾಸಾಯನಿಕಗಳ ಪತ್ತೆ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು, ಬಣ್ಣದ ಲೇಪಿತ ಆಹಾರಗಳ ಮೇಲೆ ನಿಷೇಧ, ಅಜಿನೋಮೋಟೋದಂತ ಟೇಸ್ಟಿ ಪೌಡರ್ ಬಳಕೆಯ ನಿರ್ಬಂಧ, ಟ್ಯಾಟೂ ನಿಷೇಧ ಹೀಗೆ ಒಂದಷ್ಟು ಕ್ರಮಗಳು ಕೈಗೊಳ್ಳುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇವೆ. ಇದನ್ನು ಬಹಳ ವರ್ಷಗಳ ಹಿಂದೆಯೇ ಮಾಡಬೇಕಿತ್ತು, ಆದರೆ ಆರೋಗ್ಯ ಇಲಾಖೆಗೆ ಬಂದ ಇತ್ತೀಚಿನ ಮಾಹಿತಿಯಂತೆ ಕ್ಯಾನ್ಸರ್, ಹೃದ್ರೋಗ, ಥೈರಾಯ್ಡ್, ಬಿಪಿ, ಅಸಿಡಿಟಿ, ಮಧುಮೇಹ ಮುಂತಾದ ಖಾಯಿಲೆಗಳು ತೀರಾ ವಿಪರೀತ ಎನ್ನುವಷ್ಟು ಅಂಕಿ ಅಂಶಗಳು ತೋರಿಸುತ್ತಿರುವುದರಿಂದ ಹಾಗೂ ಜನರಿಗೂ ಕೂಡ ಈ ಬಗ್ಗೆ ಒಳಗೊಳಗೆ ಆಕ್ರೋಶ ಉಂಟಾಗುತ್ತಿರುವುದನ್ನು ಗಮನಿಸಿ ಈ ಕ್ರಮಕ್ಕೆ ಮುಂದಾಗಿರುವುದು ಸಂತೋಷದ ವಿಷಯವೇ…..

ಆದರೆ ಇದನ್ನು ಕೇವಲ ಪ್ರಚಾರಕ್ಕಾಗಿಯೋ ಅಥವಾ ತಾವು ಈ ಬಗ್ಗೆ ಮಹಾನ್ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎನ್ನುವ ತೋರಿಕೆಯ ಮನೋಭಾವದಿಂದ ಮಾಡಿದರೆ ಯಾವುದೇ ಪ್ರಯೋಜನವೂ ಇಲ್ಲ ಮತ್ತು ಸಾಮಾನ್ಯ ಜನ ಇದನ್ನು ಕ್ಷಮಿಸುವುದೂ ಇಲ್ಲ.

ಈಗ ಆರೋಗ್ಯ ಇಲಾಖೆ ಆಹಾರದ ವಿಷಯದಲ್ಲಿ ಜಾಗೃತಿ ವಹಿಸಿ ಏನು ಕ್ರಮ ಕೈಗೊಳ್ಳುತ್ತಿದೆಯೋ ಅದನ್ನು ನಿರಂತರವಾಗಿ ಮತ್ತು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದನ್ನು ಸರಿಪಡಿಸಲು ಸಾರ್ವಜನಿಕರು ಜಾಗೃತಿ ವಹಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕಾಗುತ್ತದೆ. ಅಗತ್ಯವಿದ್ದರೆ ಒಂದಷ್ಟು ಕಠಿಣ ಕಾನೂನುಗಳನ್ನು ರೂಪಿಸಬೇಕಾಗುತ್ತದೆ.

ಇದು ನಿಜಕ್ಕೂ ಸಾಮಾನ್ಯ ಕೆಲಸವಲ್ಲ, ಖಂಡಿತವಾಗಲೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಪುಣ್ಯದ ಕೆಲಸ ಎಂದು ನೇರವಾಗಿ ಹೇಳಬಹುದು. ದೇಶಭಕ್ತಿ, ಧರ್ಮಭಕ್ತಿ ಕೇವಲ ಘೋಷಣೆಗಳಲ್ಲ. ಈ ರೀತಿಯ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದೇ ಧರ್ಮ ದೇವರನ್ನು ಒಲಿಸುವ ಪರಿ, ದೇಶವನ್ನು ಅಭಿವೃದ್ಧಿ ಪಡಿಸುವ ಪರಿಯೂ ಹೌದು…

ಸಮಾಜ ಮತ್ತು ಸರ್ಕಾರದಲ್ಲಿ ಭ್ರಷ್ಟಾಚಾರವಿದೆ, ಜಾತೀಯತೆಯಿದೆ, ಸ್ವಜನ ಪಕ್ಷಪಾತವಿದೆ. ಆದರೆ ಅದನ್ನು ಮೀರಿ ತಿನ್ನುವ ಆಹಾರ ಇಡೀ ಮನುಷ್ಯನ ಜೀವನವನ್ನೇ ಬದುಕನ್ನೇ ಕಸಿದುಕೊಳ್ಳುತ್ತಿರುವಾಗ ಈ ನಿಟ್ಟಿನಲ್ಲಾದರೂ ಶೇಕಡ ನೂರರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ಕಲಬೆರಕೆ ವಿಷಯದಲ್ಲಿ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದನ್ನು ಎಲ್ಲರೂ ಗಮನಿಸಬೇಕಿದೆ..

ಖಂಡಿತವಾಗಿ ಆರೋಗ್ಯ ಇಲಾಖೆಯ  ಈ ಕ್ರಮಗಳು ಸಾರ್ವಜನಿಕ ಮೆಚ್ಚುಗೆ ಗಳಿಸಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಒಂದಷ್ಟು ಪ್ರೋತ್ಸಾಹ ದೊರೆತು ಈ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡರೆ ಅವರನ್ನು ಎಲ್ಲರೂ ಹೃದಯಪೂರ್ವಕವಾಗಿ ಅಭಿನಂದಿಸೋಣ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಒತ್ತಾಯ ಮಾಡೋಣ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ಕಲಬೆರಕೆ, ವಿಷಯುಕ್ತ ರಾಸಾಯನಿಕಗಳ ಬಳಕೆ, ಅವಧಿ ಮುಗಿದ ಆಹಾರ ಪದಾರ್ಥಗಳು, ಸ್ವಚ್ಚತೆಯ ಕೊರತೆ ಮುಂತಾದ ಸಮಸ್ಯೆಗಳು ವ್ಯಾಪಕವಾಗಿ ಹರಡಿದೆ. ಅದರತ್ತಲ್ಲೂ ವಿಶೇಷ ಗಮನ ನೀಡಬೇಕಾಗಿದೆ…….

ಹಾಗೆಯೇ ಮಾದಕ ವಸ್ತುಗಳ ವಿಷಯದಲ್ಲಿ ಮತ್ತು ಆನ್ಲೈನ್ ಜೂಜು ವಿಷಯದಲ್ಲಿ ಸಹ ಅದಕ್ಕೆ ಸಂಬಂಧಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳು ಒಂದು ವೇಳೆ ಇದೇ ರೀತಿಯ ಕ್ರಮಗಳನ್ನು ಕೈಗೊಂಡರೆ ಎಷ್ಟೊಂದು ಸಂತೋಷವಲ್ಲವೇ. ಅವರ ಬಗ್ಗೆಯೂ ಖಂಡಿತ ಮನದುಂಬಿ ಅಭಿನಂದಿಸೋಣ,

ಹೌದು, ಪೋಲಿಸ್ ಇಲಾಖೆ, ಕಾಮಗಾರಿ ಇಲಾಖೆ, ನೋಂದಣಿ ಇಲಾಖೆ ಮುಂತಾದ ಇಲಾಖೆಗಳಲ್ಲಿ ಭ್ರಷ್ಟಾಚಾರವಿದೆ. ಅನೇಕ ಲೋಪದೋಷಗಳಿವೆ. ಆದರೆ ಅವುಗಳು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದವು. ಇಂದಲ್ಲ ನಾಳೆ ಅದನ್ನು ಹೇಗೋ ಸರಿಪಡಿಸಿಕೊಳ್ಳಬಹುದು. ಆದರೆ ಆಹಾರ ಮತ್ತು ನೀರಿನಿಂದ ಮನುಷ್ಯನ ದೇಹ ಮತ್ತು ಮನಸ್ಸೇ ಮಲಿನವಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ…

ಆಹಾರದ ಗುಣಮಟ್ಟ, ನೀರಿನ ಗುಣಮಟ್ಟ, ಪರಿಸರದ ಗುಣಮಟ್ಟಗಳ ಜೊತೆಗೆ, ಮಾದಕ ದ್ರವ್ಯಗಳ ನಿರ್ಮೂಲನೆ, ಜೂಜು ತಾಣಗಳ ಸರ್ವನಾಶ, ಬಹಳ  ಮುಖ್ಯವಾದದ್ದು. ಅದನ್ನು ನಿಜಕ್ಕೂ ರಾಜಕೀಯ ಹೊರತುಪಡಿಸಿ ಮಂತ್ರಿಗಳು, ಅಧಿಕಾರಿಗಳು ತಮ್ಮೆಲ್ಲ ಶ್ರಮವಹಿಸಿ ಕೆಲಸ ಮಾಡಿದಲ್ಲಿ ನಿಜಕ್ಕೂ ಅದ್ಭುತ ಬದಲಾವಣೆಯನ್ನು, ಆರೋಗ್ಯಕರ ಸಮಾಜವನ್ನು ನೋಡುವ ಸಾಧ್ಯತೆ ಇದೆ….

ವೈದ್ಯಕೀಯ ಕ್ಷೇತ್ರ ತುಂಬಾ ದುಬಾರಿಯಾಗುತ್ತಿರುವಾಗ, ರೋಗಗಳು, ಸಾವುಗಳು ಸಹಜವಾಗುತ್ತಿರುವಾಗ ಇಂತಹ ಕ್ರಮಗಳು ಮನದ ಮೂಲೆಯಲ್ಲಿ ಭರವಸೆ ಮೂಡಿಸಿ ಸಮಾಜದ ಬಗ್ಗೆ ಒಂದಷ್ಟು ನಂಬಿಕೆ ವಿಶ್ವಾಸ ಮೂಡಿಸಿದರೆ ಅದೇ ಒಂದು ಪುಣ್ಯದ ಕೆಲಸ. ಅದಕ್ಕಾಗಿಯೇ ಈ ರೀತಿಯ ಅಭಿಯಾನಗಳು ಸಾರ್ವಜನಿಕರು ಒಳಗೊಳ್ಳುವಂತಹ ಒಂದು ಪ್ರಕ್ರಿಯೆ ಪ್ರಾರಂಭವಾದರೆ ನಿಜಕ್ಕೂ ಹೆಮ್ಮೆ ಪಡಬಹುದು. ಹಾಗಾಗಲಿ ಎಂದು ಆಶಿಸುತ್ತಾ……

ಸದಾ ವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕ ಟೀಕೆ ಟಿಪ್ಪಣಿಗಳನ್ನೇ ಹೆಚ್ಚಾಗಿ ಮಾಡುವ ನಾವು ಆಗಾಗ ಉತ್ತಮ ಕೆಲಸಗಳನ್ನು ಅಭಿನಂದಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಒಳ್ಳೆಯ ಕೆಲಸ ಮಾಡುವವರಿಗೆ ನಮ್ಮಿಂದ ಸ್ವಲ್ಪ ಉತ್ತೇಜನ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ…….

ಏನೇನು ಅವತಾರಗಳೋ, ಅಬ್ಬಬ್ಬಾ......... ಹೊಸ ವರ್ಷವೆಂಬ ಸಂಭ್ರಮ ಮತ್ತು ಉನ್ಮಾದ........... ಸಾವಿರಾರು ಪೋಲೀಸರ ಬಿಗಿ ಬಂದೋ ಬಸ್ತ್, ದ್ರೋಣ್ ಕ್ಯಾಮರಾದ…

4 hours ago

ಬೆಂಗಳೂರು ಗ್ರಾಮಾಂತರ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ನೇಮಕ

ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ…

14 hours ago

ಬೆಂ. ಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ವರ್ಗಾವಣೆ- ನೂತನ ಎಸ್ಪಿ ಯಾರು ಗೊತ್ತಾ….?

ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ…

15 hours ago

“ಗುಣಮಟ್ಟದ ಚಿಕಿತ್ಸೆಗೆ ಸಹ್ಯಾದ್ರಿ ಆಸ್ಪತ್ರೆ ಬದ್ಧ”

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ, ಗೌರಿಬಿದನೂರು ರಸ್ತೆಯ ಫ್ರೆಂಡ್ಸ್ ಫಂಕ್ಷನ್ ಹಾಲ್ ಎದುರಿನ ಸಹ್ಯಾದ್ರಿ ಆಸ್ಪತ್ರೆಯು 2025ರ ಮೇ.11ರಂದು ಪ್ರಾರಂಭವಾಗಿ ಆಧುನಿಕ ತಂತ್ರಜ್ಞಾನ,…

16 hours ago

ಚಳಿಗಾಲದ ಪಾರ್ಟಿಗಳಿಂದ ಹೊಟ್ಟೆಗೆ ಕಾಟ: ಗ್ಯಾಸ್ಟ್ರೋ ಪ್ರಕರಣಗಳಲ್ಲಿ 25% ಏರಿಕೆ

ಪ್ರತಿ ವರ್ಷ ಚಳಿಗಾಲದಲ್ಲಿ ಬರುವ ಹಬ್ಬದಲ್ಲಿ, ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಹೊಟ್ಟೆ ಸಂಬಂಧಿತ (ಗ್ಯಾಸ್ಟ್ರೋ) ಹೊರರೋಗಿ ವಿಭಾಗ (OPD) ಮತ್ತು…

19 hours ago

ಕೇರಳದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ದೊಡ್ಡಬಳ್ಳಾಪುರ ಕಾಂಗ್ರೆಸ್ ಮುಖಂಡರು….

ಕೇರಳದ ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್‌ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ…

21 hours ago