ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ರೂ.6,000/- ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ. ಸದರಿ ಅನುದಾನವನ್ನು ರೂ.2,000/- ಗಳಂತೆ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ.
ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯ ರೈತ ಕುಟುಂಬಗಳಿಗೆ ಹೆಚ್ಚುವರಿಯಾಗಿ 2 ಕಂತುಗಳಲ್ಲಿ ವರ್ಷಕ್ಕೆ ರೂ.4.000/- ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಯೋಜನೆಯ ಆರ್ಥಿಕ ನೆರವು ಪಡೆಯಲು ರೈತ ಫಲಾನುಭವಿಗಳು ಇ-ಕೆವೈಸಿ(E KYC) ಮಾಡುವುದು ಕಡ್ಡಾಯವಾಗಿರುತ್ತದೆ,
ಜಿಲ್ಲೆಯಲ್ಲಿ ಈವರೆಗೆ ಶೇ.71 ರಷ್ಟು (ದೇವನಹಳ್ಳಿ ಶೇ.72 ದೊಡ್ಡಬಳ್ಳಾಪುರ ಶೇ.76, ಹೊಸಕೋಟೆ ಶೇ.69, ನೆಲಮಂಗಲ ಶೇ.64) ರೈತರು E KYC ಮಾಡಿಸಿದ್ದು, ಇನ್ನೂ 22,971 ಫಲಾನುಭವಿ ರೈತರು (ಶೇ.29ರಷ್ಟು – ದೇವನಹಳ್ಳಿ ಶೇ.28, ದೊಡ್ಡಬಳ್ಳಾಪುರ ಶೇ.24. ಹೊಸಕೋಟೆ ಶೇ.31 ನೆಲಮಂಗಲ ಶೇ.36) ಬಾಕಿ ಇರುತ್ತಾರೆ.
E KYC ಯನ್ನು ಈ ಕೆಳಕಂಡಂತೆ ಕೈಗೊಳ್ಳಬಹುದಾಗಿರುತ್ತದೆ.
1) ಓ.ಟಿ.ಪಿ ಆಧಾರಿತ E KYC – ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಫಲಾನುಭವಿಗಳು ಸ್ವತಃ ತಾವೇ ಅಥವಾ ಇತರರ ಸಹಾಯ ಪಡೆದ http://exlink/pmkisan.gov.in/aadharekyc.aspx 0 ಆಧಾರ್ ಸಂಖ್ಯೆ ಮತ್ತು ಓಟಿಪಿಯನ್ನು ನಮೂದಿಸಿ E KYC ಮಾಡಿಕೊಳ್ಳಬಹುದು.
2) ಬಯೋಮೆಟ್ರಿಕ್ ಆಧಾರಿತ E KYC – ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದಿರುವ ಫಲಾನುಭವಿಗಳು ಗ್ರಾಮ ಬಸ್ ಕೇಂದ್ರ, ಸಿಎಸ್‌ಸಿ ಕೇಂದ್ರದ ಮೂಲಕ ತಮ್ಮ ಹೆಬ್ಬೆಟ್ಟಿನ ಗುರುತಿನ ಆಧಾರದ ಮೇಲೆ E KYC ಮಾಡಿಸಿಕೊಳ್ಳಬಹುದು.
3) PMKISAN FACE RECOGNITION APP E KYC – ಮೇಲಿನ ಎರಡೂ ಪ್ರಕಾರಗಳಲ್ಲಿ E KYC ಮಾಡಿಸಿಕೊಳ್ಳಲು ಆಗದ ಫಲಾನುಭವಿಗಳು PMKISAN FACE RECOGNITION APP ಮೂಲಕ ತಮ್ಮ ಕಣ್ಣಿನ ಗುಡ್ಡೆಯ ಗುರುತಿನ ಆಧಾರದ ಮೇಲೆ ಸ್ವತ: E KYC ಮಾಡಿಕೊಳ್ಳಬಹುದು ಮತ್ತು ಇತರೇ 10 ಜನ ರೈತರ E KYC ಮಾಡಿಕೊಡಬಹುದು.
14ನೇ ಕಂತಿನ ಆರ್ಥಿಕ ನೆರವು ವರ್ಗಾವಣೆಗಾಗಿ ಎಲ್ಲಾ ಫಲಾನುಭವಿಗಳು ಈ ಮೇಲಿನಂತೆ *ಜೂನ್ 30* ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ / ತೋಟಗಾರಿಕೆ ಇಲಾಖೆ / ಕಂದಾಯ ಇಲಾಖೆ / ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿ / ಸಿಬ್ಬಂದಿಗಳನ್ನು ಹಾಗೂ ನಾಗರೀಕ ಸೇವಾ ಕೇಂದ್ರ ಮತ್ತು ಗ್ರಾಮ ಓನ್ ಕೇಂದ್ರಗಳನ್ನು ಸಂಪರ್ಕಿಸಿ, ಕಡ್ಡಾಯವಾಗಿ E KYC ಮಾಡಿಸಿಕೊಳ್ಳುವುದು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…
ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದು*ರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…