ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು. ಆದ್ದರಿಂದ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ ರಕ್ಷಕ್ ಬುಲೆಟ್, ಪೊಲೀಸರ ವಿಚಾರಣೆಗೆ ಸಹಕರಿಸಿದರು. ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಕ್ ಬುಲೆಟ್, ಘಟನೆ ಕುರಿತು ಈಗಾಗಲೇ ಪೋಲೀಸರಿಗೆ ಮಾಹಿತಿ ನೀಡಿದ್ದೇನೆ. ಘಟನೆ ನಡೆದ ದಿನ ಯಶಸ್ವಿನಿ, ದಾಸ ಸೇರಿ ಕೆಲವೇ ಕೆಲವು ಜನ ಮಾತ್ರ ಇದ್ದೆವು. ಅಲ್ಲಿ ನಡೆದ ಘಟನೆ ಕುರಿತು ಈಗಾಗಲೇ ಮಾತನಾಡಿದ್ದೇನೆ. ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ನಾವು ಕಲಾವಿದರ ಮನೆಯಿಂದ ಬಂದವರು. ಗೂಂಡಾಗಿರಿ ಮಾಡೋಕೆ ಬಂದಿಲ್ಲ. ನಾವು ಇನ್ನೂ ಬೆಳೆಯಬೇಕು ಎಂದರು.
ಬೇರೆಯವರ ಬಗ್ಗೆ ಚೀಪಾಗಿ ಮಾತಾಡೋದು ನನ್ನ ಕ್ಯಾರೆಕ್ಟರ್ ಅಲ್ಲ. ಘಟನೆ ಬಗ್ಗೆ ಎಷ್ಟೇ ಮಾತನಾಡಿದ್ರು ಡಿಸ್ಟಬೆನ್ಸ್ ಆಗ್ತಿರ್ತೀವಿ ಎಂದು ಹೇಳಿದರು.
ನಾವಿಲ್ಲಿ ಆ್ಯಕ್ಟ್ ಮಾಡೋಕೆ ಬಂದಿದ್ದೇವೆ.. ನಮ್ಮ ತಂದೆ ದೊಡ್ಡ ಕಲಾವಿದರು. ನಾವಿಲ್ಲಿ ಧಮ್ಕಿ ಹಾಕೋಕೆ.. ರೌಡಿಸಂ ಮಾಡೋಕೆ… ಸುಫಾರಿ ಕೊಡೋಕೆ ಬಂದಿಲ್ಲ. ಆವತ್ತಿಂದ ಇವತ್ತಿನವರೆಗೂ ನನ್ನದೊಂದು ಬ್ಲಾಕ್ ಮಾರ್ಕಿಲ್ಲ ಎಂದು ಹೇಳಿದರು.
ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…
ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…