ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಡಾ. ಪಿ.ಪಾಂಡುಸಿಂಧೆ ಆಯ್ಕೆ

ಕರ್ನಾಟಕ ರಾಜ್ಯ ಪೌರನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ನಗರಸಭೆಯ ಲೆಕ್ಕಾಧಿಕಾರಿ ಡಾ. ಪಿ.ಪಾಂಡುಸಿಂಧೆ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಆದೇಶದಂತೆ ಆಯ್ಕೆ ಪ್ರಕ್ರಿಯೆ ನಡೆದಿದೆ.

ನಗರದ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಡಾ.ಪಿ.ಪಾಂಡುಸಿಂಧೆ ಮಾತನಾಡಿ, ಪೌರಕಾರ್ಮಿಕರು ಪ್ರತಿನಿತ್ಯವೂ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಪಂದಿಸುತ್ತೇನೆ. ಸರ್ಕಾರದಿಂದ ದೊರೆಯುವಂತ ಪ್ರತಿಯೊಂದು ಸೌಲಭ್ಯಗಳನ್ನು ಪ್ರತಿಯೊಬ್ಬ ಪೌರನೌಕರರಿಗೂ ತಲುಪುವಂತೆ ನೋಡಿಕೊಳ್ಳಲಾಗಿವುದು. ನೌಕರರು ಸಮಸ್ಯೆಗಳನ್ನ ತಿಳಿಸಿದರೆ ಸೂಕ್ತ ಕ್ರಮವಹಿಸಲಾಗುವುದು ಎಂದರು.

ನೂತನ ಪದಾಧಿಕಾರಿಗಳು:

ಜಿಲ್ಲಾ ಅಧ್ಯಕ್ಷ -ಡಾ. ಪಿ. ಪಾಂಡುಸಿಂಧೆ, ಲೆಕ್ಕಾಧಿಕಾರಿ ನಗರಸಭೆ, ದೊಡ್ಡಬಳ್ಳಾಪುರ.
ಕಾರ್ಯದರ್ಶಿ – ಆರ್.ಐ ಗೋವಿಂದರಾಜು, ನಗರಸಭೆ, ದೊಡ್ಡಬಳ್ಳಾಪುರ.
ಉಪಾಧ್ಯಕ್ಷ – ಚಂದ್ರಶೇಖರ್, ನೆಲಮಂಗಲ.
ಖಜಾಂಚಿ – ಸಾಹಿದಾ, ಮ್ಯಾನೇಜರ್ ದೊಡ್ಡಬಳ್ಳಾಪುರ.
ರಾಜ್ಯ ಪರಿಷತ್ ಸದಸ್ಯ – ಉಮಾಶಂಕರ್, ಬಾಶೆಟ್ಟಿಹಳ್ಳಿ.
ನಿರ್ದೇಶಕರಾಗಿ ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಯಿಂದ ವೆಂಕಟೇಶ್, ಸುರೇಶ್, ಹೊಸಕೋಟೆಯ ಮಂಜುನಾಥ( ವಾಟರ್ ಮ್ಯಾನ್) ಶಿವಕುಮಾರ, (ಪೌರಕಾರ್ಮಿಕ), ವಿಜಯಪುರದ ಅಜ್ಮತ್ ಉಲ್ಲಾ,(ಎಲೆಕ್ಟ್ರಿಕಲ್), ಲಾವಣ್ಯ( ಎಸ್ಎಚ್ಐ) ದೇವನಹಳ್ಳಿಯ ಎಂ. ನಾರಾಯಣಸ್ವಾಮಿ, ಶ್ರೀದೇವಿ( ಎಸ್ಎಚ್ಐ),
ಬಾಶೆಟ್ಟಿಹಳ್ಳಿಯ ಕೀರ್ತಿಲೇಖಾ( ಜೆಎಚ್ಐ),
ನೆಲಮಂಗಲದ ಬಿಜಿ ಸುಲೋಚನ(ಎಸ್ಎಚ್ಐ), ಉಮಾಶಂಕರ್( ಎಫ್.ಡಿಎ) ಶೋಭಾ (ಎಸ್ಎಚ್ಐ) ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳನ್ನು ತಾಲ್ಲೂಕು ಪೌರಕಾರ್ಮಿಕರ ಘಟಕದಿಂದ ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!