ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಚುನಾವಣೆ: ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ನಿಲುವೇನು…?

ದೊಡ್ಡಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್ಡಿ) ನಿಯಮಿತದ ಚುನಾವಣೆಯ ಅಂತಿಮ ಫಲಿತಾಂಶ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕಟವಾಗಿದೆ.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತಕ್ಕೆ ಫೆಬ್ರವರಿ 16 ರಿಂದ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಡೆಸಲಾಗಿತ್ತು.

ಈ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಸ್ಥಾನದ ರಾಜಘಟ್ಟ ಕ್ಷೇತ್ರ, ಮಹಿಳಾ ಮೀಸಲು ಸ್ಥಾನದ ದೊಡ್ಡಬೆಳವಂಗಲ ಹಾಗೂ ದೊಡ್ಡಬಳ್ಳಾಪುರ ನಗರ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಸ್ಥಾನದ ತೂಬಗೆರೆ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಕೊನಘಟ್ಟ ಕ್ಷೇತ್ರ, ಪರಿಶಿಷ್ಟ ಜಾತಿ ಸ್ಥಾನದ ಎಸ್.ಎಸ್.ಘಾಟಿ ಕ್ಷೇತ್ರ, ಪರಿಶಿಷ್ಟ ಪಂಗಡ ಸ್ಥಾನದ ಹೊಸಹಳ್ಳಿ ಕ್ಷೇತ್ರದಿಂದ ಹಾಗೂ ಸಾಲಗಾರರಲ್ಲದ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಸಾಲಗಾರರ ಸಾಮಾನ್ಯ ಸ್ಥಾನದ ಮೆಳೇಕೋಟೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀದೇವಿಪುರದ ಬಸವರಾಜು ಬಿ 17 ಮತಗಳು, ಸಿ.ಡಿ.ಅಗ್ರಹಾರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸಿ.ಅಶ್ವಥ್ ನಾರಾಯಣ ಗೌಡ 61 ಮತಗಳು, ಹಣಬೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ವಾಣಿಗರಹಳ್ಳಿ ವಿ.ವೇಣುಕುಮಾರ್ 43 ಮತಗಳು, ಮಧುರೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಸಾಘಟ್ಟ ಉಗ್ರಯ್ಯ 38 ಮತಗಳು, ಕೊಡಿಗೇಹಳ್ಳಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ತಳಗವಾರ ಟಿವಿ ಲಕ್ಷ್ಮೀನಾರಾಯಣ್ 17 ಮತಗಳು, ಮತ್ತು ಸಾಸಲು ಕ್ಷೇತ್ರದ ಸ್ಪರ್ಧಿಸಿದ್ದ ಚನ್ನವೀರನಹಳ್ಳಿಯ ಸಿವಿ ಲಕ್ಷ್ಮೀಪತಯ್ಯ 27 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಕಣ್ಣು ನೆಟ್ಟಿದ್ದು, ಚರ್ಚೆ ತೀವ್ರಗೊಂಡಿದೆ.

ಈ ಕುರಿತಾಗಿ ಇಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ಮಾತನಾಡಿ, ನಮಗೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್ ಡಿ) ನಿಯಮಿತದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುತ್ತಾರೋ ಅವರ ಪರ ನಿಲ್ಲುವ ಬಯಕೆ ನನ್ನದು, ಇನ್ನೂ ಈ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷರು ಯಾವ ತೀರ್ಮಾನ ಕೈಗೊಳ್ಳುತ್ತಾರೋ‌ ಕಾದು ನೋಡಬೇಕಿದೆ ಎಂದರು.

ಎಲ್ಲಾರಿಗೂ ಅಧಿಕಾರದ ಆಸೆ ಇದ್ದೇ ಇರುತ್ತದೆ. ನಮ್ಮ ಜೆಡಿಎಸ್ ಪಕ್ಷವನ್ನು ಹೊಡೆದು ಹೋಗದ ರೀತಿ ಕಾಪಾಡಬೇಕು. ಈಗಾಗಲೇ ನಮ್ಮ ಪಕ್ಷದಿಂದ ಗೆದ್ದಿರುವ ಐದು ಮಂದಿಯನ್ನು ಹಿಡಿದಿಟ್ಟುಕೊಂಡು ಆಮೇಲೆ ಬೇರೆ ಪಕ್ಷದ ಜೊತೆ ಹೊಂದಾಣಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಜೆಡಿಎಸ್ ಕಾಂಗ್ರೆಸ್ ಜೊತೆ ವಿಲೀನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಕಾಂಗ್ರೆಸ್ ಜೊತೆ ವಿಲೀನವಾಗುವುದಿಲ್ಲ. ಕೆಲವು ನಾಯಕರು ಅಧಿಕಾರದ ಆಸೆಗೋಸ್ಕರ ಕಾಂಗ್ರೆಸ್ ಜೊತೆ ಹೋಗಬಹುದು. ಅದು ಅವರ ವೈಯಕ್ತಿಕ ವಿಚಾರ ನಾವು ಏನೂ ಮಾಡುವುದಕ್ಕೆ ಆಗೋದಿಲ್ಲ. ಪಿಎಲ್ ಡಿ ಬ್ಯಾಂಕ್ ರೈತರ ಅಭಿವೃದ್ಧಿಗಾಗಿ ಇರುವ ಸಂಸ್ಥೆ. ಈ ಸಂಸ್ಥೆಗೆ ಅನುಕೂಲವಾಗುತ್ತೆ ಅಂದರೆ ಅಧಿಕಾರ ಹಂಚಿಕೆಗೂ ನಾವು ಬದ್ಧರಾಗಿರುತ್ತೇವೆ. ಚುನಾವಣೆ ಬೇಡ ಅಂತಾ ನನಗೆ ಅನಿಸುತ್ತದೆ ಎಂದರು.

Ramesh Babu

Journalist

Recent Posts

3.75 ಲಕ್ಷ ಪಡಿತರ ಚೀಟಿದಾರರ ಇ-ಕೆವೈಸಿ ಬಾಕಿ: ಇ-ಕೆವೈಸಿಗೆ ಅ.20ರ ಗಡುವು: ಗಡುವು ವಿಸ್ತರಣೆಯಿಂದ ಫಲಾನುಭವಿಗಳಿಗೆ ಕೊಂಚ ನಿರಾಳ

ಬೆಂಗಳೂರು ಗ್ರಾಮಾಂತರ: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಗೆ ಸರ್ಕಾರ ಅ.20ರವರೆಗೆ ಗಡುವು ವಿಸ್ತರಿಸಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ ಶೇ.26.65ರಷ್ಟು…

6 hours ago

ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

16 hours ago

ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…

17 hours ago

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

1 day ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

1 day ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

1 day ago