Categories: ಲೇಖನ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಾಗಿದೆ……..ಒಂದು ಅಂತರಂಗದ ಅಭಿಯಾನ..

ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋದವು. ಇನ್ನೊಂದಷ್ಟು ಜನ ಅನಾರೋಗ್ಯಗಳಿಗೆ ತುತ್ತಾದರು. ಪ್ರಾಣಿಪಕ್ಷಿಗಳು ಕಣ್ಣ ಮುಂದೆಯೇ ತುಂಬಾ ಒದ್ದಾಡಿದವು……

ಈಗ ಎರಡು ಮೂರು ದಿನದಿಂದ ಸ್ವಲ್ಪಮಟ್ಟಿಗೆ ಉಷ್ಣಾಂಶ ಕಡಿಮೆಯಾಗಿದೆ. ಆದರೆ ಆ ತಾಪಮಾನದ ಹೊಡೆತ ನಮಗೆ ಒಂದು ಬಹುದೊಡ್ಡ ಪಾಠವಾಗಬೇಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವರ್ಷ ಹೀಗೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಾಸ್ತಿಯಾಗುತ್ತಾ ಹೋಗುತ್ತದೆ ಎಂದು ಯಾರೋ ಬರೆದ ಒಂದು ಲೇಖನ ಪ್ರಸಾರವಾಗುತ್ತಿದೆ. ಅದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಮುಂದೆಯೂ ಪರಿಸರವನ್ನು ಹೀಗೇ ನಿರ್ಲಕ್ಷಿಸಿದರೆ ಖಂಡಿತವಾಗಿಯೂ ತಾಪಮಾನದ ಹೊಡೆತಕ್ಕೆ ನಾವೆಲ್ಲರೂ ನಾಶವಾಗುವುದು ನಿಶ್ಚಿತ. ಅದಕ್ಕಾಗಿ ಆ ಹಂತ ತಲುಪುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಬೇಕಾಗಿದೆ……..

ಮುಖ್ಯವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಈ ವರ್ಷದ ಈಗ ಪ್ರಾರಂಭವಾಗಿರುವ ಮಳೆಗಾಲದಲ್ಲಿ ಕನಿಷ್ಠ ಒಂದು ಲಕ್ಷ ಗಿಡಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಬೇಕು. ಹಾಗೆಯೇ ಹೋಬಳಿ ಮಟ್ಟದಲ್ಲಿ 10 ಲಕ್ಷ ಗಿಡಗಳು, ತಾಲೂಕು ಮಟ್ಟದಲ್ಲಿ 50 ಲಕ್ಷದಷ್ಟು ಗಿಡಗಳು ಮತ್ತು ಗ್ರೇಡ್-ಒನ್ ನಗರಗಳಲ್ಲಿ ಅಂದರೆ ಜಿಲ್ಲಾಮಟ್ಟದಲ್ಲಿ ಒಂದು ಕೋಟಿ ಗಿಡಮರಗಳನ್ನು ನೆಡುವ ಕಾರ್ಯಕ್ರಮವನ್ನು ತತ್ ಕ್ಷಣದಿಂದಲೇ ಹಮ್ಮಿಕೊಳ್ಳಬೇಕು. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಇದನ್ನು ಆರಂಭಿಸಬೇಕು. ಅಂದರೆ ಇಡೀ ರಾಜ್ಯದಲ್ಲಿ ನೂರಾರು ಕೋಟಿ ಗಿಡಗಳನ್ನು ಈ ಮಳೆಗಾಲದ ಸಮಯದಲ್ಲಿ ನೆಟ್ಟರೆ ಕನಿಷ್ಠ ಅದರಲ್ಲಿ ತೀರಾ ಕಡಿಮೆ ಎಂದರೂ 30 ರಿಂದ 40 ಶೇಕಡಾ ಗಿಡಗಳು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾದರೆ ಎಷ್ಟೋ ಕೋಟಿ ಮರಗಳು ಬೆಳೆಯುತ್ತವೆ. ಇಡೀ ರಾಜ್ಯದಲ್ಲಿ ಅರಣ್ಯ ಪ್ರದೇಶ ತುಂಬಾ ಹೆಚ್ಚಾಗುತ್ತದೆ…..

ಆಗ ಆಮ್ಲಜನಕ ಹೆಚ್ಚಾಗುತ್ತದೆ. ಮಳೆಯ ಕೊರತೆ ಕಡಿಮೆಯಾಗುತ್ತದೆ. ತಾಪಮಾನದ ಕುಸಿತ, ಮನಸ್ಸಿನ ಆಹ್ಲಾದ, ಆರೋಗ್ಯ ಎಲ್ಲವುಗಳಲ್ಲಿ ಕೆಲವೇ ವರ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡುತ್ತದೆ‌…..

ಇಷ್ಟನ್ನು ಸಹ ನಮ್ಮಿಂದ ಮಾಡಲು ಸಾಧ್ಯವಿಲ್ಲವೇ ! ಪ್ರಕೃತಿ ತನ್ನ ಕಷ್ಟ ಸಹಿಸಿ ನಮಗೆ ಸಹಾಯ ಮಾಡುತ್ತದೆ. ನಾವು ಆ ಪರಿಸರವನ್ನು ಉಳಿಸಲು ಇಷ್ಟೂ ಪ್ರಯತ್ನ ಪಡದಿದ್ದರೆ ನಮಗೆ ಕ್ಷಮೆಯೇ ಇಲ್ಲ…..

ಯಾರು ಏನು ಮಾಡುತ್ತಿರೋ ಗೊತ್ತಿಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾಮಾನ್ಯ ಜನರು ದಯವಿಟ್ಟು ಇದನ್ನು ಒಂದು ದೊಡ್ಡ ಅಭಿಯಾನವಾಗಿ ಪ್ರಾರಂಭಿಸಿ, ಮಳೆಗಾಲದಲ್ಲಿ ಗಿಡ ನೆಟ್ಟರೆ, ನೀರು ಉಣಿಸುವ ತೊಂದರೆಯೂ ಇರುವುದಿಲ್ಲ. ಸಹಜವಾಗಿಯೇ ಮಳೆ ನೀರಿನಲ್ಲಿ ಅವು ಬೆಳೆಯುತ್ತವೆ. ಸ್ವಲ್ಪ ಸಸಿ ದೊಡ್ಡದಾಗುವವರೆಗೂ ಒಂದಷ್ಟು ಜಾಗೃತಿ ವಹಿಸಿದರೆ ಸಾಕು….

ಯೋಚಿಸಿ, ಏನನ್ನಾದರೂ ಮಾಡಿ. ಮುಂದಿನ ವರ್ಷಕ್ಕೆ ಇಷ್ಟೊಂದು ತಾಪಮಾನ ಹೆಚ್ಚಾಗದೆ ನಿಯಂತ್ರಿಸಲು ನಮ್ಮ ನಮ್ಮ ಕರ್ತವ್ಯ ನಿರ್ವಹಿಸೋಣ. ಈ ವರ್ಷದ ಭೀಕರ ಬಿಸಿಲನ್ನು ಮರೆಯುವುದು ಬೇಡ. ಅದು ಸದಾ ನೆನಪಾಗಿ ಗಿಡ ಬೆಳೆಸುವ ಕೆಲಸ ವೇಗ ಪಡೆಯಲಿ……

ಹಾಗೆಯೇ, ಫ್ಲೈ ಓವರ್ ಗಳು,
ಅನಾವಶ್ಯಕವಾದ ಉದ್ದುದ್ದ, ಹೆಚ್ಚು ಅಗಲದ ರಸ್ತೆಗಳು ಮುಂತಾದವುಗಳನ್ನು ಕಡಿಮೆ ಮಾಡಿ, ಆ ಜಾಗದಲ್ಲಿ ಕೆರೆಕಟ್ಟೆಗಳು, ಇಂಗು ಗುಂಡಿಗಳು ಮುಂತಾದ ನೀರಾವರಿ ಯೋಜನೆಗಳು, ನೀರಿನ ಸಂಗ್ರಹ ಕಾಲುವೆಗಳ ಬಗ್ಗೆ ಹೆಚ್ಚು ಗಮನಹರಿಸುವಂತೆ ಸ್ಥಳೀಯ ಜನರು ಅಲ್ಲಿನ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯನ್ನು ಒತ್ತಾಯಿಸಬೇಕಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯನ್ನು ನಾವು ಬದಲಾಯಿಸಿಕೊಳ್ಳದಿದ್ದರೆ ಇಡೀ ದೇಶ ಸಿಮೆಂಟ್ ಕಾಡಾಗಿ ತಾಪಮಾನ, ಬರಗಾಲ ನಮ್ಮನ್ನು ನಿರಂತರವಾಗಿ ಕಾಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಅತ್ಯಂತ ಅಪಾಯಕಾರಿ ವಾತಾವರಣವನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ.
ಅವರು ನಮ್ಮನ್ನು ಕ್ಷಮಿಸುವುದಿಲ್ಲ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

6 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

6 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

9 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

12 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

14 hours ago

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…

19 hours ago