Categories: Crime

ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ: ಇಟ್ಟಿಗೆಯಿಂದ ಪತಿ ತಲೆ ಜಜ್ಜಿ ಕೊಂದ ಪತ್ನಿ: ಸತ್ತ ಗಂಡನ ಎದೆಯ ಮೇಲೆ ಕುಳಿತು ತಲೆಯನ್ನು ಹರಿದು ಮಾಂಸದ ತುಂಡುಗಳನ್ನು ಎಸೆದ ಪತ್ನಿ

ಉತ್ತರಪ್ರದೇಶ ಶಹಜಹಾನ್‌ಪುರ ಜಿಲ್ಲೆಯ ಹಥೋಡಾ ಗ್ರಾಮದಲ್ಲಿ ಗಾಯತ್ರಿ ದೇವಿ ಎಂಬಾಕೆ ತನ್ನ 40 ವರ್ಷದ ಪತಿ ಸತ್ಯಪಾಲ್‌ನ ತಲೆಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದಲ್ಲದೇ ಸತ್ತ ಗಂಡನ ಎದೆಯ ಮೇಲೆ ಕುಳಿತು 10 ನಿಮಿಷಗಳ ಕಾಲ ಅವನ ತಲೆಯನ್ನು ಹರಿದು ಮಾಂಸದ ತುಂಡುಗಳನ್ನು ಎಸೆಯುತ್ತಲೇ ಇದ್ದಳು. ಈ‌ ವೇಳೆ ಪೊಲೀಸರು ಅಲ್ಲಿದ್ದರೂ‌ ಸಹ, ನಿರೀಕ್ಷೆಯಂತೆ ಅಬಲಾ ನಾರಿಯ ಮುಂದೆ ಅಸಹಾಯಕರಾಗಿದ್ದರು.

ಈ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

ಕೊಲೆಗೆ ಕಾರಣ ಕೌಟುಂಬಿಕ ಕಲಹ ಎನ್ನಲಾಗಿದೆ. ಮೃತ ಸತ್ಯಪಾಲ್ ಮತ್ತು ಪತ್ನಿ ಗಾಯತ್ರಿ ದೇವಿ ಕೊಲೆಗೂ ಮುನ್ನ ತೀವ್ರ ಜಗಳವಾಡಿದ್ದರು. ಮೃತ ಪತಿಯು ಮನೆಯಲ್ಲಿ ನಡೆದ ಜಗಳದಲ್ಲಿ ತನ್ನ ಹೆಂಡತಿಯನ್ನು ತೀವ್ರವಾಗಿ ಹೊಡೆದಿದ್ದನು. ಇದಕ್ಕೆ ಪ್ರತೀಕಾರವಾಗಿ ದೇವಿ ತನ್ನ ಗಂಡನ ತಲೆಗೆ ಇಟ್ಟಿಗೆಯಿಂದ ಹಲವಾರು ಬಾರಿ ಹೊಡೆದಿದ್ದಾಳೆ, ಅದು ಅಂತಿಮವಾಗಿ ಅವನ ಸಾವಿಗೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನನ್ನ ಪತಿ ಕ್ರೂರಿ ಎಂದು ಪೊಲೀಸ್ ವಿಚಾರಣೆಯಲ್ಲಿ ಕೊಲೆ ಆರೋಪಿ ಗಾಯತ್ರಿ ದೇವಿ ತಿಳಿಸಿದ್ದಾಳೆ.

ಪತ್ನಿ 300 ರೂ.ಕೊಡದಿದ್ದಾಗ ಹೊಡೆಯಲು ಕೋಲು ಕೈಗೆತ್ತಿಕೊಂಡು ಆಕೆಗೆ ಹೊಡೆದಿದ್ದಾನೆ. ನಂತರ ಮನೆಯಲ್ಲಿ ಬಿದ್ದಿದ್ದ ಇಟ್ಟಿಗೆಯನ್ನೂ ಎತ್ತಿಕೊಂಡು ತಲೆ ಬೀಸಿದ್ದಾನೆ. ಇದಾದ ನಂತರ ದೇವಿಯ ಕೋಪ ಹೆಚ್ಚಾಗಿ‌ ಅದೇ ಇಟ್ಟಿಗೆಯಿಂದ ತನ್ನ ಪತಿಯ ತಲೆಗೆ ಹೊಡೆಯುತ್ತಲೇ ಇದ್ದಳು. ಘಟನೆಯ ಸಮಯದಲ್ಲಿ ಕೋಪದಿಂದ ಅವಳು ಪ್ರಜ್ಞೆ ಕಳೆದುಕೊಂಡಿದ್ದಳು ಎನ್ನಲಾಗಿದೆ.

ಪೊಲೀಸರಿಂದ ತನಿಖೆ ಮುಂದುವರಿದಿದೆ.

Ramesh Babu

Journalist

Recent Posts

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

3 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

5 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

5 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

7 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

11 hours ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

23 hours ago