ಪಟಾಕಿ ಸ್ಫೋಟ ಬಾಲಕ ಸಾವು ಪ್ರಕರಣ: ಓ ವಿಧಿಯೇ ನೀನೆಷ್ಟು ಕ್ರೂರಿ…? ಜವರಾಯನ ಅಟ್ಟಹಾಸಕ್ಕೆ ಇಬ್ಬರ ಗಂಡು ಮಕ್ಕಳನ್ನ ಕಳೆದುಕೊಂಡು ತಬ್ಬಲಿಗಳಾದ ಪೋಷಕರು: ಮೊದಲ ಮಗ ನೀರಿನಲ್ಲಿ ಮುಳುಗಿ ಸಾವು, ಎರಡನೇ ಮಗ ಪಟಾಕಿ ಸಿಡಿದು ಸಾವು: ಶೋಕಸಾಗರದಲ್ಲಿ ತಂದೆ-ತಾಯಿ

ಇವರದ್ದು ಆರತಿಗೊಬ್ಬ ಕೀರ್ತಿಗೊಬ್ಬ ಎಂಬಂತೆ‌ ಇಬ್ಬರು ಮಕ್ಕಳನ್ನು ಪಡೆದಿದ್ದ ಕುಟುಂಬ. ತಂದೆ ಶ್ರೀನಿವಾಸ ರಾವ್ ಪತ್ನಿ ವೆಂಕೂಬಾಯಿ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿ ಚೆನ್ನಾಗಿ ಸಾಕಿ ಸಲುಹಿ, ಎದೆ ಎತ್ತರಕ್ಕೆ ಬೆಳೆಸಿದ್ದರು. ಎಸ್ಎಸ್ಎಲ್ಎಸಿ ಓದಿ ಮುಂದೆ ಉತ್ತಮ ಶಿಕ್ಷಣ ಪಡೆಯುವ ದಾರಿಯಲ್ಲಿದ್ದ ವಿದ್ಯಾರ್ಥಿಗಳ ವಿಧಿಯಾಟದ ಲಿಖಿತವೇ ಬೇರೆಯಾಗಿ, ತಂದೆ ತಾಯಿಯ ಕನಸುಗಳು ನುಚ್ಚು ನೂರಾಗಿದೆ. ಮೊದಲ ಮಗ ಗಗನ್ ದುರಾದೃಷ್ಟವಾಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಎರಡನೇ ಮಗ ಧನುಷ್ ರಾವ್ ಪಟಾಕಿ ಸಿಡಿದು ಕೊನೆಯುಸಿರೆಳೆದಿದ್ದಾನೆ.

ಹೌದು ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಟ್ಟಿದ್ದ ಪಟಾಕಿಗಳು ಸಿಡಿದು ಸಾವನ್ನಪ್ಪಿದ ಮುತ್ತೂರಿನ ಬಾಲಕ ಧನುಷ್ ರಾವ್ ತಂದೆ ತಾಯಿಯ ದುಃಖವನ್ನು ದೇವರ ಬಲ್ಲ.

ತಂದೆ ಶ್ರೀನಿವಾಸರಾವ್ ಪ್ರತಿದಿನ ಕೂಲಿ ಕೆಲಸ ಮಾಡಿ, ತಾಯಿ ವೆಂಕೂಬಾಯಿ ಗಾರ್ಮೆಂಟ್ಸ್ ನಲ್ಲಿ ದುಡಿದು ಎದೆ ಎತ್ತರಕ್ಕೆ ಬೆಳದ ಮಕ್ಕಳನ್ನ ವಿಧಿಯಾಟದಲ್ಲಿ ಕಳೆದುಕೊಂಡಿದ್ದಾರೆ.

ಇಬ್ಬರು ಗಂಡು ಮಕ್ಕಳಿದ್ದ ಸುಂದರ ಕುಟುಂಬದಲ್ಲಿ ವಿಧಿಯಾಟಗಳು ಜೀವನದ ಸಂತೋಷವನ್ನೆ ಕಸಿದುಕೊಂಡಿವೆ. ಶ್ರೀನಿವಾಸ ದಂಪತಿಗೆ ಇಬ್ಬರು ಗಂಡು ಮಕ್ಕಳು ಮೊದಲ ಮಗ ಗಗನ್ ಕಳೆದ ವರ್ಷ ಕೆರೆಯಲ್ಲಿ ಆಟ ಆಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಎಸ್ಎಸ್ಎಲ್ ಸಿ ಓದುತ್ತಿದ್ದ ಹುಡುಗನ ಕಳೆದುಕೊಂಡು ನೋವಿನಲ್ಲಿದ್ದ ಕುಂಟಬಕ್ಕೆ ಈ ವರ್ಷ ಗಣೇಶ ಹಬ್ಬ ಮತ್ತೊಂದು ಆಘಾತವನ್ನ ತಂದೊಡ್ಡಿದೆ.

ಮನೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಮೂರು ದಿನಗಳ ವಿಸರ್ಜನಾ ಮೆರವಣಿಗೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದ ಸಂತೋಷದಿಂದ್ದ ಎರಡನೇ ಮಗ ಧನುಶ್ ರಾವ್ ಮೇಲೆ ಪಟಾಕಿ ಸಿಡಿದು ಬಾರದ ಲೋಕಕ್ಕೆ ಹೋಗಿದ್ದಾನೆ.

ಮಗನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ತಾಯಿ:

ಎರಡನೇ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿ ವೆಂಕೂಬಾಯಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಚೇತರಿಕೆ ಕಂಡಿದ್ದಾರೆ. ಕುಟುಂಬಸ್ಥರ ನೋವು ಹೇಳತೀರದ್ದಾಗಿತ್ತು.

ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿನಿಂದಾಗಿ ಮತ್ಯಾರೋ ಅಮಾಯಕ ಮುಗ್ಧ ಜೀವಗಳ ಬಲಿಯಾಗಿವೆ. ವಿಧಿ ಎಷ್ಟು ಕ್ರೂರಿ ಎಂದರೆ…..ಪಾಪ ಆ ಪೋಷಕರಿಗೆ ಎಂದೆಂದಿಗೂ ಮರೆಯಲಾರದ ದುಃಖವನ್ನು ತಂದೊಡ್ಡಿದೆ.

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

11 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

15 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

18 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

20 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago