ಕೋಲಾರ: ತಾಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದ ಸರ್ವೇ ನಂ158 ರಲ್ಲಿನ ಕಲ್ಲೋಣಿ ಕೆರೆಯ ಕಾಲುವೆಯ ಅಕ್ಕ ಪಕ್ಕದ ರೈತರಿಗೆ ನೋಟಿಸ್ ನೀಡದೆ ಕಾಲುವೆ ತೆರೆವಿಗೆ ಅಧಿಕಾರಿಗಳು ಮುಂದಾಗಿ ರೈತರು ಬೆಳೆದ ಬೆಳೆಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಚಿಟ್ನಹಳ್ಳಿ ಗ್ರಾಮದಲ್ಲಿ ತಹಶಿಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಕೆರೆಯ ಕಾಲುವೆ ತೆರವಿಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಮತ್ತು ರೈತರ ಮಧ್ಯೆ ಗಲಾಟೆಯೂ ನಡೆಯಿತು ನಂತರ ರೈತರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದರು.
ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮದ ಸಿ.ಎಂ ರಮೇಶ್ ಮಾತನಾಡಿ ಗ್ರಾಮದಲ್ಲಿ ಹಿಂದೆ ಕರೆಯ ಜಾಗದಲ್ಲಿ ಹಾದುಹೋಗುವ ಕಾಲುವೆಯಿದ್ದು ದಿನ ಕ್ರಮೇಣ ಕೆರೆಯು ಜೀವಾಂಶವನ್ನು ಕಳೆದುಕೊಂಡು ಹಿಡುವಳಿ ನಂಬರ್‌ಗಳಾಗಿ ಪರಿವರ್ತನೆಯಾಗಿ ಅಕ್ಕ ಪಕ್ಕದ ರೈತರಿಗೆ ಮಂಜೂರಾತಿಯಾಗಿದೆ ಈ ಕಾಲುವೆಯನ್ನು ಕೊರುಕುಲು ಕಾಲುವೆ ಎಂದು ಕೂಡ ನಕ್ಷೆಯಲ್ಲಿ ನಮೂದಿಸಿದ್ದಾರೆ ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರೈತರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೆಲಸದ ದಿನಗಳಲ್ಲಿಯೇ ನಮ್ಮ ಕೆಲಸಗಳಿಗೆ ಸಿಗುವುದು ಅಪರೂಪ ಆದರೆ ಎರಡನೇ ಶನಿವಾರ ರಜಾ ದಿನ ಇದ್ದರೂ ಏಕಾಏಕಿ ತಹಶಿಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಯಾವುದೇ ರೀತಿಯ ಸರ್ವೆ ಮಾಡದೆ ಹಾಗೂ ಹದ್ದು ಬಸ್ತನ್ನು ಗುರ್ತಿಸದೆ ಕಾಲುವೆಯನ್ನು ಕೊರೆಯಲು ಮುಂದಾಗಿ ನಮ್ಮ ಬೆಳೆಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ ಜಮೀನಿಗೆ ಪ್ರವೇಶಿಸುವ ಮುಂಚೆ ಮುಂಗಡವಾಗಿ ನೋಟೀಸ್ ಕೂಡ ಜಾರಿ ಮಾಡಿಲ್ಲ ಸರ್ವೆ ಹಾಗೂ ಹದ್ದು ಬಸ್ತು ಗುರ್ತಿಸದೆ ಜಮೀನಿನಲ್ಲಿದ್ದ ಹಿಪ್ಪು ನೇರಳೆ ಸೊಪ್ಪನ್ನು ಹಾನಿ ಮಾಡಿ ಕೊರಕಲು ಕಾಲುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಕೇಳಲು ಹೋದ ರೈತರ ವಿರುದ್ದ ಆವಾಚ್ಯ ಶಬ್ದಗಳಿಂದ ಬೈದು ನಿಮ್ಮ ವಿರುದ್ಧ ಕೇಸು ದಾಖಲಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ತಾಲ್ಲೂಕು ಕಛೇರಿಯ ಅಧಿಕಾರಿಗಳು ಪ್ರಭಾವಿಗಳ ಜಮೀನಿಗೆ ಹೋಗಿ ಬರಲು ನಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಹುನ್ನಾರ ಮಾಡುತ್ತಾ ಇದ್ದಾರೆ ಹೊರತು ಕಾನೂನು ಬದ್ಧವಾಗಿ ಕೊರಕಲು ಕಾಲುವೆ ತೆರೆಯುವ ಉದ್ದೇಶ ಅವರಿಗಿಲ್ಲ ಜಮೀನುಗಳ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅನಿತ ಎನ್, ಗ್ರಾಮಸ್ಥರಾದ ಚೌಡರೆಡ್ಡಿ, ಸಿ.ಎಂ ನಾರಾಯಣಸ್ವಾಮಿ, ಶ್ರೀನಿವಾಸ್, ದಿವಾಕರ್, ಮಂಜುನಾಥ್, ಆನಂದ್, ಸಂತೋಷ್, ಪುರುಷೋತ್ತಮ್, ಸೇರಿದಂತೆ ರೈತರು ಇದ್ದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…