ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಆಪಾದಿತರ ಮೇಲೆ ಕಾನೂನು ಕ್ರಮ

ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಮಗುವೊಂದನ್ನು ವಾಮಾಚಾರಕ್ಕೆ ಬಲಿ ಕೊಡಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿಯನ್ನು ಆಧರಿಸಿ ತಡರಾತ್ರಿ ಪ್ರಕರಣದಲ್ಲಿ ಭಾಗಿಯಾದ ಎ1 ಮತ್ತು ಎ4 ಆಪಾದಿತರಾದ ಸೈಯದ್ ಇಮ್ರಾನ್ ಮತ್ತು ಮಂಜುಳ ಇವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಸಹಾಯವಾಣಿ-1098ಗೆ ಜನವರಿ 3ರಂದು ಬೆಳಗ್ಗೆ 11.30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಪಟ್ಟಣದಲ್ಲಿ 01 ವರ್ಷದ ಗಂಡು ಮಗುವನ್ನು ವಾಮಾಚಾರಕ್ಕೆ ಬಲಿ ಕೂಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ಅನಾಮಧೇಯವಾಗಿ ದೂರು ಸ್ವೀಕೃತವಾಗಿತ್ತು.

ಈ ದೂರನ್ನಾಧರಿಸಿ ಮಧ್ಯಾಹ್ನ 12.30 ಗಂಟೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹೊಸಕೋಟೆ ಇವರು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸದರಿ ಸ್ಥಳದಲ್ಲಿ ಹೊಸಕೋಟೆ ತಾಲ್ಲೂಕು, ಸೂಲಿಬೆಲೆ ಹೋಬಳಿ, ಸೂಲಿಬೆಲೆ ಪಟ್ಟಣದ ಜನತಾ ಕಾಲೋನಿಯಲ್ಲಿ ಸೈಯದ್ ಇಮ್ರಾನ್ ಮತ್ತು ನಜ್ಜಾ ಕೌಸರ್ ದಂಪತಿಗಳು ವಾಸವಾಗಿರುವುದು ಕಂಡು ಬಂದಿರುತ್ತದೆ.

ತದನಂತರ, ಪರಿಶೀಲಿಸಲಾಗಿ ಮನೆಯ ನೆಲ ಮಹಡಿ ಕೊಠಡಿಯಲ್ಲಿ ಗುಂಡಿ ಆಗೆದು ಪೂಜೆಗೆ ತಯಾರಿ ಮಾಡಿಕೊಂಡಿರುವುದು ಗಮನಿಸಲಾಗಿರುತ್ತದೆ. ಮಗುವು ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮಗುವನ್ನು ಕರೆತರುವಂತೆ ದಂಪತಿಗಳಿಗೆ ತಿಳಿಸಿದರೂ ಸಹ ಮಗುವನ್ನು ಕರೆತರಲು ಹಿಂದೇಟು ಹಾಕಿರುತ್ತಾರೆ. ತದನಂತರ ಕುಟುಂಬದ ಸದಸ್ಯರೊಬ್ಬರು ಮಗುವನ್ನು ಕರೆತಂದಿರುತ್ತಾರೆ. ಕೂಡಲೇ ಮಗುವನ್ನು ವಶಕ್ಕೆ ಪಡೆದು ರಕ್ಷಣೆ ಮತ್ತು ಪಾಲನೆ ಹಾಗೂ ಪೋಷಣೆಗಾಗಿ ಸರ್ಕಾರಿ ಶಿಶು ಮಂದಿರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಶಕ್ಕೆ ನೀಡಲಾಗಿರುತ್ತದೆ.

ಮುಂದುವರೆದು, ಮಗುವಿನ ಬಗ್ಗೆ, ವಿಚಾರಿಸಲಾಗಿ, ಮಗುವು ಸೈಯದ್ ಇಮ್ರಾನ್ ಮತ್ತು ನಜ್ಞಾ ಕೌಸರ್ ದಂಪತಿಗಳ ಮಗುವಾಗಿರುವುದಿಲ್ಲ. ಕೂಲಂಕುಷವಾಗಿ ವಿಚಾರಿಸಿದಾಗ ಮಗುವು ಜೈವಿಕವಾಗಿ ಕೋಲಾರ ಮೂಲದ ಮಂಜುಳ ಮತ್ತು ರಾಮಪ್ಪ ದಂಪತಿಗಳಿಗೆ ಸೇರಿದ ಮಗುವಾಗಿರುತ್ತದೆ ಸದರಿ ಮಗುವನ್ನು 08 ತಿಂಗಳ ಹಿಂದೆ ದತ್ತು ಪಡೆಯಲಾಗಿದೆ ಎಂದು ತಿಳಿಸಿರುತ್ತಾರೆ.

ದತ್ತು ಪಕ್ರಿಯೆ ಕುರಿತು ಪರಿಶೀಲಿಸಲಾಗಿ ಸದರಿ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳವಡಿಸದೆ ಕಾನೂನು ಬಾಹಿರವಾಗಿ ದತ್ತು ಪಡೆದಿರುವುದು ಕಂಡುಬಂದಿರುತ್ತದೆ.

ದಿನಾಂಕ:04.01.2026 ರಂದು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರಿ ಶಿಶು ಮಂದಿರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿ ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಗುವಿನ ರಕ್ಷಣೆ ಮತ್ತು ಪೋಷಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲು ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿರುತ್ತಾರೆ.

ಮುಂದುವರೆದು, ಮಗುವಿನ ಜೈವಿಕ ಪೋಷಕರಾದ ಮಂಜುಳ ಮತ್ತು ರಾಮಪ್ಪ ಇವರನ್ನು ವಿಚಾರಿಸಲಾಗಿ 02.04.2025 ರಂದು ಜಾಲಪ್ಪ ಆಸ್ಪತ್ರೆಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ ಗಂಡು ಮಗುವನ್ನು ಕಾನೂನು ಬಾಹಿರವಾಗಿ ಸೈಯದ್ ಇಮ್ರಾನ್ ಮತ್ತು ನಜಾ ಕೌಸರ್ ದಂಪತಿಗಳಿಗೆ ನೀಡಿರುವುದು ಕಂಡುಬಂದಿರುತ್ತದೆ.

ಪ್ರಕರಣದ ಕುರಿತಂತೆ, ದಿನಾಂಕ:04.1.01.2026 ರಂದು ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಮತ್ತು ಪ್ರಕರಣದಲ್ಲಿ ಭಾಗಿಯಾದ ಸೈಯದ್ ಇಮ್ರಾನ್, ನಮ್ಮಾ ಕೌಸರ್, ಜೈವಿಕ ಪೋಷಕರಾದ ರಾಮಪ್ಪ, ಮಂಜುಳ, ಮಗುವಿನ ಜನನ ಪತ್ರ ನೀಡಲು ಸಹಕರಿಸಿದ ಶ್ರೀರಂಗ ಆಸ್ಪತ್ರೆ ಸೂಲಿಬೆಲೆ, ಮುಖ್ಯ ನೊಂದಣಾಧಿಕಾರಿಗಳು ಸೂಲಿಬೆಲೆ ವೃತ್ತ ಹೊಸಕೋಟೆ, ದತ್ತು ಪತ್ರಕ್ಕೆ ಸಹಿ ಹಾಕಿರುವ ವಕೀಲರಾದ ಅಂಬರೀಶ್ ಹಾಗೂ ಮಗುವನ್ನು ನಿಧಿ ಅಸೆಗಾಗಿ ಬಲಿಕೊಡಲು ಯತ್ನಿಸಿದವರ ವಿರುದ್ಧ ಪೊಲೀಸ್ ಠಾಣೆ ಹೊಸಕೋಟೆ ಉಪವಿಭಾಗ ಇಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ದೂರನ್ನು ದಾಖಲಿಸಿರುತ್ತಾರೆ. ದೂರಿನ ಆಧಾರದ ಮೇಲೆ ದಿನಾಂಕ:04.01.2026 ರಂದು ಪೊಲೀಸ್ ಠಾಣೆ ಹೊಸಕೋಟೆ ಉಪವಿಭಾಗ ಇಲ್ಲಿ ಎಫ್ಐಆರ್ ಸಂಖ್ಯೆ:02/2026 ಪ್ರಕರಣ ದಾಖಲಿಸಲಾಗಿದೆ.

*ಸಹಾಯವಾಣಿ 1098 ಸಂಪರ್ಕಿಸಿ*
ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರಕರಣದ ಹಾದಿ/ದಿಕ್ಕು ಬದಲಿಸಲು ಅನುವಾಗದಂತೆ ಹಾಗೂ ಯಾವುದೇ ರೀತಿಯ ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಹಾಗೂ ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ-1098, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಮತೆಯ ತೊಟ್ಟಿಲನ್ನು ಸಾರ್ವಜನಿಕರು ಸಂಪರ್ಕಿಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

42 minutes ago

ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

3 hours ago

ಛಲವಾದಿ‌‌ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧ ಆಯ್ಕೆ

ಛಲವಾದಿ‌‌ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ್ಷ ನರೇಶ್ ನೇತೃತ್ವದಲ್ಲಿ ನಗರದ…

4 hours ago

ಖತರ್ನಾಕ್ ಬೈಕ್ ಕಳ್ಳರ ಬಂಧನ: ಬಂಧಿತರಿಂದ 18.30 ಲಕ್ಷ ಮೌಲ್ಯದ 27 ಬೈಕ್ ಗಳು ವಶ

ಬೆಳಗಾವಿಯ ಸಂಕೇಶ್ವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಅಂತಾರಾಜ್ಯ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 18.30 ಲಕ್ಷ ಮೌಲ್ಯದ…

4 hours ago

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

10 hours ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

11 hours ago