ನಾನು ಯಾರಿಂದ ಯಾವತ್ತೂ ಭಿಕ್ಷೆ ಪಡೆದಿಲ್ಲ- ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ತಿರುಗೇಟು

ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಶಾಸಕರಾಗುವ ಮುಂಚಿನಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಬಮೂಲ್ ನಿರ್ದೇಶಕರಾಗಿ ಸೇರಿದಂತೆ ನಾನು ಅನುಭವಿಸಿರುವ ಆಕಾರ ಹಾಗೂ ಹುದ್ದೆಗಳು ರಾಜಕೀಯವಾಗಿ ನನ್ನ ಪ್ರಾಮಾಣಿಕತೆ, ಶ್ರಮದಿಂದ ಗಳಿಸಿರುವುದೇ ಹೊರತು ಯಾರ ಭಿಕ್ಷೆಯಿಂದ ಬಂದಿದ್ದಲ್ಲ. ಯಾವುದೇ ಭ್ರಷ್ಟಾಚಾರ ಮಾಡದೇ ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದೇನೆ ಎಂದು ಮಾಜಿ ಶಾಸಕರು ಧರ್ಮಸ್ಥಳಕ್ಕೆ ಬಂದು ನಿರೂಪಿಸಲಿ, ನಾನೂ ಬರಲು ಸಿದ್ಧನಿದ್ದೇನೆ ಎಂದು ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿರುಗೇಟು ನೀಡಿದ್ದಾರೆ.

ನಗರದ ಬಮೂಲ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಮೂಲ್ ಚುನಾವಣೆ, ಕೆಎಂಎಫ್ ನಿರ್ದೇಶಕ ಸ್ಥಾನ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ನಾನು ಹಾಕಿದ ಭಿಕ್ಷೆ ಎನ್ನುವ ಮಾಜಿ ಶಾಸಕರ ಮಾತಿನಲ್ಲಿ ಸತ್ಯವಿಲ್ಲ. ಅವರು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರು. ಆದರೆ ನಾನು  1995ರಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ ಅವರ ಪರವಾಗಿ ಕೆಲಸ ಮಾಡಿದ್ದೆ. 1997ರಲ್ಲಿ ಮಜರಾಹೊಸಹಳ್ಳಿ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಬರಲು ಶ್ರಮಿಸಿದ್ದೆ. ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜೀವ್ ಗ್ರಾಂ ಶಕ್ತಿ ಕೇಂದ್ರದ ಪ್ರತಿನಿಯಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕರು ರಾಜಕೀಯವಾಗಿ ಸಕ್ರಿಯವಾಗುವ ಮುಂಚೆಯೇ ಗ್ರಾ.ಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ ನಂತರ ಅಧ್ಯಕ್ಷನಾಗಿದ್ದೆ. ನಂತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಹ ಸ್ಪರ್ಧಿಸಿ, ಕಡಿಮೆ ಅಂತರದಿಂದ ಸೋತಿದ್ದೆ. ನನಗೆ ಪಕ್ಷ ನೀಡಿದ್ದಕ್ಕಿಂತ ಹೆಚ್ಚಾಗಿ ಅದರ ಎರಡರಷ್ಟು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗಿಲ್ಲ. ಅದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಜೆ.ನರಸಿಂಹಸ್ವಾಮಿ ಅವರಿಗೆ ನಾನು ಬೆಂಬಲಿಸಿದಾಗ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿತ್ತು. ಈಗಿನ ಶಾಸಕ‌ ಧೀರಜ್ ಮುನಿರಾಜು ಸಹ ಉತ್ತಮ ವ್ಯಕ್ತಿ ಎಂದು ನಂಬಿ ಬೆಂಬಲಿಸಿದ್ದೇನೆ. ಭ್ರಷ್ಟರಾದರೆ ಅವರು ಯಾರೇ ಆಗಲೀ ಅವರನ್ನು ನಾನು ಬೆಂಬಲಿಸುವುದಿಲ್ಲ. ಬಮೂಲ್ ಚುನಾವಣೆಗೆ ನನ್ನ ಯೋಗ್ಯತೆ ನೋಡಿ ಸ್ಪರ್ಧಿಸಲು ಅವಕಾಶ ನೀಡಿದ್ದರು. ನನಗೆ ನೀವು ಭಿಕ್ಷೆ ಕೊಡುವಷ್ಟು ಯೋಗ್ಯರಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕರ ಸಹೋದರನನ್ನು ಏಕೆ ನಿಲ್ಲಿಸಲಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಟಿಕೆಟ್ ನಾನು ಕೇಳಿರಲಿಲ್ಲ : 

ಕಾಂಗ್ರೆಸ್ ಕಟ್ಟಾಳುವಾಗಿ ಅಡಿಪಾಯ ಹಾಕಿದ್ದೇನೆ. ಡಿಕೆಶಿ ಪಟ್ಟಾ ಶಿಷ್ಯ ನಾನು. ನಾನೇನಾದರೂ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿ ಅಂತಾ ನಿಮಗೆ ಅರ್ಜಿ ಹಾಕಿದ್ನಾ…ನನಗೆ ಜಿ.ಪಂ ನಿಂತ್ಕೋ ಅಂತಾ ಬಲವಂತ ಮಾಡಿದವರು ನೀವು, ಬೇಳಾಡಿದ್ದು ನೀವು. ಅಂದು ಸಿ.ನಾರಾಯಣಸ್ವಾಮಿ, ಡಾ.ವಿಜಯಕುಕುಮಾರ್ ರವರನ್ನು ಎದುರಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ನಾನು ಯಾವತ್ತೂ ನಿಮ್ಮ ಬಳಿ ಭಿಕ್ಷೆ ಬೇಡಿಲ್ಲ ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದರೆ ಅದು ಭಿಕ್ಷೆ ಅಂದುಕೊಳ್ಳುತ್ತಿದ್ದೆ ಎಂದರು.

ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ನಾನು ರಾಜಕಾರಣದಲ್ಲಿ ಯಾರೀಗೂ ಮೋಸ ಮಾಡಿಲ್ಲ. ನಾನು ಯಾವತ್ತೂ ನಿಮ್ಮ ಬಳಿ ಭಿಕ್ಷೆ ಬೇಡಿಲ್ಲ. ನಿಮ್ಮ ತಮ್ಮನಿಂದ ಭಿಕ್ಷೆ ಪಡೆಯುವ ಕೀಳು ಮಟ್ಟಕ್ಕೆ ಇಳಿದಿಲ್ಲ. ನನಗೆ ನೀವು ಭಿಕ್ಷೆ ಕೊಡುವಷ್ಟು ಯೋಗ್ಯರಲ್ಲ ಎಂದರು.

ಕೆಎಂಎಫ್ ಕೇಳಿಲ್ಲ

ನಾನು ಕೆಎಂಎಫ್ ನಿರ್ದೇಶಕರಾಗಲು ಸಹ ಭಿಕ್ಷೆ ಕೊಟ್ಟಿದ್ದು  ಎಂದು ಹೇಳಿದ್ದೀರಿ. ಅದು ಸುಳ್ಳು, ನನಗೆ ನಿರ್ದೇಶಕರಾಗುವ ಉದ್ದೇಶವೇ ಇರಲಿಲ್ಲ. ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕೆಎಂಎಫ್ ನಿರ್ದೇಶಕರಾಗಿಸಿದರು. ಇದು ಅವರ ಹಾಕಿದ ಭಿಕ್ಷೆ ಎನ್ನುಬಹುದು.

ಕಮಿಟ್ಮೆಂಟ್ ರಾಜಕಾರಣ ಮಾಡಲ್ಲ‌ ನಾನು ರಾಜಕಾರಣದಲ್ಲಿ ಬಡವರ ಹಾಗೂ ಅಧಿಕಾರಿಗಳ ಹೊಟ್ಟೆ ಬಗೆದು ಹಣ ಸಂಪಾದನೆ ಮಾಡಿಲ್ಲ ಎಂದರು.

 ಡಿಕೆಶಿಗೆ ಹಾರ ಹಾಕಿದ್ದು ತಾಲೂಕಿಗೋಸ್ಕರ:

ಕೆಪಿಸಿಸಿ ವಕ್ತಾರರು ಆರೋಪಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ರಾತ್ರೋರಾತ್ರಿ ಹೋಗಿಲ್ಲ. ತಾಲೂಕಿನಲ್ಲಿ ಬಮೂಲ್‍ನಲ್ಲಿ  ಕೆಲಸಗಳಾಗಬೇಕು. ಈ ಹಿಂದೆ ಬಮೂಲ್ ಉತ್ಪನ್ನಗಳ ಘಟಕಕ್ಕೆ ಡಿ.ಕೆ.ಶಿವಕುಮಾರ್ ಜಮೀನು ಮಂಜೂರು ಮಾಡಿಸಿದ್ದಾರೆ. ಅವರಿಂದ ನಮ್ಮ ತಾಲೂಕಿಗೆ ಕೆಲಸಗಳಾಗಬೇಕಿದೆ. ಅವರ ಮೇಲಿನ ಅಭಿಮಾನದಿಂದ ಹಾರ ಹಾಕಿ ಬಂದೆ ಎಂದರು.

ಕಾಂಗ್ರೆಸ್ ಶಕ್ತಿಹೀನ:

ನಿಮ್ಮ ಬಗ್ಗೆ ಅಧಿಕಾರಿಗಳಲ್ಲಿ ಒಳ್ಳೆ ಅಭಿಪ್ರಾಯ ಇಲ್ಲ. ಅಪ್ಪನ ಬಗ್ಗೆ ಮಾತನಾಡಿರುವುದು ಆಕಸ್ಮಿಕವಾಗಿ ಬಂದಿರುವುದು. ಆದರೆ ನನ್ನ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲು ಹೊರಟಿದ್ದರು. ಅದಕ್ಕಾಗಿ ನಾನು ಅಡಾಸ್ ಪದ ಬಳಸಬೇಕಾಯಿತು.  ತಾಲೂಕಿನಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನೂ ನಿಮ್ಮಿಂದ ಉದ್ದಾರ ಆಗಿಲ್ಲ.  ಪಕ್ಷ ಬಿಟ್ಟು ಹೊರಬಂದು ನಿಮ್ಮ ಶಕ್ತಿ ಪ್ರದರ್ಶಿಸಿ, ಇವರು ಪಕ್ಷ ಬಿಟ್ಟರೆ ಕಾಂಗ್ರೆಸ್ ಫೀನಿಕ್ಸ್‍ನಂತೆ ಮೇಲೇಳುತ್ತದೆ. ಕೊವಿಡ್ ಸಮಯದಲ್ಲಿ ಯಾರು ಜನರಿಗೆ ಸಹಾಯ ಮಾಡಿದ್ದರೋ ಅವರನ್ನು ಜನ ಬೆಂಬಲಿಸಿದ್ದಾರೆ. ಯಾರಿಗೂ ಸಹಾಯ ಮಾಡದವರನ್ನು ದೂರ ನಿಲ್ಲಿಸಿದ್ದಾರೆ. ಶಾಸಕರಾಗಿದ್ದಾಗ ಅಧಿಕಾರಿಗಳಿಂದ ಹಣ ಪಡೆದಿಲ್ಲ ಎಂದು ನಿರೂಪಿಸಿ, ನಾನು ಏನು ಜನರಿಗೆ ಸಹಾಯ ಮಾಡಿದ್ದೇನೆ ನೀವು ಏನು ಮಾಡಿದ್ದೀರಿ, ಎನ್ನುವುದು ಸಾಬೀತು ಮಾಡಲು ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದರು.

ಒಬ್ಬ ಕಾಂಗ್ರೆಸ್ ಕಾರ್ಯಕರ್ತ, ನಿಮ್ಮಿಂದ ಉದ್ಧಾರ ಆಗಿಲ್ಲ. ಯಾರಾದರೂ ನಿಮ್ಮಿಂದ ಬದುಕು ಕಟ್ಟಿಕೊಂಡಿದ್ದಾರಾ… ನಿಮ್ಮ ಬಗ್ಗೆ ಅಧಿಕಾರಿಗಳಲ್ಲಿ ಒಳ್ಳೆ ಅಭಿಪ್ರಾಯ ಇದಿಯಾ.. ನೀವು ಕೊಟ್ಟಿರೋ ಕಾಟಕ್ಕೆ ಎಲ್ಲಾ ಅಧಿಕಾರಿಗಳು ರಕ್ತ ಕಣ್ಣೀರು ಸುರಿಸಿದ್ದಾರೆ.

ಭಿಕ್ಷೆ ತಗೋಂಡವರು ನೀವು. ಆರ್‌.ಜಿ.ವೆಂಕಟಾಚಲಯ್ಯ, ವೀರಪ್ಪ‌ಮೊಯ್ಲಿ, ಎಂಜಿ ಶ್ರೀನಿವಾಸ್, ರಂಗರಾಜಣ್ಣನವರು ನಿಮಗೆ ಭಿಕ್ಷೆ ಕೊಟ್ಟಿದ್ದು, ನೀವು ಪಕ್ಷ ಬಿಟ್ಟು ಹೊರ‌ಬಂದು ಮಾತಾಡಿ, ನಿಮ್ಮ ಶಕ್ತಿಯನ್ನು ಪ್ರದರ್ಶಿಸಿ. ಕಾಂಗ್ರೆಸ್ ನಲ್ಲಿ ಡ್ರೈವರ್ ಸರಿ ಇಲ್ಲ. ಕೋವಿಡ್ ನಲ್ಲಿ ಜನಕ್ಕೆ ಅನ್ಯಾಯ ಮಾಡಿದವರೆಲ್ಲರೂ ಸೋತಿದ್ದಾರೆ.. ನಾನು ಸೋಲೋದು ಜನರಿಗೆ ಅನ್ಯಾಯ ಮಾಡಿದಾಗ ನಿಮ್ಮಿಂದಲ್ಲ ಎಂದರು.

ಸುದ್ಧಿಗೋಷ್ಟಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ನಾಗರಿಕ ಹಿತರಕ್ಷಣಾ ಸಮಿತಿಯ ರವೀಂದ್ರ ಕುಮಾರ್ ಮತ್ತಿತರರಿದ್ದರು.

Ramesh Babu

Journalist

Share
Published by
Ramesh Babu

Recent Posts

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

40 minutes ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

4 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

4 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

15 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

16 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

16 hours ago