ಟಿಎಪಿಎಂಸಿಎಸ್ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಎನ್ ಡಿಎ ಮೈತ್ರಿಕೂಟ ಗೆದ್ದಿದೆ. ಇನ್ನು ಅತ್ಯಂತ ಕಡಿಮೆ ಅಂತರದಲ್ಲಿ ಮೂರು ಸ್ಥಾನಗಳು ಪರಾಜಿತಗೊಂಡಿವೆ. ಜೆಡಿಎಸ್ ಹಾಗೂ ಬಿಜೆಪಿಗರು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ನಾಗೇಶ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ…. ಹುಸ್ಕೂರ್ ಆನಂದ್ ಹಾಗೂ ಇತರೆ ಜೆಡಿಎಸ್ ಮುಖಂಡರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ದೊಡ್ಡಬೆಳವಂಗಲ ಹೋಬಳಿ ಜೆಡಿಎಸ್ ಅಧ್ಯಕ್ಷ ಹಾಗೂ ವಕೀಲ ಸತೀಶ್ ಹೇಳಿದ್ದಾರೆ.
ನಾಗೇಶ್ ಅವರು ನಮ್ಮ ಪಕ್ಷದ ಸಕ್ರಿಯ ಸದಸ್ಯ, ಆದರೆ ಕೆಲವೊಂದು ಸಭೆಗಳಿಗೆ ಬರುತ್ತಿರಲಿಲ್ಲ. ಆದ್ದರಿಂದ ಪಕ್ಷದ ಕೆಲವೊಂದು ವಾಸ್ತವಾಂಶುಗಳು ಗೊತ್ತಿಲ್ಲ. ಜೆಡಿಎಸ್ ನಲ್ಲಿ ಕಿತ್ತಾಟ, ಆಂತರಿಕ ಕಚ್ಚಾಟ, ಭಿನ್ನಾಭಿಪ್ರಾಯ, ನಾಯಕರಲ್ಲಿ ಪರಸ್ಪರ ಸಮನ್ವಯದ ಕೊರತೆ ಪ್ರಾರಂಬವಾಗಿದ್ದು 2019ರ ಅಪ್ಪಯ್ಯಣ್ಣನವರ ಬಮೂಲ್ ಚುನಾವಣೆಯಲ್ಲಿ. ಅಂದು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಂತಹ ಅಪ್ಪಯ್ಯಣ್ಣನವರ ಸೋಲಿಗೆ ಒಂದು ವರ್ಗ ಟೊಂಕ ಕಟ್ಟಿ ಕೆಲಸ ಮಾಡಿತ್ತು. ನಂತರ 2020ರ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಮಂಡಿಬ್ಯಾಡರಹಳ್ಳಿ ಅಶ್ವತ್ಥ್ ನಾರಾಯಾಣ ಅವರಿಗೆ ಟಿಕೆಟ್ ಕೊಡಲೇಬಾರದು ಎಂಬ ಉದ್ದೇಶದಿಂದ ಅಂದು ಅಪ್ಪಯ್ಯಣ್ಣ ಮತ್ತು ಅವರ ತಂಡವನ್ನು ಚುನಾವಣೆಯಿಂದ ಹೊರಗಿಟ್ಟು, ಚುನಾವಣೆ ನಡೆಸುವ ಪರಿಸ್ಥಿತಿಗೆ ಕಾರಣರಾದರು. ಪಕ್ಷದಲ್ಲಿ ಒಳ ಸಮಸ್ಯೆಗಳನ್ನು ಬದಿಗಿಟ್ಟು ಒಮ್ಮತದಿಂದ ಶ್ರಮಿಸುವ ಮೂಲಕ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವು ಎಂದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ವಿರುದ್ಧವಾಗಿ ಚಟುವಟಿಕೆ ನಡೆಸಿದ್ದರು. ಪಕ್ಷದ ಯಾವುದೇ ಸಭೆಗೆ ಹಾಜರಾಗದೇ ಪಕ್ಷ ಸಂಘಟನೆ ಮಾಡುವಲ್ಲಿ ವಿಫಲರಾದರು. ಇದೆಲ್ಲವೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತಿಳಿದಿದೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಹಾಗೂ ತಾಲೂಕು ಅಧ್ಯಕ್ಷರಾದ ಲಕ್ಷ್ಮಿಪತಯ್ಯ ನೇತೃತ್ವದಲ್ಲಿ ನಡೆದ ಸಭೆಗಳಿಗೆ ಗೊಂದಲ ಮೂಡಿಸುತ್ತಿರುವ ವ್ಯಕ್ತಿಗಳು ಹಾಜರಾಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಆಂತರಿಕ ವಿಚಾರಗಳನ್ನು ಕೂತು ಬಗೆಹರಿಸಿಕೊಳ್ಳುತ್ತೇವೆ. 2028ರ ವಿಧಾನಸಭಾ ಚುನಾವಣೆ ನಮ್ಮ ಮುಂದೆ ಇದೆ. ಆ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯನ್ನ ಗೆಲ್ಲಿಸಬೇಕಾಗಿದೆ ಈ ನಿಟ್ಟಿನಲ್ಲಿ ಈಗಿನಿಂದಲೇ ನಾವು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಬಜೆಪಿ ನಿಷ್ಠಾವಂತ ಕಾರ್ಯಕರ್ತ ಪುಟ್ಟಬಸವರಾಜು ಸೋಲಿಗೆ ಯಾರು ಕಾರಣ…? ಮಾಜಿ ಶಾಸಕ ಟಿ.ವೆಂಕಟರಮಣಯ್ಯ ವಿರುದ್ಧ ರಾಜಕಾರಣ ಮಾಡಿದ್ದ ಹಾದ್ರಿಪುರದ ಪುಟ್ಟಶ್ಯಾಮಣ್ಣನವರ ಪತ್ನಿ ಶಾರಧಮ್ಮ ಸೋಲಿಗೆ ಯಾರು ಕಾರಣ….? ಸಿಂಡಿಕೇಟ್ ಅಭ್ಯರ್ಥಿ ಲಕ್ಷ್ಮಿನಾಗೇಶ್ ಅವರಿಗೆ ಹೆಚ್ಚು ಮತ ಬಂದಿದೆ. ಹೀಗಿದ್ದಾಗ ಶಾರಧಮ್ಮಗೆ ಏಕೆ ಕಡಿಮೆ ಮತ ಬಂದವು…? ಸಿಂಡಿಕೇಟ್ ಅಂದಮೇಲೆ ಸಿಂಡಿಕೇಟ್ ಗೆ ಮಾತ್ರ ಮತ ಹಾಕಬೇಕಲ್ವಾ ಎಂದು ಹೇಳಿದರು.
ಎನ್ ಡಿಎ 8 ಅಭ್ಯರ್ಥಿಗಳು ಪಡೆದಿರುವ ಸರಾಸರಿ ಒಟ್ಟು ಮತಗಳ ಸಂಖ್ಯೆ 2172 ಮಾತ್ರ. 2172 ಮತಗಳಿಂತ ಕಡಿಮೆ ಮತಗಳನ್ನು ಪಡೆದಿರುವವರು ಸೋತಿದ್ದಾರೆ. ಪರಿಶಿಷ್ಟ ಪಂಗಡದ ರಾಮಾಂಜಿನಪ್ಪನವರು 1876 ಮತಗಳನ್ನು ಪಡೆದಿದ್ದಾರೆ. ಇದಕ್ಕೆ ಕಾರಣ ರೈತ ಸಂಘದಿಂದ ಸ್ಪರ್ಧೆ ಮಾಡಿದ್ದರಿಂದ ರೈತಾಪಿ ಮತದಾರರು ಚಿನ್ನದಂತಹ ಮತಗಳನ್ನು ಹಾಕಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನವರು ಎನ್ ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಅದೇರೀತಿ ಎನ್ ಡಿಎ ನವರು ಕಾಂಗ್ರೆಸ್ ಗೆ ಮತ ಹಾಕಿರುವ ಎಲ್ಲಾ ಬೆಳವಣಿಗೆಗಳು ನಡೆದಿವೆ ಎಂದರು.
ಹುಸ್ಕೂರ್ ಆನಂದ್ ಅವರು ಕಾಂಗ್ರೆಸ್ ಜೊತೆ ಯಾವುದೇ ರೀತಿಯ ಒಳ ಒಪ್ಪಂದ ಮಾಡಿಕೊಂಡಿಲ್ಲ. ತಾಲೂಕಿನ ಎಲ್ಲಾ ವಿಎಸ್ ಎಸ್ ಎನ್ ಕಾರ್ಯದರ್ಶಿ ಗಳು ಕೆಂಪೇಗೌಡರ ಪರ ಕೆಲಸ ಮಾಡಿದ್ದಾರೆ. 5 ಸಾವಿರಕ್ಕಿಂತ ಹೆಚ್ಚು ಮತದಾರರಲ್ಲಿ 4 ಸಾವಿರ ಮತದಾರರು ವಿಎಸ್ ಎಸ್ ಎನ್ ನಲ್ಲಿ ಸಾಲ ತೆಗೆದುಕೊಂಡಿದ್ದಾರೆ. ವಿಎಸ್ ಎಸ್ ಎನ್ ನಲ್ಲಿ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆ ಎನ್ ಡಿಎಗೆ ಹಿನ್ನಡೆಯಾಗಿದೆ ಎಂದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…