ಕೋಲಾರ: ಉಚಿತ ಗ್ಯಾರಂಟಿಗಳನ್ನು ರದ್ದು ಮಾಡಿ ದುಡಿಯುವ ಕೈಗೆ ಉದ್ಯೋಗ ನೀಡಿ ಸ್ಥಗಿತಮಾಡಿರುವ ನಬಾರ್ಡ್ ಸಾಲ ಯೋಜನೆಯ ಆದೇಶವನ್ನು ವಾಪಸ್ ಪಡೆದು ನರೇಗಾದಲ್ಲಿ 365 ದಿನ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಫೆ.6 ರ ಗುರುವಾರ ತಲೆ ಮೇಲೆ ಕಲ್ಲು ಹೊತ್ತುಕೊಂಡು ಬಂಗಾರಪೇಟೆ ರೈಲ್ವೆ ಇಲಾಖೆ ಮುತ್ತಿಗೆ ಹಾಕಲು ನಗರದ ಇಂದಿರಾ ಕ್ಯಾಂಟಿನ್ ಉದ್ಯಾನವನದಲ್ಲಿ ಕರೆದಿದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ದುಡಿಯುವ ಕೈಗೆ ಕೆಲಸ ನೀಡದೆ ಅಧಿಕಾರದ ಆಸೆ ಮೈಗೂಡಿಸಿಕೊಂಡು ಮತಬಾಂಧವರಿಗೆ ಚುನಾವಣೆಯಲ್ಲಿ ಉಚಿತ ಗ್ಯಾರಂಟಿಗಳನ್ನು ನೀಡಲು ರಾಜಕೀಯ ಪಕ್ಷಗಳು ತಾ ಮುಂದು ನಾ ಮುಂದು ಎಂದು ಪೈಪೋಟಿ ನಡೆಸಿ ಬಿಕ್ಷೆ ರೀತಿಯಲ್ಲಿ ಎರಡು ಸಾವಿರ ರೂಪಾಯಿ ಭಾಗ್ಯ ನೀಡಿ ಸೊಂಬೇರಿಗಳ್ಳನ್ನಾಗಿ ಮಾಡಿ ಕೃಷಿ ಕೇತ್ರಕ್ಕೆ ಕೂಲಿಕಾರ್ಮಿಕರ ಅಭಾವ ಸೃಷ್ಠಿ ಮಾಡಿ ಬಹುರಾಷ್ಟ್ರೀಯ ಕಂಪನಿಗಳ ಕಪಿ ಮುಷ್ಠಿಗೆ ದೇಶವನ್ನು ಅಡವಿಟ್ಟು ಬಡವರ ಆರೋಗ್ಯ ಶಿಕ್ಷಣವನ್ನು ದುಬಾರಿ ಮಾಡಿ ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತಿರುವ ಸರ್ಕಾರಗಳ ಜನ ವಿರೋದಿ ನೀತಿ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬೆಂಬಲ ಬೆಲೆಗಾಗಿ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಯನ್ನು ಸರ್ಕಾರ ಗಂಬೀರವಾಗಿ ಪರಿಗಣಿಸುತ್ತಿಲ್ಲ ಕಷ್ಟಪಟ್ಟು ಬೆಳೆಯುವ ರೈತರ ಉತ್ಪನ್ನಗಳಿಗೆ ಖರ್ಚು ವೆಚ್ಚದ ಮೇಲೆ ಬೆಲೆ ನಿಗದಿ ಮಾಡುವ ತಾಕತ್ತು ಸರ್ಕಾರಗಳಿಗೆ ಇಲ್ಲದಂತಾಗಿದೆ ಕಾರ್ಖಾನೆ ಮಾಲೀಕನು ತಯಾರು ಮಾಡುವ ವಸ್ತುವಿಗೆ ಅವನೇ ಬೆಲೆ ನಿಗದಿ ಮಾಡುವಂತೆ ರೈತರ ಬೆವರಿನ ಕೃಷಿ ಬೆಳೆಗಳಿಗೆ ರೈತರೇ ಬೆಲೆ ನಿಗದಿ ಮಾಡುವ ಕಾನೂನು ಜಾರಿ ಮಾಡಲು ರೈತರು ಬೀದಿಗೆ ಇಳಿದು ಹೋರಾಟ ಮಾಡುವ ದೈರ್ಯ ತೋರಬೇಕೆಂದು ಸಲಹೆ ನೀಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ನರೇಗಾ ಎಂಬುದು ಬಡವರ ಪಾಲಿಗೆ ಸ್ವಾಭಿಮಾನ ನೀಡುವ ಉದ್ಯೋಗವಾಗಿದೆ ಕೇಂದ್ರ ಸರ್ಕಾರ ಉಚಿತ ಭಾಗ್ಯಗಳನ್ನು ರದ್ದು ಮಾಡಿ ದುಡಿಯುವ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ 365 ದಿನ ಕೆಲಸ ನೀಡಿ ಪ್ರತಿ ವ್ಯಕ್ತಿಗೆ ಪ್ರತಿ ದಿನ 1500 ಕೂಲಿ ನೀಡುವ ಮುಖಾಂತರ ಬಡವರ ಬದುಕನ್ನು ರಕ್ಷಣೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಲಕ್ಷಾಂತರ ರೈತ ಕುಟುಂಬಗಳು ಕೃಷಿಯನ್ನೇ ನಂಬಿ ಸ್ವಾಭಿಮಾನದ ಬದುಕನ್ನು ಕಷ್ಟ ನಷ್ಟ ಲಾಭದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಅದರೆ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೇಂದ್ರ ಸರ್ಕಾರ ಹಣ ಕಾಸು ಸಚಿವರಾದ ನಿರ್ಮಲಾ ಸಿತಾರಾಮನ್ ರವರು ನಬಾರ್ಡ್ ನಿಂದ ಸಹಕಾರ ಬ್ಯಾಂಕ್‌ಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿ ರೈತರ ಬದುಕನ್ನು ಖಾಸಗಿ ಪೈನಾನ್ಸ್ ಹಾವಳಿಗೆ ಬಲಿ ಕೊಡಲು ಮುಂದಾಗಿರುವುದನ್ನು ಖಂಡಿಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಫೆ.6ರ ಗುರುವಾರ ತಲೆ ಮೇಲೆ ಕಲ್ಲು ಹೊತ್ತುಕೊಂಡು ರೈಲ್ವೆ ಇಲಾಖೆ ಮುತ್ತಿಗೆ ಹಾಕಿ ನ್ಯಾಯ ಪಡೆದುಕೊಳ್ಳಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಲಕ್ಷಣ್, ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಕಿರಣ್, ಚಾಂದ್‌ಪಾಷ, ಬಾಬಾಜಾನ್, ವಿಶ್ವ, ಮುನಿಕೃಷ್ಣ, ರತ್ನಮ್ಮ, ಶೈಲಜ, ರಾಧ ಮುಂತಾದವರಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…
ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…
ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…