Categories: ಲೇಖನ

ನಮ್ಮ ವ್ಯಕ್ತಿತ್ವ ವೈಚಾರಿಕ, ವೈಜ್ಞಾನಿಕ, ನಾಗರಿಕವಾಗಿ ಅರಳಬೇಕಾಗಿದೆ….

” ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ – ದೈವದಲ್ಲಾಗಲಿ ನನಗೆ ನಂಬಿಕೆ ಇಲ್ಲ……” – ಸ್ವಾಮಿ ವಿವೇಕಾನಂದ…..

ಎಂಥಾ ಮೂರ್ಖರಯ್ಯ ನಾವು, ಒಂದು ಹೆಣ್ಣು ಗಂಡು ಮದುವೆಯಾಗುತ್ತಾರೆ, ಕಾರಣಾಂತರದಿಂದ ಸ್ವಲ್ಪ ವರ್ಷಗಳ ನಂತರ ಗಂಡು ಸಾಯುತ್ತದೆ, ಆಗ ಬದುಕಿದ ಹೆಣ್ಣನ್ನು ವಿಧವೆ ಅಂತಲೋ, ನತದೃಷ್ಟೇ ಅಂತಲೋ, ಮುಂ.. ಅಂತಲೋ ಕರೆಯುತ್ತೇವೆ…..

ಯಾವುದೇ ನಾಗರಿಕ ಸಮಾಜದ ಮನುಷ್ಯ ಪ್ರಾಣಿ, ಈ ಸಹಜ ಕ್ರಿಯೆಯನ್ನು ದರಿದ್ರ, ಅಪಶಕುನ ಎಂದು ಭಾವಿಸುವುದೇ ಆದರೆ ಆ ಸಂಪ್ರದಾಯ, ಆ ಆಚಾರ-ವಿಚಾರ, ಆ ಮನಸ್ಥಿತಿ ಎಷ್ಟೊಂದು ನೀಚವಾಗಿರಬಹುದು ಎಂದು ಯೋಚಿಸಿ……

ಸಹಜವಾಗಿಯೇ ನಾವು ಆ ಪರಿಸ್ಥಿತಿಯನ್ನು ಕೆಟ್ಟದ್ದು ಎನ್ನುವುದಾದರೆ ಅದು ಪ್ರಕೃತಿಗೆ ನಾವು ಮಾಡುತ್ತಿರುವ ಬಹುದೊಡ್ಡ ಅನುಮಾನವಲ್ಲವೇ….

ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ಆರ್ ಸಿಬಿಯ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಆನಂತರದಲ್ಲಿ ಆ ತಂಡ ಹೆಚ್ಚು ಕಡಿಮೆ ಎಲ್ಲ ಪಂದ್ಯದಲ್ಲೂ ಸೋಲುತ್ತಿದೆ. ಇದಕ್ಕೂ ಅದಕ್ಕೂ ತಳುಕು ಹಾಕುವುದು, ಚರ್ಚಿಸುವುದು, ಪ್ರತಿಕ್ರಿಹಿಸುವುದೇ ಹಾಸ್ಯಾಸ್ಪದ ನಾಚಿಕೆಗೇಡು, ನನ್ನ ಈ ಬರಹವೂ ಸೇರಿ…..

ಏಕೆಂದರೆ ಸೋಲುತ್ತಿರುವುದು ಕೇವಲ ಆರ್ ಸಿಬಿ ಮಾತ್ರವಲ್ಲ. ಐದು ಬಾರಿಯ ಚಾಂಪಿಯನ್ ನೀತಾ ಅಂಬಾನಿ ಒಡೆತನದ ಮುಂಬೈ ಸಹ ಸೋಲುತ್ತಿದೆ, ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಸೋಲುತ್ತಿದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಅದಕ್ಕೆ ಅನೇಕ ಕಾರಣಗಳು ಇರುತ್ತವೆ……

ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಿರುವುದು ಶ್ರಿಮತಿ ಅಶ್ವಿನಿ ಪುನೀತ್ ರಾಜಕುಮಾರ್ ವಿಷಯವಲ್ಲ. ಸಾರ್ವತ್ರಿಕ ಸತ್ಯ ಮತ್ತು ಪ್ರಾಕೃತಿಕ ಸತ್ಯವನ್ನು. ನಾವು ದೊಡ್ಡ ಧ್ವನಿಯಲ್ಲಿ ಇದನ್ನು ಎತ್ತಿ ಹಿಡಿಯದಿದ್ದರೆ, ವೈಚಾರಿಕ ಪ್ರಜ್ಞೆಯನ್ನು  ಅಳವಡಿಸಿಕೊಳ್ಳದಿದ್ದರೆ ಈ ರೀತಿಯ ಅನಾಗರಿಕ ವರ್ತನೆಗಳು ಎಲ್ಲಾ ಕಡೆಯೂ ನಡೆಯುತ್ತಲೇ ಇರುತ್ತದೆ….

ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಲ್ಲ. ಈ ದೇಶದ ಶೇಕಡಾ 90% ಕ್ಕೂ ಹೆಚ್ಚು ಸಾಂಪ್ರದಾಯಿಕ ಕುಟುಂಬಗಳಲ್ಲಿ ಗಂಡ ಸತ್ತ ಹೆಣ್ಣಿನ ಬಗ್ಗೆ ಇದೇ ಅಭಿಪ್ರಾಯವಿದೆ. ಈ ದೇಶದ ರಾಷ್ಟ್ರಪತಿಗಳನ್ನು ಸಹ ಗಂಡ ಸತ್ತಿದ್ದಾರೆ ಎನ್ನುವ ಕಾರಣಕ್ಕೆ ಶುಭ ಕಾರ್ಯಗಳಿಗೆ ಕರೆಯಲೇ ಇಲ್ಲ ಎಂದು ಆರೋಪಿಸಲಾಗುತ್ತದೆ…..

ನಾವು ನಮಗೆ ನೋವಾದಾಗ ಮಾತ್ರ ಪ್ರತಿಕ್ರಿಯಿಸುವುದಷ್ಟೇ ಅಲ್ಲ ಸಹಜ ಪರಿಸ್ಥಿತಿಯಲ್ಲಿ ಎಲ್ಲ ಮೌಡ್ಯಗಳನ್ನು ಖಂಡಿಸಬೇಕು. ಇಲ್ಲದಿದ್ದರೆ ಈ ಮೌಡ್ಯಗಳ ದುಷ್ಪರಿಣಾಮ ಒಂದಲ್ಲ ಒಂದು ದಿನ ನಮ್ಮ ಮೇಲೆಯೂ ಬೀರುತ್ತದೆ. ನಾವು ಕೂಡ ಅದನ್ನು ಅನುಭವಿಸಲೇಬೇಕು….

ಕೇವಲ ವಿಧವೆ ಎನ್ನುವ, ನತದೃಷ್ಟ ಎನ್ನುವ ಮೌಢ್ಯ ಮಾತ್ರವಲ್ಲ ಅನೇಕ ರೀತಿಯ ಮೌಢ್ಯಗಳು ಈ ಸಮಾಜದಲ್ಲಿವೆ. ಸಿನಿಮಾನಟರು, ಜನಪ್ರಿಯ ವ್ಯಕ್ತಿಗಳು, ಪತ್ರಕರ್ತರು, ರಾಜಕಾರಣಿಗಳು, ಬುದ್ಧಿಜೀವಿಗಳು, ದೇಶಭಕ್ತರು, ಧಾರ್ಮಿಕ ಮುಖಂಡರು, ಹೋರಾಟಗಾರರು ಎಲ್ಲರೂ ಸಹ ಇದರ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ…..

ಮಾಧ್ಯಮಗಳು ನಕಲಿ ಜ್ಯೋತಿಷಿಗಳ ಮುಖಾಂತರ ಇಡೀ ಸಮಾಜದಲ್ಲಿ ಮೌಡ್ಮಗಳನ್ನು ಬಿತ್ತುವ ಮುಖಾಂತರ ಅನೇಕ ಧರ್ಮಾಂಧ ಹುಚ್ಚರು ಈ ರೀತಿ ಅಶ್ವಿನಿ ಪುನೀತ್ ರಾಜಕುಮಾರ್ ತರಹದವರನ್ನು ಅವಹೇಳನ ಮಾಡುತ್ತಿರುವಾಗ ಅದರ ವಿರುದ್ಧ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ, ಜೊತೆಗೆ ಹಾಗೆ ಮಾತನಾಡಲು ಪ್ರೇರೇಪಣೆ ನೀಡಿದ ಬೆಳವಣಿಗೆಯ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕಾಗುತ್ತದೆ……

ಕೈಗೆ ಯಾವುದೋ ಹರಳನ್ನು, ಯಾವುದೋ ಬಣ್ಣಗಳನ್ನು, ಯಾವುದೋ ಸಂಖ್ಯೆಗಳನ್ನು, ಯಾವುದೋ ದಿಕ್ಕುಗಳನ್ನು ಶ್ರೇಷ್ಠ – ಅನಿಷ್ಠ ಎಂದು ವಿಂಗಡಿಸುವಾಗ ಎಲ್ಲರೂ ಅದನ್ನು ಖಂಡಿಸಬೇಕು. ಇಲ್ಲದಿದ್ದರೆ ಈ ರೀತಿಯ ಘಟನೆಗಳು, ಹೇಳಿಕೆಗಳು ಸಹಜವಾಗುತ್ತಾ ಇರುತ್ತದೆ…..

ಯಾವುದು ಮೌಢ್ಯ, ಯಾವುದು ವಾಸ್ತವ, ಯಾವುದು ಸತ್ಯ, ಯಾವುದು ಸಹಜ ಎಂದು ತಿಳಿದುಕೊಳ್ಳಲು ದೊಡ್ಡ ಅಧ್ಯಯನದ, ಚಿಂತನೆಯ, ಶ್ರಮದ, ಜ್ಞಾನದ ಅವಶ್ಯಕತೆ ಏನೂ ಇಲ್ಲ. ಸಹಜ, ಸ್ವಾಭಾವಿಕ, ಸಾಮಾಜಿಕ ಅನುಭವದಲ್ಲಿಯೇ ಅದನ್ನು ನಿರ್ಧರಿಸಬಹುದು..

ಒಂದು ಜೀವ ಹೋಗಲು ಸಾವಿರಾರು ಕಾರಣಗಳಿರಬಹುದು. ಅದು ಗಂಡು, ಹೆಣ್ಣು, ಮಗು ಯಾರೇ ಆಗಿರಲಿ. ಅದಕ್ಕೂ ನಂಬಿಕೆಗಳಿಗೂ ಸಂಬಂಧವೇ ಇಲ್ಲ. ಅಂತಹುದರಲ್ಲಿ ಗಂಡ ಸತ್ತ ನಂತರ ಹೆಣ್ಣು ಅದೇಗೆ ಅಪಶಕುನವಾಗುತ್ತಾಳೆ…..

ಮೌಢ್ಯ ಧರ್ಮವೂ ಅಲ್ಲ, ವಿಜ್ಞಾನವು ಅಲ್ಲ, ಸಂಪ್ರದಾಯವೂ ಅಲ್ಲ ಸ್ವಾಭಾವಿಕವೂ ಅಲ್ಲ. ಅದೊಂದು ಭಯ, ಅಜ್ಞಾನ ಆತಂಕದಿಂದ ಸೃಷ್ಟಿಯಾಗಿರುವ ಕೆಟ್ಟ ಪದ್ಧತಿ ಅಥವಾ ನಂಬಿಕೆ. ಇದನ್ನು ಸಮಗ್ರವಾಗಿ ಅರ್ಥಮಾಡಿಕೊಂಡಾಗ ಈ ರೀತಿಯ ಹೇಳಿಕೆಗಳು ಬರುವುದೇ ಇಲ್ಲ……

ಅದನ್ನು ಮುಖ್ಯವಾಗಿ ಮಾಡಬೇಕಾಗಿರುವುದು ಸಾಮಾನ್ಯ ಜನರಲ್ಲ. ಸಾಮಾನ್ಯ ಜನರು ಯಾವಾಗಲೂ ಅನುಸರಿಸುವವರು. ಆದರೆ ತಿಳುವಳಿಕೆ ಇರುವ, ಸಮಾಜದ ಮುಖ್ಯ ವಾಹಿನಿಯಲ್ಲಿರುವ ಎಲ್ಲಾ ಜನರು ಮೌಢ್ಯವನ್ನು ಧಿಕ್ಕರಿಸುವ ಮಾತನ್ನು ಆಡಬೇಕಾಗುತ್ತದೆ. ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ…..

ಸಿನಿಮಾ ನಟರೇ ಇರಲಿ, ರಾಜಕಾರಣಿಗಳೇ ಇರಲಿ, ಪತ್ರಕರ್ತರೇ ಇರಲಿ, ಸ್ವಾಮೀಜಿಗಳೇ ಇರಲಿ, ಅಧಿಕಾರಿಗಳೇ ಇರಲಿ, ಮೌಢ್ಯವನ್ನ ಪೋಷಿಸಿ ಈಗ ಆದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರೆ ಅದೊಂದು ಮುಖವಾಡವಾಗುತ್ತದೆ….

ನಮ್ಮ ಇಡೀ ವ್ಯಕ್ತಿತ್ವವೇ ವೈಚಾರಿಕವಾಗಿ, ವೈಜ್ಞಾನಿಕವಾಗಿ ನಾಗರಿಕವಾಗಿ ಅರಳಬೇಕಾಗುತ್ತದೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಶೀಘ್ರದಲ್ಲೇ ಹೋಟೆಲ್ ಗಳಿಗೂ ಅಡಿಗೆ ಅನಿಲ ಪೂರೈಕೆ – ಆಹಾರ ಸಚಿವ ಕೆ ಎಚ್ ಮುನಿಯಪ್ಪ‌

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ…

3 hours ago

‘ಪ್ರಸಾದ್ 2.0’ (PRASHAD 2.0) ಯೋಜನೆಯಡಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿ ವಿಚಾರ: ಶ್ರೀ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್.ವಿ ಮಹೇಶ್ ಕುಮಾರ್ ಸಂತಸ

ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಡಾ.ಕೆ.ಸುಧಾಕರ್ ಭೇಟಿ ಮಾಡಿ, 'ಪ್ರಸಾದ್ 2.0'…

3 hours ago

ರೀಲ್ಸ್ ಮಾಡುವ ಮಹಿಳೆಯರ ಜೊತೆ ರೀಲ್ಸ್ ಮಂಜಣ್ಣ ಹೆಲ್ಮೆಟ್ ಇಲ್ಲದೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್: ಸಾಮಾಜಿಕ‌ ಜಾಲತಣದಲ್ಲಿ ವಿಡಿಯೋ ಪೋಸ್ಟ್: ಪೊಲೀಸರಿಂದ ಬಿತ್ತು ಫೈನ್: ಕೊನೆಗೆ ಫೈನ್ ಕಟ್ಟಿ ಕ್ಷಮೆಯಾಚನೆ

ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ವಿಕಾರವಾಗಿ ರೀಲ್ಸ್ ಮಾಡುತ್ತಿದ್ದ ರೀಲ್ಸ್ ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜ ಬೈಕ್ ನಲ್ಲಿ ತ್ರಿಬಲ್ ರೈಡ್…

11 hours ago

ಆನ್ ಲೈನ್ ನಲ್ಲಿ ಒಂದು ರೂ. ಗೆ ಹಾಲು ಮಾರಾಟ: ಪ್ರಾಂತ ರೈತ ಸಂಘ ಆಕ್ರೋಶ: ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೋಲಾರ: ಅಮೆಜಾನ್‌ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…

1 day ago

ಪ್ರತ್ಯೇಕ ಅಪಘಾತ ಕೇಸ್ : ಮೂವರು ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರು ಸಾವು: ಹಲವರಿಗೆ ಗಾಯ

ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ (ಮೀಸಲು ಪೊಲೀಸ್ ಪಡೆ) ಸಬ್ ಇನ್‌ಸ್ಪೆಕ್ಟರ್‌ಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಚಾಮರಾಜನಗರ ಮತ್ತು…

1 day ago

ಕಾನ್ಸಿರಾಮ್ ಅವರ 92ನೇ ಹುಟ್ಟುಹಬ್ಬ: ಬಹುಜನರ ಏಳಿಗೆಗಾಗಿ ಕಾನ್ಸಿರಾಮ್ ಕೊಡುಗೆ ಅಪಾರ- ನಂದಿಗುಂದ ಪಿ‌.ವೆಂಕಟೇಶ್

ಕಾನ್ಸಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್‌) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್‌…

1 day ago