ನಮ್ಮ ಬೆಂಗಳೂರು ಚಾಲೆಂಜ್‌”ನಲ್ಲಿ ವಿಜೇತರಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನ ವಿತರಣೆ

ಬೆಂಗಳೂರು: “ಬೆಂಗಳೂರು ಹಬ್ಬ”ದ ಭಾಗವಾಗಿ ಬೆಂಗಳೂರಿನ ಸಮಸ್ಯೆಗೆ ಪರಿಹಾರ ಸೂಚಿಸುವ “ನಮ್ಮ ಬೆಂಗಳೂರು ಚಾಲೆಂಜ್‌ನ” ಸ್ಪರ್ಧೆಯಲ್ಲಿ ವಿಜೇತರಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನವನ್ನು ವಿತರಿಸಲಾಯಿತು.

ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಹಾಗೂ ಡಬ್ಲ್ಯೂಟಿ ಫಂಡ್‌ ಸಹಯೋಗದಲ್ಲಿ ನವೆಂಬರ್‌ನಲ್ಲಿ ಬೆಂಗಳೂರಿನ ಸಮಸ್ಯೆಗೆ ವಿನೂತನ ಪರುಹಾರ ಸೂಚಿಸುವ ಅರ್ಹರಿಂದ “ನಮ್ಮ ಬೆಂಗಳೂರು ಚಾಲೆಂಜ್‌” ಉಪಕ್ರಮದ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಉಪಕ್ರಮದಲ್ಲಿ ಆಯ್ಕೆಯಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನವನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

*ವಿಜೇತರ ವಿವರಗಳು:*
** ಸಸ್ಟೈನಬಲ್ ವಾಟರ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್:* ಇವರು ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ, ಪ್ರಸ್ತುತ ಬೆಂಗಳೂರಿನ ಜಲಮೂಲಗಳು ಸಂಸ್ಕರಿಸದ ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಅತಿಕ್ರಮಣಗಳಿಂದ ತೀವ್ರ ಮಾಲಿನ್ಯ ಎದುರಿಸುತ್ತಿದೆ. ಇದು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ನೈಸರ್ಗಿಕವಾಗಿಯೇ ನೀರಿನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನವೀನ ಆಲೋಚನೆಯನ್ನು ನೀಡಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ.

**ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ತರಬೇತಿ ಕಾರ್ಯಕ್ರಮ (ನಮ್ಮ ಫೌಂಡೇಶನ್)*: ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗದಲ್ಲಿದ್ದಾರೆ, ಅವರಿಗೆ ಇನ್ನಷ್ಟು ಸ್ವಾವಲಂಬನೆ ಜೀವನದ ನೀಡಲು “ನಮ್ಮ ಯಾತ್ರಿ”ಅಪ್ಲಿಕೇಷನ್‌ ಮೂಲಕ ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಕಾರ್ಯಕ್ರಮ’ದ ಅಡಿಯಲ್ಲಿ ವಿದ್ಯುತ್ ವಾಹನಗಳನ್ನು ಚಾಲನೆ ಮಾಡುವ ಅವಕಾಶಗಳನ್ನು ಒದಗಿಸಲು ಅವಕಾಶ ನೀಡುವ ಬಗ್ಗೆ ಆಲೋಚನೆ ಹಂಚಿಕೊಂಡಿದ್ದಾರೆ.

*ನಾಗರಮೀಟರ್‌ ಆಟೋ (BrandPride Mobility Pvt Ltd)* – ನಾಗರಾ ಮೀಟರ್ ಆಟೋ ಎಂಬುದು ಬೆಂಗಳೂರು ಮೂಲದ ಸಾಮಾಜಿಕ ಉದ್ಯಮಶೀಲತಾ ಉಪಕ್ರಮವಾಗಿದ್ದು, ಇದು ಪಾರದರ್ಶಕ, ಸರ್ಕಾರದಿಂದ ಅನುಮೋದಿತ ಮೀಟರ್ ದರದ ಆಟೋರಿಕ್ಷಾ ಸೇವೆಗಳನ್ನು ಒದಗಿಸಲಿದೆ. ಅತಿ ಹೆಚ್ಚು ಹಣ ತೆತ್ತು ಆಟೋ ಸಂಚಾರ ಪಡೆಯುವುದಕ್ಕಿಂತ ಕಡಿಮೆ ದರದಲ್ಲಿ ಹಾಗೂ ಪ್ರಾಮಾಣಿಕ ಸಾರಿಗೆ ಆಯ್ಕೆ ನೀಡುವುದು ಇದರ ಉದ್ದೇಶ

*ಅನಾಹತ್ ಫೌಂಡೇಶನ್* – ನಗರ ಪ್ರದೇಶದ ಬಡವರಿಗೆ ಪ್ರಾಥಮಿಕ ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು ಇವರ ಯೋಜನೆ. ಎಲ್ಲರಿಗೂ ಸಮಾನ ಪ್ರಾಥಮಿಕ ಆರೋಗ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಇವರ ಆಲೋಚನಯನ್ನು ಮಂಡಿಸಿದ್ದಾರೆ.

Lets Be the Change ಎನ್‌ಜಿಒ– ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ತಲೆನೋವು. ಮನೆಯಲ್ಲಿಯೇ ನಿರ್ಮಾಣವಾಗುವ ಶೇ. 1 ರಷ್ಟು ತ್ಯಾಜ್ಯವನ್ನು ಭೂಮಿಯಲ್ಲಿಯೇ ಕರಗಿಸುವ ಸಂಬಂಧ ನಾಗರಿಕರೇ ಜವಾಬ್ದಾರನ್ನಾಗಿ ಮಾಡುವ ಹಾಗೂ ಅವರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ತ್ಯಾಜ್ಯ ಸಮಸ್ಯೆಗೆ ದೊಡ್ಡ ಪರಿಹಾರವಾಗಲಿದೆ.

ಈ ಕುರಿತು ಮಾತನಾಡಿದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಬೆಂಗಳೂರು ಹಬ್ಬದ ಭಾಗವಾಗಿ ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಮ್ಮ ಬೆಂಗಳೂರು ಚಾಲೆಂಜ್‌ನನ್ನು ಘೊಷಿಸಲಾಗಿತ್ತು. ಇದರಡಿ ಒಟ್ಟು 600 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇದರಲ್ಲಿ 8 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಐವರನ್ನು ಆಯ್ಕೆ ಮಾಡಲಾಗಿದೆ. ಈ ಐದು ವಿಜೇತರು ತಾವು ನೀಡಿದ ಐಡಿಯಾಗಳನ್ನು ಅನುಷ್ಠಾನ ಮಾಡಲು ತಲಾ 10 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ಉದ್ಯಮಿ ನಿಖಿಲ್ ಕಾಮತ್ ಮಾತನಾಡಿ, ಬೆಂಗಳೂರು ನಮಗೆ ಸಾಕಷ್ಟು ನೀಡಿದ್ದು, ಅದರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಚಾಲೆಂಜ್‌ನನ್ನು ಘೊಷಿಸಿದ್ದೆವು. ಅಂತೆಯೇ ಒಂದು ಐದು ವಿಭಿನ್ನ ಆಲೋಚನೆಗಳು ಮೆಚ್ಚುಗೆಯಾಗಿದ್ದು, ಇದರ ಅನುಷ್ಠಾನದ ಬಗ್ಗೆ ಕುತೂಹಲವಿದೆ ಎಂದು ಹೇಳಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

5 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

10 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

10 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

15 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago