ಎನ್.ವಿ.ಡಿ ಡೆವಲಪರ್ಸ್ ಪ್ರೊಡಕ್ಷನ್, ದೀಪು ಮಸಾಲ ಪ್ರೆಸೆಂಟ್ಸ್ ವತಿಯಿಂದ ಆರ್, ಎನ್ ದೀಪುಗೌಡ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ನಟ ಹಾಗೂ ನಿರೂಪಕ ರಾಕೇಶ್ ರಾಮೇಗೌಡ ಅವರು ನಿರ್ದೇಶನ ಮಾಡುತ್ತಿರುವ ‘ಫೋಟೋ’ ಎಂಬ ಹೆಸರಿನ ಕಿರುಚಿತ್ರದ ಮಹೂರ್ತವನ್ನು ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಳಿ ಇರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಹಾಗೂ ಪೋಸ್ಟರ್ ರಿವಿಲ್ ಮಾಡುವುದರ ಮೂಲಕ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ನಿರ್ಮಾಪಕ ದೀಪು ಗೌಡ, ‘ಫೋಟೋ’ ಎಂಬ ಕಿರುಚಿತ್ರ ನಿರ್ಮಾಣ ಮಾಡುವ ಉದ್ದೇಶ ಏನೆಂದರೆ ತರಬೇತಿ ಶಾಲೆಯಲ್ಲಿ ಕಲಿಕಾ ಮಕ್ಕಳು ಅತ್ಯುತ್ತಮವಾಗಿ ಕಲಿಯುತ್ತಿದ್ದಾರೆ. ಇವರಿಗೆ ತನ್ನಿಂದಾದ ಸಹಾಯವನ್ನು ನಾವು ಮಾಡಬೇಕು, ನಿರೂಪಕ ಹಾಗೂ ನಿರ್ದೇಶಕರು ಆಗಿರುವಂತಹ ರಾಕೇಶ್ ರಾಮೇಗೌಡರವರು ಹೇಳಿದ ಕಥೆಯನ್ನು ಕೇಳಿದಾಗ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಕಿರುಚಿತ್ರ, ಇದು ಮಕ್ಕಳ ಆಧಾರಿತ ಒಂದು ಚಿತ್ರವಾಗಿದ್ದು ಮಕ್ಕಳಿಗೆ ವಿಶೇಷವಾದ ಸಂದೇಶ ನೀಡುವ ಒಂದು ಉತ್ತಮ ಚಿತ್ರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಫಿಲ್ಮ್ ಸಿಟಿ ಅಭಿನಯ ತರಬೇತಿ ಇನ್ಸ್ಟಿಟ್ಯೂಟ್ ಅಲ್ಲಿ ತರಬೇತಿಯಲ್ಲಿ ಕಲಿತ ಲಕ್ಷ್ಮಿ ಪ್ರಿಯ, ತೇಜಸ್ ವಜ್ರ, ಪವನ್, ಲೇಖನ್, ಪೂರ್ಣಿಮಾ, ಮಂಗಳ, ವೇದಾಂತ್, ಹಾಗೂ ಅವರ ಪೋಷಕರು ಹಾಜರಿದ್ದರು.
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…