ನಗರಸಭೆ ಸದಸ್ಯರಾದ ರಜನಿ, ನಾಗರತ್ನಮ್ಮ ನಡುವೆ ತಿಕ್ಕಾಟ: ಮೂಲಭೂತ ಸೌಕರ್ಯಗಳಿಂದ ವಂಚಿತರಾದ ರೋಜಿಪುರದ ಒಂದನೇ ಮುಖ್ಯರಸ್ತೆ ನಿವಾಸಿಗಳು

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯಲ್ಲಿ ಕಾಲಕ್ಕೆ ತಕ್ಕಂತೆ ರಸ್ತೆ ದುರಸ್ತಿ, ಚರಂಡಿ‌ ದುರಸ್ತಿಯಾಗುತ್ತಿಲ್ಲ, ವಿದ್ಯುತ್ ಬಲ್ಬ್, ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ ತಾಂಡವಾಡುತ್ತಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ರೋಜಿಪುರ ಕೌನ್ಸಿಲರ್ ರಜನಿ ಸುಬ್ರಮಣಿ, ವಿನಾಯಕನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಹೇಳುತ್ತಿದ್ದಾರೆ. ಇವರಿಬ್ಬರ ಗೊಂದಲ, ಕಿತ್ತಾಟ, ತಿಕ್ಕಾಟದಲ್ಲಿ ಈ ರಸ್ತೆಯಲ್ಲಿ ವಾಸ ಮಾಡುವ ನಮಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ರೋಜಿಪುರ ಹಾಗೂ ವಿನಾಯಕನಗರ ವಾರ್ಡ್ ನವರು ಬರುತ್ತಾರೆ. ಗೆದ್ದ ನಂತರ ಈ ರಸ್ತೆ ನಮಗೆ ಬರೋದಿಲ್ಲ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ ಎಂದು ಪ್ರದೀಪ್ ಆರೋಪಿಸಿದರು‌.

ರಸ್ತೆಯು ಚರಂಡಿಗಿಂತ ಮೇಲ್ಮಟದಲ್ಲಿದೆ. ಚರಂಡಿಯಲ್ಲಿ ಗಿಡಗಂಟಿಗಳು, ಮಣ್ಣು ಸೇರಿದಂತೆ ಕಸಕಡ್ಡಿ‌ ತುಂಬಿಕೊಂಡು ಚರಂಡಿ ಇರೋದು ಕಾಣೋದೇ ಇಲ್ಲ. ಈ‌ ಕಾರಣ ಮಳೆ‌ ನೀರು ಸಾರಾಗವಾಗಿ ಹರಿಯದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ‌. ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತದೆ ಎಂದರು.

ಮನೆಗಳ ಮೇಲೆ ದೊಡ್ಡ ರೆಂಬೆಕೊಂಬೆಗಳು ಹಾದುಹೊಗಿವೆ ಅವುಗಳನ್ನು ವಿಲೇವಾರಿ ಮಾಡಲು ಯಾರೂ ಇಲ್ಲ. ಕಳ್ಳರ ಕಾಟ ಹೆಚ್ಚಾಗಿದೆ. ಹಾವುಗಳು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕಸ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗದ ಕಾರಣ ದುರ್ವಾಸನೆ ಹೆಚ್ಚಾಗಿದೆ. ಕಸ ತಿನ್ನಲು ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಕಾಟಕ್ಕೆ ಮಕ್ಕಳು ಓಡಾಡಲು ಭಯಪಡುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು. ನಾವು ಕಂದಾಯ ಕಟ್ಟಲ್ವಾ…? ನೀರಿನ ಬಿಲ್ ಕಟ್ಟಲ್ವಾ…? ವಿದ್ಯುತ್ ಬಿಲ್ ಕಟ್ಟಲ್ವಾ…? ಮತ್ತೆ ನಮಗೇಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಮೊದಲು ನಮ್ಮ ರಸ್ತೆಯನ್ನು ಯಾವುದಾದರು ಒ‍ಂದು ವಾರ್ಡ್ ಗೆ ಸೇರಿಸಬೇಕು. ನಮಗೆ ಕೌನ್ಸಿಲರ್ ಯಾರೆಂದು ತಿಳಿಸಬೇಕು. ತದನಂತರ ನಮಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು….

ಈ ಕುರಿತು ವಿನಾಯಕ ನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಮಾತನಾಡಿ, ಚೆಕ್ ಬಂದಿ ಪ್ರಕಾರ ಈ ರಸ್ತೆ ವಿನಾಯಕನಗರ ವಾರ್ಡ್ ಗೆ ಬರೋದಿಲ್ಲ.‌ ಒಂದು ವೇಳೆ ನಾವು ಆ ವಾರ್ಡ್ ನಸಮಸ್ಯೆ ಬಗೆಹರಿಸಲು ಹೋದಾಗ ಅಲ್ಲಿನ‌ ಸದಸ್ಯೆರು ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ನಾವು ಈ ರಸ್ತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.

ರೋಜಿಪುರ ವಾರ್ಡ್ ಸದಸ್ಯೆ ರಜನಿ ಸುಬ್ರಮಣಿ ಮಾತನಾಡಿ, ಈ ರಸ್ತೆಯಲ್ಲಿನ ನಿವಾಸಿಗಳು ವಿನಾಯಕ ನಗರ ವಾರ್ಡ್ ಮತಗಟ್ಟೆಗೆ ಸೇರುತ್ತಾರೆ. ಮತದಾನವನ್ನು ಸಹ ಆ ವಾರ್ಡ್ ಸದಸ್ಯರಿಗೆ ಹಾಕಿರುತ್ತಾರೆ. ಆದ್ದರಿಂದ ವಿನಾಯಕ ನಗರದ ಸದಸ್ಯರೇ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಹೇಳಿದರು….

ಒಟ್ಟಿನಲ್ಲಿ ರೋಜಿಪುರ ವಾರ್ಡ್, ವಿನಾಯಕ ನಗರ ವಾರ್ಡ್ ಕೌನ್ಸಿಲರ್ ಗಳ ಗೊಂದಲ, ತಿಕ್ಕಾಟ, ಕಿತ್ತಾಟದಿಂದ ಇಲ್ಲಿನ ನಿವಾಸಿಗಳು ಮೂಲಭೂತ ಸವಲತ್ತುಗಳು ಇಲ್ಲದೇ ತೀವ್ರ ತೊಂದರೆಗೆ ಸಿಲುಕಿದ್ದಾರೆ….

Ramesh Babu

Journalist

Recent Posts

ರೈತರಿಗೆ ನೋವಾಗುವ ಯಾವುದೇ ತೀರ್ಮಾನ ಇಲ್ಲ; ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ- ಸಚಿವ ಚಲುವರಾಯಸ್ವಾಮಿ

ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…

3 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

4 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

4 hours ago

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

11 hours ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

22 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

1 day ago