ನಗರದ ಹೊರವಲಯದಲ್ಲಿರುವ ಅಗ್ನಿ ಶಾಮಕ ಠಾಣೆ ಬಳಿ ದಿಢೀರನೆ ಅಪರೂಪದ ಚಿಪ್ಪು ಹಂದಿ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ನಡೆದಿದೆ.
ಸುಮಾರು 10 ರಿಂದ 12 ವರ್ಷದ ವಯಸ್ಸಿನ ಚಿಪ್ಪು ಹಂದಿ ಇದಾಗಿದ್ದು, ಇಂತಹ ಪ್ರಾಣಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ.
ಇದು ಸಾಮಾನ್ಯವಾಗಿ ಉಷ್ಣ ವಲಯದ ದೇಶಗಳಾದ ಆಫ್ರಿಕಾದಲ್ಲಿ ಕಾಣಿಸುತ್ತದೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ. ಮರದ ಪೊಟರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ.
ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ. ಉದ್ದವಾದ ನಾಲಗೆ ಹೊಂದಿದ್ದು, ಒಂದು ಬಾರಿಗೆ 1 ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ.
ದೇಹವು ಪ್ರಬಲ, ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿಂದ ಒಳಗೊಂಡಿದೆ. ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ಥಿತಗೊಂಡಿದೆ. ತಲೆಯು ಸಣ್ಣದಾಗಿದ್ದು, ಚೂಪಾದ ಮುಖ ಇದೆ. ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ. ಕಣ್ಣು ಹಾಗೂ ಮೂಗು ಸಣ್ಣದಾಗಿದೆ. ನಾಲಗೆಯು ಗಮನಾರ್ಹವಾಗಿ ಉದ್ದ, ಜಿಗುಟಾಗಿದೆ. ಕೈ, ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮುಂದಿನ ಉಗುರುಗಳು ಬಿಲವನ್ನು ತೋಡಲು ಹಾಗೂ ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ. ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆಂಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
ಅರಣ್ಯನಾಶದಿಂದಾಗಿ ಇವು ಈಗ ವಿನಾಶದ ಅಂಚಿನಲ್ಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…