50 ಕ್ಕೂ ಹೆಚ್ಚು ಗಿಡಗಳನ್ನು ಮಂಜುನಾಥ ಎಂಬಾತ ಕಡಿದು ಹಾಕಿದ್ದಾನೆ ಎಂದು ಸಂಕಷ್ಟಕ್ಕೀಡಾದ ರೈತ ಶಿವಶಂಕರ್ ಕುಟುಂಬಸ್ಥರು ಆರೋಪಿಸಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ
ಗಾಣದಾಳ ಗ್ರಾಮದ ಹಳ್ಳದ ಬಳಿ ರೈತ ಶಿವಶಂಕರ್ ಎಂಬುವರು ಸರ್ವೇ ನಂ. 8/1 ರಲ್ಲಿ 29 ಗುಂಟೆ ಜಮೀನನ್ನು ರಾಮಕ್ಕ ಎಂಬುವರಿಂದ ಕ್ರಯ ಮಾಡಿಸಿಕೊಳ್ಳಲಾಗಿತ್ತು. ಜಮೀನು ಪಕ್ಕದಲ್ಲೇ ನಕಾಶೆ ದಾರಿ ವಿಚಾರವಾಗಿ ಮಂಜುನಾಥ ಹಾಗೂ ನಮ್ಮ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ಆದರೂ, ನಕಾಶೆಯಲ್ಲಿದ್ದಂತೆ ಗ್ರಾ.ಪಂ ವತಿಯಿಂದ ರಸ್ತೆ ಮಾಡಿಸಿಕೊಂಡಿದ್ದೆವು. ಒಂದು ಕಿ.ಮೀ.ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು ಎರಡು ವರ್ಷದ ಹಿಂದೆ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದೆವು. ಹಳೆಯ ದ್ವೇಷ ಇಟ್ಟುಕೊಂಡು ಸೋಮವಾರ ಸಂಜೆ ಮಂಜುನಾಥ ಎಂಬಾತ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾನೆ ಎಂದು ಜಮೀನು ಮಾಲೀಕ ಶಿವಶಂಕರ್ ಆರೋಪಿಸಿದ್ದಾರೆ.
ನಂತರ ಶಿವಶಂಕರ್ ಅವರ ತಾಯಿ ನರಸಮ್ಮ ಮಾತನಾಡಿ, ವಡವೆ ಅಡವಿಟ್ಟು ಐದು ಲಕ್ಷ ಸಾಲ ತಂದು ಅಡಿಕೆ ಬೆಳೆ ಬೆಳೆದಿದ್ದೆವು. ಮಂಜುನಾಥ, ನವೀನ ಅವರು ಸಣ್ಣ ಅಡಿಕೆ ಗಿಡಗಳನ್ನೇ ಕಡಿದು ನಾಶ ಮಾಡಿದ್ದಾರೆ. ನಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಸಸಿಗಳನ್ನೇ ಕತ್ತರಿಸಿ ಹಾಳು ಮಾಡಿದ್ದಾರೆ. ನಮಗೆ ನ್ಯಾಯದ ಜೊತೆ ರಕ್ಷಣೆ ಬೇಕು ಎಂದು ಅಳಲು ತೋಡಿಕೊಂಡರು.
ದೂರು, ಪ್ರತಿದೂರು ದಾಖಲು
ಅಡಿಕೆ ಸಸಿಗಳನ್ನು ಕಡಿದು ನಾಶ ಮಾಡಿದ್ದಲ್ಲದೇ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಮಂಜುನಾಥ, ನವೀನ್ ಕುಮಾರ್, ಜಯಮ್ಮ, ಮುತ್ತಯ್ಯ ಹಾಗೂ ಚಿನ್ನಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಜುನಾಥ ಅವರು ಕೂಡ ಪ್ರತಿದೂರು ನೀಡಿದ್ದು, ಮಾಂಗಲ್ಯ ಸರ ಕಿತ್ತುಹಾಕಿ ಹಲ್ಲೆ ನಡೆಸಿದ ಆರೋಪದಡಿ ಶಿವಶಂಕರ್, ನರಸಮ್ಮ ಇತರರ ವಿರುದ್ಧ ದೂರು ದಾಖಲಾಗಿದೆ.
ತಾಲೂಕಿನಲ್ಲಿ ಇತ್ತೀಚೆಗೆ ದ್ವೇಷ ತುಂಬಿದ ಮನಸ್ಥಿತಿಗಳು ಮಿತಿಮೀರಿದ್ದು, ಇದರಿಂದ ರಾಗಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚುವುದು, ಬೆಳೆ ನಾಶ ಮಾಡುವುದು, ಬೋರ್ ವೆಲೆ ಪೈಪ್, ಕೇಬಲ್ ತುಂಡರಿಸುವುದು, ರೇಷ್ಮೇ ಗೂಡಿಗೆ ಬೆಂಕಿ ಹಚ್ಚಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ರೋಗಗ್ರಸ್ತ ಮನಸ್ಥಿತಿ ಇರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…