Categories: ಕೊಡಗು

ದೊಣ್ಣೆಯಿಂದ ಹೊಡೆದು ಪತ್ನಿಯ ಮೊದಲ ಹೆಣ್ಣು ಮಗುವನ್ನು ಕೊಂದ: ಇನ್ನೊಬ್ಬಳನ್ನು ಸುಟ್ಟು ತೋಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ : ತಲೆಮರಿಸಿಕೊಂಡಿದ್ದ ಆರೋಪಿ ಪೊಲೀಸರ ಬಲೆಗೆ

ಈತ ತನ್ನ ಪತ್ನಿಯ ಮೊದಲನೇ ಗಂಡನ ಹೆಣ್ಣು ಮಗುವನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದರೆ ಮತ್ತೊಬ್ಬಳು ಹೆಣ್ಣು ಮಗುವಿನ ಮೈ, ಕೈ, ಕಾಲುಗಳನ್ನು ಸುಟ್ಟು ದೊಣ್ಣೆಯಿಂದ ಹೊಡೆದು ಹರಿಯುವ ನೀರಿನ ತೋಡಿಗೆ ತಳ್ಳಿ ಸಾಯಿಸಲು ಯತ್ನಿಸಿದ್ದಾನೆ. ಇದೀಗ ಪೊಲೀಸರು ಹೆಣೆದ ಬಲೆಗೆ ಬಿದ್ದು
ಕಾರಾಗೃಹ ಸೇರಿದ್ದಾನೆ. ದೇವರಪುರ, ತಿತಿಮತಿ ಗ್ರಾಮದ ಪಂಜಿರ ಎರವರ ರವಿ (42) ಎಂಬತಾನೇ ತನ್ನ ಕ್ರೂರ ಕ್ರೌರ್ಯಕ್ಕಾಗಿ ಜೈಲು ಪಾಲಾಗಿರುವ ಆರೋಪಿ ಆಗಿದ್ದಾನೆ.

ಪೊಲೀಸರು ಸಕಾಲಿಕವಾಗಿ ನೆರವಿಗೆ ಧಾವಿಸಿ, ಈತನ ಹೀನ ಕೃತ್ಯದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಗೆ ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 11-07-2025 ರಂದು ಸುಮಾರು 5 ವರ್ಷದ ಒಂದು ಹೆಣ್ಣು ಮಗು ಮೈ ಕೈ ಗಾಯಗೊಂಡು ಬಿಳಿಗೆರೆ ಸಮೀಪ ಒಂಟಿಯಾಗಿ ನಿಂತಿದ್ದಳು. ಈ ಬಗ್ಗೆ ತುರ್ತು ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಸ್ವೀಕರಿಸಿದ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ದಿನಾಂಕ 14-07-2025 ರಂದು ಮಡಿಕೇರಿಯ ಸರ್ಕಾರಿ “ಮಡಿಲು” ಕೇಂದ್ರಕ್ಕೆ ಸೇರಿಸಿದ್ದಾರೆ.

*ಐದು ವರ್ಷದ ಮಗುವಿನ ಮೈ ಕೈ ಸುಟ್ಟು ತೋಡಿಗೆ ತಳ್ಳಿದ್ದ*

ಪೊಲೀಸರು ದಿನಾಂಕ 14-07-2025 ರಂದು ಈ ಮಗುವಿನ ತಾಯಿ ಪಣಿ ಎರವರ ಭಾಗ್ಯರವರನ್ನು ಪತ್ತೆ ಮಾಡಿ ತನ್ನ ಮಗಳ ಭೇಟಿ ಮಾಡಿಸಿದ್ದಾರೆ. ಮಗುವಿನ ಮೂಗು, ಹಣೆ ಎರಡೂ ಮೈ, ಕೈ ಮತ್ತು ಕಾಲುಗಳ ಮೇಲೆ ಸುಟ್ಟ ಗಾಯಗಳಾಗಿದುದ್ದು ಕಂಡು ಬಂದಿದೆ. ಮಗಳನ್ನು ವಿಚಾರಿಸಿದಾಗ, ತಂದೆ ರವಿ ಬೆಂಕಿಯಿಂದ ಸುಟ್ಟು, ದೊಣ್ಣೆಯಿಂದ ಹೊಡೆದು “ನಿನ್ನನ್ನು ಸಾಯಿಸುತ್ತೇನೆ” ಎಂದು ಹೇಳಿ ನೀರಿನ ತೋಡಿಗೆ ತಳ್ಳಿ ಹೋಗಿದ್ದು, ನಂತರ ತೋಡಿನಿಂದ ಎದ್ದು ರಸ್ತೆಯಲ್ಲಿ ನಿಂತಿದ್ದಾಗ ನನ್ನನ್ನು ಪೊಲೀಸರು ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿಸಿರುತ್ತಾರೆ ಎಂದು ತಿಳಿಸಿದ್ದಾಳೆ.

ಹೀಗಾಗಿ ಮಗುವಿನ ಕೈ ಮೈ ಬೆಂಕಿಯಿಂದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವ ಪಂಜರಿ ಎರವರ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 115(2), 118(1), 109 BNS ಕಾಯ್ದೆ 2023 ಮತ್ತು 75 ಜೆ.ಜೆ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

*ಮತ್ತೊಬ್ಬಳನ್ನು ದೊಣ್ಣಯಿಂದ ಥಳಿಸಿ ಕೊಂದಿದ್ದ*

ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ನಿವಾಸಿ ಕಳ್ಳಿಯಪ್ಪಂಡ ಸೋಮಯ್ಯರವರ ಲೈನ್ ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಭಾಗ್ಯರವರ ಎರಡನೇ ಗಂಡನಾದ ಆರೋಪಿ ಪಣಿ ಎರವರ ರವಿ, ಮಂಚಳ್ಳಿ ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದಾಗ ಒಂದು ತಿಂಗಳ ಹಿಂದೆ ಭಾಗ್ಯಳ ಮೊದಲನೇ ಗಂಡನ ಮತ್ತೊಬ್ಬಳು ಹೆಣ್ಣು ಮಗುವನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಬಗ್ಗೆ ಕೂಡ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾದ ಹಿನ್ನೆಲೆ, ಕುಟ್ಟ ಪೊಲೀಸ್ ಠಾಣೆಯಲ್ಲಿ ಕಲಂ 103(1), 238(ಎ) BNS ಕಾಯ್ದೆ 2023ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ಎರಡು ಪ್ರಕರಣಗಳ ತನಿಖೆಗಾಗಿ ವಿರಾಜಪೇಟೆ ಉಪ ವಿಭಾಗ ಡಿ.ಎಸ್.ಪಿ ಮಹೇಶ್ ಕುಮಾರ್ ಮತ್ತು ಮಡಿಕೇರಿ ಉಪ ವಿಭಾಗ ಡಿ.ಎಸ್.ಪಿ. ಸೂರಜ್, ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರ, ಮಡಿಕೇರಿ ಮತ್ತು ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ 19-07-2025 ರಂದು ದೇವರಪುರ ತಿತಿಮತಿ ನಿವಾಸಿ ಆರೋಪಿ ಪಂಜರಿ ಎರವರ ರವಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Ramesh Babu

Journalist

Share
Published by
Ramesh Babu

Recent Posts

ತ್ಯಾಜ್ಯ ಸುರಿಯುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು- ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ಕೆಲವು ಕಾರ್ಖಾನೆಗಳು ಕಲುಷಿತ ಕೆಮಿಕಲ್ ತ್ಯಾಜ್ಯ, ಇನ್ನಿತರ ತ್ಯಾಜ್ಯವನ್ನು ಕೆರೆಗಳಿಗೆ, ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರಿಂದ…

14 hours ago

ಮಾತೃ ಹೃದಯಿ ಕರ್ನಾಟಕ ಸರ್ಕಾರದಿಂದ “ಕೂಸಿನ ಮನೆ” ಯೋಜನೆ

ಕೂಸು ಇದ್ದ ಮನಿಗ ಬೀಸಣಿಕೆ ಯಾತಕ ? ಕೂಸು ಕಂದಯ್ಯ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ. ನಮ್ಮ…

16 hours ago

ದೊಡ್ಡಬಳ್ಳಾಪುರ ತಾಲೂಕಿನಿಂದ ಜಿಲ್ಲಾಸ್ಪತ್ರೆ ಕೈತಪ್ಪಲ್ಲ: ಕೈತಪ್ಪಲು ನಾನು ಬಿಡೋದಿಲ್ಲ- ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ  ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ- ಶಾಸಕ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ…

22 hours ago

ಆಶ್ರಯ ಮನೆಗಳು ಬಲಾಢ್ಯರ ಪಾಲು ಆರೋಪ:

ದೊಡ್ಡಬಳ್ಳಾಪುರ : ಬಡವರು ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಆಶ್ರಯ ಮನೆಗಳು ಬಲಾಢ್ಯರ ಪಾಲಾಗಿವೆ, ಅಕ್ರಮವಾಗಿ ಮನೆಗಳ ಬೀಗ ಹೊಡೆದು ಅಶ್ರಯ…

24 hours ago

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಸಭೆಯ ಮುಖ್ಯಾಂಶಗಳು ಇಲ್ಲಿವೆ ಓದಿ…

ಇಂದು ವಿಧಾನಸೌಧ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯ…

2 days ago

ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಬಾಲಕಾರ್ಮಿಕ ಯೋಜನೆಯಲ್ಲಿ ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಗೌರವಧನ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು…

2 days ago