ಇನ್ನೇನು ಕೆಲವೇ ದಿನಗಳಲ್ಲಿ 2023ರ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ದಿನೇ ದಿನೇ ಚುನಾವಣಾ ಕಾವು ರಂಗೇರುತ್ತಿದೆ, ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೇ ಟಿಕೆಟ್ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಬಹಳ ಪ್ರತಿಷ್ಠಿತ ಕ್ಷೇತ್ರ. ಸಿದ್ದಲಿಂಗಯ್ಯ, ಜಿ.ರಾಮೇಗೌಡ, ಆರ್.ಎಲ್.ಜಾಲಪ್ಪ, ಆರ್.ಜಿ.ವೆಂಕಟಾಚಲಯ್ಯ ಅವರಂತಹ ಘಟಾನುಘಟಿಗಳು ಆಳಿರುವುದರಿಂದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾರೀ ಮಹತ್ವವಿದೆ. ಜೊತೆಗೆ ಬೆಂಗಳೂರಿಗೆ ಸಮೀಪವಿರುವುದರಿಂದ ಬಲಾಢ್ಯರ ಕಣ್ಣು ಕ್ಷೇತ್ರದ ಮೇಲೆ ಬಿದ್ದಿದ್ದು, ಇಲ್ಲಿಂದ ಸ್ಪರ್ಧಿಸಲೆಂದೇ ಹೊರಗಿನ ಸಾಕಷ್ಟು ಆಕಾಂಕ್ಷಿಗಳು ಬಂದು ಮಣ್ಣುಮುಕ್ಕಿರುವ ನಿದರ್ಶನಗಳಿವೆ.
ಪ್ರಸಕ್ತ ವಿಧಾನಸಭಾ ಚುನಾವಣೆಗೂ ಹೊರಗಿನ ಅಭ್ಯರ್ಥಿಗಳು ಕ್ಷೇತ್ರಕ್ಕೆ ದಾಂಗುಡಿ ಇಟ್ಟಿದ್ದು, ಟಿಕೆಟ್ ಪಡೆಯಲು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ತಾರಕಕ್ಕೇರಿದೆ. ಸ್ಥಳೀಯ ಹಾಗೂ ಹೊರಗಿನವರು ಸೇರಿ ಐವರು ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಸ್ಥಳೀಯರು.
ಕ್ಷೇತ್ರಕ್ಕೆ ಸಾರಥಿಯಾಗ್ತಾರಾ ಸತ್ಯಪ್ರಕಾಶ್, ಹಿನ್ನೆಲೆಯೇನು?
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿರುವರಲ್ಲಿ ಚಲನಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಒಬ್ಬರು. ಇವರು ಮೂಲತಃ ತಾಲೂಕಿನ ಸಾಸಲು ಹೋಬಳಿಯ ಕಾಳೇನಹಳ್ಳಿ ರೈತ ಕುಟುಂಬದ ಮಗ. 1988 ರಿಂದಲೇ ತಾಲೂಕಿನ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಟೆರ್ರಾಫಾರಂ ಮುಚ್ಚಿಸುವಲ್ಲಿ ಸಾರಥಿ ಸತ್ಯಪ್ರಕಾಶ್ ಒಬ್ಬಂಟಿಯಾಗಿ ಹೋರಾಟ ಮಾಡಿದ್ದರು. ನಂತರ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ, ಪಕ್ಷ ಸಂಘಟನೆ ಮಾಡಿದ್ದರು.
ಜೆಡಿಎಸ್ ನಿಂದ ಎರಡು ಬಾರಿ ‘ಬಿ’ ಫಾರಂ ಕೊಟ್ಟು ವಾಪಸ್ ಪಡೆದಿದ್ದರಿಂದ ಬೇಸತ್ತು, ರಾಜಕೀಯ ಬಿಟ್ಟು ರಿಯಲ್ ಎಸ್ಟೇಟ್ ಹಾಗೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಯಶಸ್ವಿಯಾಗಿದ್ದಾರೆ. 2018ರಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಜಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸೇರ್ಪಡೆಗೊಂಡರು. 2019ರಲ್ಲಿ ನಡೆದ ಎಂಪಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಲನಚಿತ್ರ ನಿರ್ಮಾಣ, ರಾಜಕಾರಣದ ಜೊತೆ ಜೊತೆಯಲ್ಲೇ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ತಾಲೂಕಿನ ಮನೆ ಮಾತಾಗಿದ್ದಾರೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ಘೋಷಣೆ ಆಗಬೇಕು ಅದರಲ್ಲೂ ಸ್ಥಳೀಯರಿಗೆ ಎಂಬ ಕೂಗು ಸ್ಥಳೀಯ ಮುಖಂಡರದ್ದು, ಈ ಎಲ್ಲಾ ಮಾನದಂಡಗಳು ಸಾರಥಿ ಸತ್ಯಪ್ರಕಾಶ್ ಅವರಿಗೆ ಸರಿಹೊಂದುತ್ತವೆ. ಇವರಿಗೆ ಕ್ಷೇತ್ರ ಪರಿಚಯ, ಕ್ಷೇತ್ರದ ಒಳ ಹೊರಗಿನ ಅರಿವಿದೆ, ಸಂಪನ್ಮೂಲ ಹೊಂದಿರುವ ವ್ಯಕ್ತಿ, ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂಬ ಮುಖಂಡರಿಗೆ ವಿಶ್ವಾಸ, ಮುಖ್ಯವಾಗಿ ಒಕ್ಕಲಿಗ ಸಮುದಾಯದವರು. ಅದೇ ರೀತಿ ಬಿ.ಎಸ್.ಯಡಿಯೂರಪ್ಪ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಚಿವರಾದ ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆ, ಸೇರಿದಂತೆ ರಾಷ್ಟ್ರ, ರಾಜ್ಯ ಮಟ್ಟದ ನಾಯಕರ ಜೊತೆ ಒಡನಾಟ ಉತ್ತಮವಾಗಿದೆ. ಆದ್ದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಾರಥಿ ಸತ್ಯಪ್ರಕಾಶ್ ಅವರ ಹೆಸರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ನಡೆಸಿದ ಸಮೀಕ್ಷೆಯಲ್ಲಿ ಪ್ರಬಲವಾಗಿ ಕೇಳಿಬಂದಿದೆ.
ತಾಲೂಕಿನಾದ್ಯಂತ ತಮ್ಮ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯಡಿ ಬೃಹತ್ ಆರೋಗ್ಯ ಮೇಳ, ನೂರಾರು ಜನರಿಗೆ ಶಸ್ತ್ರಚಿಕಿತ್ಸೆ, ನಾಲ್ಕೂ ಹೋಬಳಿಗಳಲ್ಲಿ ಅಂಬುಲೆನ್ಸ್ ಸೇವೆ ಸಹ ಒದಗಿಸಿದ್ದಾರೆ. ಶಿವರಾತ್ರಿ ಜಾಗರಣೆ ಮಹೋತ್ಸವ ಆಚರಿಸಿದ್ದು, ಯಶಸ್ವಿ ಕಾರ್ಯಕ್ರಮವಾಗಿ ತಾಲೂಕಿನ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಸದ್ಯ ಬಿಜೆಪಿ ಪಕ್ಷ ನಡೆಸಿದ ಕೇಂದ್ರ ಗುಪ್ತಚರ ಹಾಗೂ ನಮೋ ಸಮೀಕ್ಷೆಯಲ್ಲಿ ಸತ್ಯಪ್ರಕಾಶ್ ಹೆಸರು ದಿಢೀರ್ ಮುನ್ನೆಲೆಗೆ ಬಂದಿರುವುದು ಕೂಡ ಸಾರಥಿ ಪರಿಗಣನೆ ನಿಚ್ಚಳವಾಗಬಹುದು ಎನ್ನಲಾಗಿದೆ.
ಕ್ಷೇತ್ರದಲ್ಲಿ ಜಾಲಪ್ಪ ಪ್ರಭಾವ ಹೆಚ್ಚಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ದನಿ ಎತ್ತಿದ ಮೊದಲ ವ್ಯಕ್ತಿ ಎಂಬ ಖ್ಯಾತಿ ಸಾರಥಿ ಸತ್ಯಪ್ರಕಾಶ್ ಅವರಿಗೆ ಸಲ್ಲುತ್ತದೆ.
ಬೆಂಗಳೂರಿನ ಕಸದ ಸಮಸ್ಯೆಯಿಂದ ದೊಡ್ಡಬಳ್ಳಾಪುರ ಜನರನ್ನು ಪಾರು ಮಾಡುವುದೇ ಸಾರಥಿ ಸತ್ಯಪ್ರಕಾಶ್ ಅವರ ಉದ್ದೇಶವಾಗಿದೆ.
ಸಾರಥಿ ಸತ್ಯಪ್ರಕಾಶ್ ಅವರ ಸ್ಪರ್ಧೆಗೆ ಮಠಾಧೀಶರ ಬೆಂಬಲವೂ ಇದೆ ಎನ್ನಲಾಗಿದೆ. ದಶಕಗಳಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಾಖಾ ಮಠದ ಶ್ರೀಗಳೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದು, ಇದು ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಲು ಪರೋಕ್ಷವಾಗಿ ವರದಾನ ಆಗಬಹುದು ಎನ್ನಲಾಗಿದೆ.
ಶ್ರೀಮಠಕ್ಕೆ ಪ್ರತಿ ಬಾರಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಭೇಟಿ ನೀಡುವುದುಂಟು. ಇತ್ತೀಚೆಗೆ ಶ್ರೀಗಳೇ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಕ್ಕಲಿಗೆ ಸಮುದಾಯ ಆಕಾಂಕ್ಷಿಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಸೂಚಿಸಿರುವುದು ಸಾರಥಿ ಸತ್ಯಪ್ರಕಾಶ್ ಅವರಿಗೆ ವರವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಶ್ರೀಗಳ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…