ಕಳ್ಳರ ಜಾಡು ಹಿಡಿದು ಸೆರೆ ಹಿಡಿಯುವಾಗ ಹುತಾತ್ಮರಾದ ಪಿಎಸ್ ಐ ಜಗದೀಶ್ ರವನ್ನ ಕಳೆದ ಎಂಟು ವರ್ಷಗಳಿಂದ ನೆನೆಯುತ್ತಿರುವ ದೊಡ್ಡಬಳ್ಳಾಪುರ ಜನತೆಗೆ ಸದಾ ಚಿರಋಣಿಯಾಗಿರುವುದಾಗಿ ಡಿವೈಎಸ್ಪಿ ರವಿ.ಪಿ ಅವರು ಹೇಳಿದರು.
ನಗರದ ಪಿಎಸ್ ಐ ಜಗದೀಶ್ ವೃತ್ತದಲ್ಲಿ ಪಿಎಸ್ ಐ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಪಿಎಸ್ ಐ ಜಗದೀಶ್ ಅವರ 8ನೇ ವರ್ಷದ ಪುಣ್ಯಸ್ಮರಣೆಯನ್ನು ಅಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಹಳ ಅವಿಸ್ಮರಣೀಯ ಕಾರ್ಯಕ್ರಮ ಇದು , ಜನರೊಂದಿಗೆ ಬೆರಯುವ ಪೊಲೀಸ್ ಅಧಿಕಾರಿಗಳನ್ನ ನೆನೆಯುವ ಪದ್ದತಿ ನಮ್ಮಲಿದೆ, ದೊಡ್ಡಬಳ್ಳಾಪುರದ ಜನ ಬಹಳ ವಿಶೇಷತೆಯನ್ನ ಹೊಂದಿದ್ದಾರೆ, ನಾನು 25 ವರ್ಷಗಳ ಸೇವೆಯಲ್ಲಿ ದೊಡ್ಡಬಳ್ಳಾಪುರದ ಜನತೆ ನೀಡುವ ಪ್ರೀತಿಯನ್ನ ನೋಡಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಠಾಣೆ ಪಿಐ ಅಮರೇಶ ಗೌಡ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿನಾರಾಯಣ, ಪೌರಾಯುಕ್ತ ಪರಮೇಶ್, ಕನ್ನಡಪರ ಹೋರಾಟಗಾರ ರಾಜಘಟ್ಟರವಿ, ನಗರಸಭೆ ಸದಸ್ಯರಾದ ಇಂದ್ರಾಣಿ, ಆದಿಲಕ್ಷ್ಮಿ, ಮಲ್ಲೇಶ್, ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಕೃಷ್ಣಪ್ಪ, ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…