ದೊಡ್ಡಬಳ್ಳಾಪುರ ಕ್ಷೇತ್ರದ ಮತದಾರರ ಪಟ್ಟಿ ಫೈನಲ್‌:ದೊಡ್ಡಬಳ್ಳಾಪುರದಲ್ಲಿ 1.94 ಲಕ್ಷ ಮತದಾರರು: 31,172 ಮತದಾರರ ಹೆಸರು ಡಿಲೀಟ್‌

ದೊಡ್ಡಬಳ್ಳಾಪುರ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)-2026ರ ಪ್ರಕ್ರಿಯೆ ಪೂರ್ಣಗೊಂಡಿದ್ದು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,94,330 ಮತದಾರರು ದಾಖಲಾಗಿದ್ದು, ಪರಿಷ್ಕರಣೆ ಪ್ರಕ್ರಿಯೆಯಲ್ಲಿ 31,172 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಟಿ.ಆರ್. ಮಂಜುನಾಥ್ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಅಂಕಿ-ಅಂಶಗಳನ್ನು ವಿವರಿಸಿದರು.

ಮತದಾರರ ಸಂಖ್ಯೆಯಲ್ಲಿ ಏರಿಕೆ:

ಕರಡು ಮತದಾರರ ಪಟ್ಟಿಯಲ್ಲಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,92,228 ಇತ್ತು. ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 1,94,330ಕ್ಕೆ ಏರಿಕೆಯಾಗಿದೆ. ಕರಡು ಪಟ್ಟಿಯಲ್ಲಿ 94,566 ಪುರುಷರು ಹಾಗೂ 97,661 ಮಹಿಳಾ ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 95,589 ಪುರುಷರು ಮತ್ತು 98,740 ಮಹಿಳಾ ಮತದಾರರು ದಾಖಲಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 279 ಮತಗಟ್ಟೆಗಳಿವೆ.

31,172 ಮತದಾರರ ಹೆಸರು ಗುರುತು:

ಎಸ್‌ಐಆರ್‌ ಪ್ರಕ್ರಿಯೆಯಡಿ ಕ್ಷೇತ್ರದಲ್ಲಿ ಒಟ್ಟು 31,172 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ 6,497 ಮಂದಿ ಮೃತಪಟ್ಟವರು, 19,298 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 4,280 ಮಂದಿ ದ್ವಿ-ನಮೂದು ಹೊಂದಿದವರು, 856 ಮಂದಿ ಗೈರುಹಾಜರಾದವರು ಹಾಗೂ 241 ಮಂದಿ ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.

36,792 ಅರ್ಜಿಗಳು ಸ್ವೀಕೃತಿ:

ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ನಮೂನೆ 6, 7 ಮತ್ತು 8ರ ಅಡಿಯಲ್ಲಿ ಒಟ್ಟು 37,679 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 36,792 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ಉಳಿದ 887 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ನಮೂನೆ-6ರ ಅಡಿಯಲ್ಲಿ ಹೊಸ ಮತದಾರರ ಸೇರ್ಪಡೆಗೆ 2,217 ಅರ್ಜಿಗಳು ಬಂದಿದ್ದು, 2,045 ಅರ್ಜಿಗಳನ್ನು ಅಂಗೀಕರಿಸಿ 172 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ-7ರ ಅಡಿಯಲ್ಲಿ ಬಂದ 31,439 ಅರ್ಜಿಗಳಲ್ಲಿ 31,218 ಅಂಗೀಕಾರಗೊಂಡಿದ್ದು, 221 ತಿರಸ್ಕೃತಗೊಂಡಿವೆ. ನಮೂನೆ-8ರ ಅಡಿಯಲ್ಲಿ ಸ್ವೀಕೃತವಾದ 4,023 ಅರ್ಜಿಗಳಲ್ಲಿ 3,529 ಅಂಗೀಕಾರಗೊಂಡಿದ್ದು, 494 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಮತಗಟ್ಟೆಗಳ ಸಂಖ್ಯೆ 279ಕ್ಕೆ ಏರಿಕೆ:

ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು 276ರಿಂದ 279ಕ್ಕೆ ಹೆಚ್ಚಿಸಲಾಗಿದೆ. ಕಂಟನಕುಂಟೆ, ವರದನಹಳ್ಳಿ ಮತ್ತು ದೊಡ್ಡತುಮಕೂರು ಪ್ರದೇಶಗಳಲ್ಲಿ ಮರುವಿಂಗಡಣೆ ಮೂಲಕ ಹೆಚ್ಚುವರಿ ಮತಗಟ್ಟೆಗಳನ್ನು ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 279 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದ ಮತದಾರರು ಯಾರೂ ಇಲ್ಲ ಎಂದು ಮಂಜುನಾಥ್ ತಿಳಿಸಿದರು.

3,796 ಯುವ ಮತದಾರರು:

ಅಂತಿಮ ಮತದಾರರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ 18ರಿಂದ 19 ವರ್ಷದೊಳಗಿನ 3,796 ಯುವ ಮತದಾರರು, 80 ವರ್ಷ ಮೇಲ್ಪಟ್ಟ 4,412 ಹಿರಿಯ ನಾಗರಿಕರು, 3,046 ವಿಕಲಚೇತನ ಮತದಾರರು ಹಾಗೂ 49 ಸೇವಾ ಮತದಾರರು ದಾಖಲಾಗಿದ್ದಾರೆ.

ನಿರಂತರ ಪರಿಷ್ಕರಣೆಗೆ ಅವಕಾಶ:

ಅಕ್ಟೋಬರ್ 27ರಿಂದ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿಯಲಿದೆ. ಪಟ್ಟಿಯಲ್ಲಿ ಹೆಸರು ಬಿಟ್ಟುಹೋದವರು, ಹೊಸದಾಗಿ ಮತದಾರರಾಗಲು ಅರ್ಹತೆ ಹೊಂದಿರುವ ಯುವಕರು ಹಾಗೂ ಇತರೆ ಅರ್ಹರು ಹೆಸರು ಸೇರ್ಪಡೆಗಾಗಿ ನಮೂನೆ-6 ಸಲ್ಲಿಸಬಹುದು. ಹೆಸರು, ಇತರೆ ವಿವರಗಳ ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗೆ ನಮೂನೆ-8 ಸಲ್ಲಿಸಲು ಅವಕಾಶವಿದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಥಮ ಮೇಲ್ಮನವಿ ಪ್ರಕರಣಗಳು ಯಾವುದೇ ದಾಖಲಾಗಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಾದ ಶೋಭಾ, ರಾಜು, ಚಂದ್ರಪ್ಪ, ವೆಂಕಟೇಶ್, ರತ್ನಮ್ಮ, ಲಕ್ಷ್ಮೀದೇವಿ ಹಾಗೂ ಚಂದ್ರಶೇಖರ್ ಅವರನ್ನು ಚುನಾವಣಾಧಿಕಾರಿ ಟಿ.ಆರ್. ಮಂಜುನಾಥ್ ಅಭಿನಂದಿಸಿದರು.

Ramesh Babu

Journalist

Recent Posts

ವೀರಾಪುರ ರಸ್ತೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ನಗರದ ವೀರಾಪುರ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ಎದುರಿನ ನಿರ್ಜನ‌ ಪ್ರದೇಶದಲ್ಲಿನ ರಾಜಕಾಲುವೆ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ…

9 hours ago

ಪರವಾನಗಿ ಇಲ್ಲದೆ ಪಟಾಕಿ ದಾಸ್ತಾನು: 10 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳ ವಶ: ಏಳು ಮಂದಿ ವಿರುದ್ಧ ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು…

10 hours ago

ಫಾಕ್ಸ್‌ಕಾನ್ ಕಂಪನಿ ಬಸ್‌– ಖಾಸಗಿ ಶಾಲಾ ವಾಹನ ನಡುವೆ ಡಿಕ್ಕಿ: ಮಕ್ಕಳು ಪಾರು

ದೊಡ್ಡಬಳ್ಳಾಪುರ: ಫಾಕ್ಸ್‌ಕಾನ್ ಕಂಪನಿಯ ಬಸ್ ಹಾಗೂ ಖಾಸಗಿ ಶಾಲಾ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೀತಂ ವಿಶ್ವವಿದ್ಯಾಲಯದ…

10 hours ago

ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟ: ಮತ ಎಣಿಕೆ ಆರಂಭ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮಂಗಳವಾರ ಬೆಳಗ್ಗೆ…

10 hours ago

ಎಮ್ಮೆ, ಹಸು, ದನ, ಕುರಿ, ಮೇಕೆ ಕಾಯುತ್ತಾ….

ಶ್ರಮದಾನ ಪರಿಕಲ್ಪನೆಯ ಎಂಟನೆಯ ಉದ್ಯೋಗವಾಗಿ ದಿನಾಂಕ 25/10/2026ರ ಭಾನುವಾರ ಬೆಳಗ್ಗೆ ಮನೆಯಿಂದ ಹೊರಟು ಬಸ್ಸಿನಲ್ಲಿ ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ…

11 hours ago

ಕರ್ನಾಟಕದಲ್ಲಿ ಮಂಜಿನ ಮುಸುಕು; ಎಲ್ ನೀನೋ ಪ್ರಭಾವದಿಂದ ಚಳಿ ಕಡಿಮೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ಆರಂಭದ ಸೂಚನೆಗಳು ಕಾಣಿಸತೊಡಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು…

12 hours ago