ತಾಲೂಕಿನಲ್ಲಿ ಹಲವು ತಿಂಗಳುಗಳಿಂದ ಸಾರಿಗೆ ಅವ್ಯವಸ್ಥೆ ಕಾಡುತ್ತಿದೆ. ಈ ಸಾರಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಇಂದು ಬಸ್ ಪ್ರಯಾಣಿಕರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಪತ್ರ ನೀಡಿದರು.
ಇಂದು ಕೋರಮಂಗಲದ ಬಿಬಿಎಂಪಿ ಕಚೇರಿಯಲ್ಲಿ ರಾಮಲಿಂಗಾ ರೆಡ್ಡಿ ಅವರನ್ನು ಪ್ರಯಾಣಿಕರಾದ ವಿನೋದ್ ಕುಮಾರ್, ಮಂಜುನಾಥ್, ಚಂದ್ರ ಮಂಚನಬೆಲೆ, ಸಚಿನ್, ಮಂಜು ಆರ್ ಅವರು ಭೇಟಿಯಾಗಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉಂಟಾಗಿರುವ ಸಾರಿಗೆ ಅವ್ಯವಸ್ಥೆ ಕುರಿತು ವಿವರಿಸಿದರು.
ದೊಡ್ಡಬಳ್ಳಾಪುರವು ಬೆಂಗಳೂರು ನಗರದಿಂದ ಸುಮಾರು 38 ಕಿ.ಮೀ. ಗಳ ದೂರದಲ್ಲಿದ್ದು, ದೊಡ್ಡಬಳ್ಳಾಪುರದ ನಾಗರಿಕರು ಬೆಂಗಳೂರಿಗೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ತುಂಬಾ ವರ್ಷಗಳಿಂದಲೂ ಇದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಯಾವುದೇ ಸರ್ಕಾರ ಮತ್ತು ಶಾಸಕರು ಬಂದರೂ ಸಹ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಾವು ತಮ್ಮ ಮೇಲಿನ ನಂಬಿಕೆ ಹಾಗೂ ವಿಶ್ವಾಸದಿಂದ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಈ ಮೊದಲು ಭಾಗಮಂಡಲ, ಲಕ್ಷೇಶ್ವರ ನಂದಿಬೆಟ್ಟ ಮತ್ತು ಇತರೆ ಕೆಲವು ಜಿಲ್ಲೆಗಳಿಗೆ ಹೋಗುತ್ತಿದ್ದ ಬಸ್ಸುಗಳನ್ನು ಈ ಹಿಂದೆ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್ ರದ್ದು ಮಾಡಿರುತ್ತಾರೆ. ಹಾಗೂ ಈ ಹಿಂದೆ ಕಾವೇರಿ ಭವನ, ಬೆಂಗಳೂರು, ದೊಡ್ಡಬಳ್ಳಾಪುರ ನಡುವೆ ಸಂಚರಿಸಲು ಸುಮಾರು 15-20ರಷ್ಟು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಇದೀಗ ಅವುಗಳ ಸಂಖ್ಯೆ ಕೇವಲ 3-4ಕ್ಕೆ ಇಳಿದಿವೆ.
ಪ್ರತಿ ದಿನ ಸಾವಿರಾರು ಜನರು ಬೆಂಗಳೂರಿಗೆ ಬಂದು ಹೋಗುವವರಿದ್ದು, ಅವರುಗಳಲ್ಲಿ ಹೆಚ್ಚಾಗಿ ನ್ಯಾಯಾಲಯ, ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ, ಆಸ್ಪತ್ರಗಳಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಹೋಗುವ ಉದ್ಯೋಗಿಗಳು, ವ್ಯಾಪಾರಸ್ಥರು, ಅವೆನ್ಯೂ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ನಡೆಸುತ್ತಿರುವವರರಿದ್ದು, ಸದರಿಯವರುಗಳು ಸಮಯಕ್ಕೆ ಸರಿಯಾಗಿ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗಲು ಹಾಗೂ ಬರಲು ತುಂಬಾ ಕಷ್ಟಕರವಾಗಿರುತ್ತದೆ.
ದೊಡ್ಡಬಳ್ಳಾಪುರ-ಕಾವೇರಿ ಭವನ ಮಾರ್ಗವಾಗಿ ಬಸ್ಸುಗಳ ಸಂಚಾರ ಇದ್ದು, ಆದರೆ, ಪ್ರಸ್ತುತ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ.ಯ ಸಿಬ್ಬಂದಿಯನ್ನು ವಿಚಾರಿಸಲಾಗಿ, ಚಿಕ್ಕಬಳಾಪುರ ವಿಭಾಗಕ್ಕೆ ಸದರಿ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಅಲ್ಲಿಂದ ಸರಿಯಾಗಿ ಯಾವುದೇ ಬಸ್ಸುಗಳ ಸೇವೆ ಹಾಗೂ ಬಸ್ಸುಗಳಿಗೆ ಬೇಕಾಗುವ ಬಿಡಿ ಭಾಗಗಳು ಸರಿಯಾಗಿ ವಿತರಿಸದೇ ಇರುವುದೇ ಕಾರಣವೆಂದು ತಿಳಿಸಿರುತ್ತಾರೆ.
ಆದ್ದರಿಂದ, ಈ ಮೊದಲು ಬೆಂಗಳೂರಿನ ಕೇಂದ್ರ ವಿಭಾಗಕ್ಕೆ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಈಗ ಮತ್ತೆ ಚಿಕ್ಕಬಳ್ಳಾಪುರ ವಿಭಾಗದಿಂದ ಬೇರ್ಪಡಿಸಿ ಬೆಂಗಳೂರಿನ ಕೇಂದ್ರ ಡಿಪೋಗೆ ಸೇರಿಸುವಂತೆ ಕೋರುತ್ತೇವೆ ಹಾಗೂ ಈಗಾಗಲೇ ರದ್ದುಪಡಿಸಿರುವ ಬಸ್ಸುಗಳ ರೂಟ್ (ಭಾಗಮಂಡಲ, ಲಕ್ಷೇಶ್ವರ ನಂದಿಬೆಟ್ಟ) ಬಸ್ಸುಗಳನ್ನು ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳ ಸೇವೆಯನ್ನು ದೊಡ್ಡಬಳ್ಳಾಪುರದಿಂದ ಕಾವೇರಿ ಭವನಕ್ಕೆ ಬೆಳಿಗ್ಗೆ 07-09 ಗಂಟೆಯವರೆಗೆ ಹಾಗೂ ಕಾವೇರಿ ಭವನದಿಂದ ದೊಡ್ಡಬಳ್ಳಾಪುರಕ್ಕೆ ಸಂಜೆ 6-8ಗಂಟೆಯವರೆಗೆ ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ತ್ವರಿತವಾಗಿ ಸ್ಪಂದಿಸಿ ಜಿಲ್ಲಾ ಸಾರಿಗೆ ವ್ಯವಸ್ಥಾಪಕರಿಗೆ ಕರೆಮಾಡಿ ಹೆಚ್ಚುವರಿ ಬಸ್ಸುಗಳನ್ನು ಒಂದು ವಾರದ ಒಳಗಾಗಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…