ದೊಡ್ಡಬಳ್ಳಾಪುರ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಜನರು ಹೆಚ್ಚಾಗಿ ಸೇರುವ ಬಸ್ ನಿಲ್ದಾಣ, ಮಾರುಕಟ್ಟೆ, ಪಾರ್ಕ್, ದೇವಸ್ಥಾನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಸರಗಳ್ಳರಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.
ಸರಗಳ್ಳತನ ತಡೆಯುವ ಬಗ್ಗೆ ಸಲಹೆಗಳು :
1. ಒಂಟಿಯಾಗಿ ಜನರಿಲ್ಲದ ಪ್ರದೇಶಗಳಲ್ಲಿ ಹೆಂಗಸರು ಓಡಾಡುವುದನ್ನು ತಪ್ಪಿಸಿ.
2. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈಗೆಟಕುವ ಅಂತರದಲ್ಲಿ ನಿಲ್ಲಬೇಡಿ.
3. ಅನುಮಾನಾಸ್ಪದ ವಾಹನಗಳು ನಿಮ್ಮ ಬಳಿ ಬರುವಾಗ ವಾಹನದ ವಿಧ, ಬಣ್ಣ, ನೊಂದಣಿ ಸಂಖ್ಯೆ ವಾಹನ ಸವಾರರು ಧರಿಸಿರುವ ಬಟ್ಟೆ, ಚಹರೆ, ಮುಖದಲ್ಲಿ ಗುರುತಿಸಬಹುದಾದ ಯಾವುದಾದರೂ ವಿಶೇಷತೆಗಳು ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ
5. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳಿ
6. ಸರ ಮತ್ತು ಧರಿಸುವ ಬಟ್ಟೆಗೆ ಹೊಂದಿಸಿ ಸೇಫ್ಟಿ ಪಿನ್ಗಳನ್ನು ಹಾಕಿ.
8. ಮನೆಯಿಂದ ಹೊರಗೆ ಹೋಗುವಾಗ, ಅಂಗಡಿಗೆ ಹೋಗುವಾಗ, ಅಂಗಡಿಯಿಂದ ಸಾಮಾನು ಖರೀದಿಸಿ ಹೊರಡುವಾಗ ಜಾಗ್ರತೆ ಅಗತ್ಯ.
9. ಬೆಳಗಿನ ಸಮುಯದಲ್ಲಿ ದೇವಸ್ಥಾನಕ್ಕೆ, ಅಂಗಡಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ.
11. ಕತ್ತಲೆ ಪ್ರದೇಶದಲ್ಲಿ ಪವರ್ ಕಟ್ ಆದ ಸಮಯದಲ್ಲಿ ನಡೆದಾಡುವಾಗ ನಿಮ್ಮ ಆಭರಣಗಳ ಕಡೆ ಹೆಚ್ಚಿನ ಗಮನ ವಹಿಸಿ ಹಾಗೂ ನಿಮ್ಮ ಜೊತೆಗಾರರಿಗೂ ಸರಗಳ್ಳತನಗಳ ಬಗ್ಗೆ ಮನವರಿಕೆ ಮಾಡಿಕೊಡಿ.
12. ಅಪರಾಧ ತಡೆ ಮತ್ತು ಪತ್ತೆ ಪೊಲಿಸರಿಗಷ್ಟೇ ಜವಾಬ್ದಾರಿ ಎಂದು ಭಾವಿಸಬೇಡಿ. ನಿಮ್ಮ ಸಹಕಾರ ಕೂಡ ಅತ್ಯಗತ್ಯ ಎಂದು ಜಾಗೃತಿ ಮೂಡಿಸಲಾಯಿತು.
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…