ಫೆಬ್ರವರಿ 26ರ ಗುರವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ರಾಜಸ್ಥಾನದ ಉದಯಪುರದಲ್ಲಿ ದಕ್ಷಿಣ ಭಾರತೀಯ ಸಿನಿರಂಗದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದೀಗ ಈ ಜೋಡಿ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಇದೀಗ ಫೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಪೋಸ್ಟ್‌ನಲ್ಲೇನಿದೆ?
“ಒಂದು ದಿನ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡೆ. ಆಕೆ ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು, ಅವಳು ಎದುರಿಗೆ ಕುಳಿತಿದ್ದರೆ ನಾನು ಮಾಡುವ ಊಟಕ್ಕೆ ಒಂದು ಅರ್ಥ ಸಿಗುತ್ತಿತ್ತು. ನನ್ನ ಜೀವನಕ್ಕೆ ನೆಮ್ಮದಿ ಮತ್ತು ಮನೆ ಎಂಬ ಭಾವ ನೀಡಲು ಅವಳು ಬೇಕೇ ಎಂದು ನನಗೆ ಅನಿಸುತ್ತಿತ್ತು. ಆದ್ದರಿಂದ ನನ್ನ ಅತ್ಯುತ್ತಮ ಗೆಳತಿಯನ್ನು… ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ. 26.02.2026.” ಎಂದು ಲವ್ ಮತ್ತು ಸ್ಮೈಲ್ ಇಮೋಜಿಯೊಂದಿಗೆ ಬರೆದುಕೊಂಡು ಗಮನ ಸೆಳೆದಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟ್‌ನಲ್ಲೇನಿದೆ?
ಈಗ ನಿಮಗಾಗಿ ನನ್ನ ಪತಿಯನ್ನು ಪರಿಚಯಿಸುತ್ತಿದ್ದೇನೆ, ಶ್ರೀ ವಿಜಯ್ ದೇವರಕೊಂಡ ನಿಜವಾದ ಪ್ರೀತಿ ಎಂದರೆ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ ಇವರು. ಮನಸ್ಸಿನ ನೆಮ್ಮದಿ ಎಂದರೆ ಏನು ಎಂಬುದನ್ನು ನನಗೆ ತೋರಿಸಿಕೊಟ್ಟವರು. ದೊಡ್ಡದಾಗಿ ಕನಸು ಕಾಣುವುದು ತಪ್ಪಲ್ಲ ಎಂದು ಪ್ರತಿದಿನ ನನಗೆ ಹೇಳುತ್ತಾ, ನಾನು ಊಹಿಸಿರುವುದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯವನ್ನು ನನಗೆ ನೆನಪಿಸಿ ಸದಾ ಬೆಂಬಲವಾಗಿ ನಿಂತ ವ್ಯಕ್ತಿ,” ಎಂದು ಬರೆದುಕೊಂಡಿದ್ದಾರೆ.
“ನಾನು ಯಾವಾಗಲೂ ಯಾವ ರೀತಿಯ ಹೆಣ್ಣಾಗಬೇಕೆಂದು ಕನಸು ಕಂಡಿದ್ದೆನೋ, ಇಂದು ಅಂತಹವಳೇ ಆಗಿದ್ದೇನೆ. ಯಾಕೆಂದರೆ ನೀನು ಇಂದು ಈ ಮಟ್ಟಕ್ಕೆ ರೂಪಿಸಿದ್ದೀಯ. ನಾನು ನಿಜವಾಗಿಯೂ ಧನ್ಯಳಾಗಿದ್ದೇನೆ. “ವಿಜ್ಜು, ನಿನ್ನ ಮೇಲಿರುವ ನನ್ನ ಭಾವನೆಗಳನ್ನು ವಿವರಿಸಲು ನನಗೆ ಪದಗಳೇ ಸಾಲುವುದಿಲ್ಲ. ಇದನ್ನು ನಾನು ನಿನಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.
ಆದರೆ, ಇದ್ದಕ್ಕಿದ್ದಂತೆ ನನ್ನೆಲ್ಲಾ ಸಾಧನೆಗಳು, ಹೋರಾಟಗಳು, ಸುಖ-ದುಃಖಗಳು, ಸಂಭ್ರಮಗಳು ಮತ್ತು ನನ್ನ ಇಡೀ ಜೀವನ ಇವೆಲ್ಲದಕ್ಕೂ ಈಗ ಒಂದು ಪರಿಪೂರ್ಣ ಅರ್ಥ ಸಿಕ್ಕಂತಿದೆ. ಯಾಕೆಂದರೆ ಈಗ ನೀನು ನನ್ನ ಜೊತೆಗಿದ್ದೀಯಾ. ಇವೆಲ್ಲವನ್ನೂ ಹತ್ತಿರದಿಂದ ನೋಡುತ್ತಾ, ನನ್ನ ಬದುಕಿನ ಅತಿದೊಡ್ಡ ಭಾಗವಾಗಿದ್ದೀಯಾ. ನಿನ್ನ ಪತ್ನಿಯಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಿನ್ನ ಹೆಂಡತಿಯಾಗಲು, ನಿನ್ನ ಹೆಂಡತಿ ಎಂದು ಕರೆಸಿಕೊಳ್ಳಲು ನಾನು ಕಾತರಳಾಗಿದ್ದೇನೆ. ಇದು ಪೂರ್ತಿ ಪಾರ್ಟಿ ಮಾಡುವ ಸಮಯ. ನಾವು ಒಟ್ಟಾಗಿ ಸದಾಕಾಲ ಉತ್ತಮ ಜೀವನ ಮಾಡೋಣ. ಐ ಲವ್ ಯು ಎಂದು ಬರೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…
ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…
ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ…
ಪೊಲೀಸ್ ಇಲಾಖೆಯಲ್ಲಿ 1000 ಸಬ್ ಇನ್ಸ್ಪೆಕ್ಟರ್ ಹಾಗೂ 8000 ಕಾನ್ಸ್ಟೇಬಲ್ ಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು…
ಇಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ…
2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ದಿನವೇ National Academic Depository…