ದರೋಡೆ ಮಾಡಲು ಅಪಘಾತ ಮಾಡಿ ಮಹಿಳೆ ಕೊಲೆ: ಅನಾರೋಗ್ಯದಿಂದ ಆರೋಪಿ‌ ಕೂಡ ಸಾವು

ದರೋಡೆ ಮಾಡಲು ಅಪಘಾತ ಮಾಡಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ…

ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ವಿಜಯಲಕ್ದ್ಮಿಗೆ ಬೈಕ್‌ನಿಂದ ಡಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪ ಕೇಳಿ ಬಂದಿತ್ತು. ಏಪ್ರಿಲ್ 20ರಂದು ಅಪಘಾತ ಪ್ರಕರಣ ವಿಜಯನಗರ ಟ್ರಾಫಿಕ್ ಠಾಣೆಯಲ್ಲಿ ದಾಖಲಾಗಿತ್ತು. ಗಾಯಗೊಂಡಿದ್ದ ಮಹಿಳೆ ಏಪ್ರಿಲ್ 27ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತನಿಖೆಯಲ್ಲಿ ಮನೆ ದರೋಡೆ ಮತ್ತು ಚಿನ್ನಾಭರಣ ಕಳವು ಸಂಚು ಬಯಲಾಗಿದೆ. ಪ್ರಕರಣಕ್ಕೆ ಕೊಲೆ ಮತ್ತು ಮನೆ ಕಳವು ಸೆಕ್ಷನ್ ಸೇರಿಸಿ ತನಿಖೆ ಮುಂದುವರಿಸಲಾಗಿದೆ..

ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಮೇ 2ರಂದು ಆರೋಪಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೇ 5ರಂದು ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮಂಜುನಾಥ್ ಸಹ ಸಾವನ್ನಪ್ಪಿದ್ದಾನೆ.

ಮೃತ ಆರೋಪಿ ಮಂಜುನಾಥ ವಿರುದ್ಧ ವಿವಿಧ ಠಾಣೆಗಳಲ್ಲಿ ಒಟ್ಟು 6 ಪ್ರಕರಣ ದಾಖಲಾಗಿತ್ತು.

ಶೇಷಾದ್ರಿಪುರಂ ಠಾಣೆಯಲ್ಲಿ ರೌಡಿಶೀಟ್ ಓಪನ್ ಆಗಿದ್ದ ಆರೋಪಿಗೆ ದೀರ್ಘಕಾಲದ ಅನಾರೋಗ್ಯ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿ ಅನಾರೋಗ್ಯದಿಂದಲೇ ಆರೋಪಿಯ ಸಾವು ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!