Categories: ಕೋಲಾರ

ತೇರಹಳ್ಳಿ ಬೆಟ್ಟದಲ್ಲಿನ ಅರ್ಚಕರ ಬದಲಾವಣೆ ಮಾಡಲು ಮತದಾನ ಬಹಿಷ್ಕಾರಕ್ಕೆ ತೀರ್ಮಾನ

ಕೋಲಾರ: ನಗರ ಹೊರವಲಯದ ಶತಶೃಂಗ ಪರ್ವತದಲ್ಲಿರುವ ತೇರಹಳ್ಳಿಯ ಶ್ರೀ ಗೌರಿ ಗಂಗಾಧೇಶ್ವರ ದೇವಸ್ಥಾನದ ಅರ್ಚಕ ಕೆ.ಎಸ್.ಮಂಜುನಾಥ್ ದೀಕ್ಷಿತರನ್ನು ಬದಲಾಯಿಸಿ ಚಂದ್ರಶೇಖರ್ ದೀಕ್ಷಿತ್ ರವರನ್ನೇ ಮುಂದುವರೆಸಬೇಕು ಇಲ್ಲದೇ ಹೋದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ತೇರಹಳ್ಳಿ ಗ್ರಾಮಸ್ಥರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಸತೀಶ್ ಮಾತನಾಡಿ ನಮ್ಮೂರ ಗ್ರಾಮ ದೇವಸ್ಥಾನಕ್ಕೆ ಇತಿಹಾಸ ಪ್ರಸಿದ್ಧವಾಗಿದೆ ಆದರೆ ಆರ್.ಐ ರಾಜೇಂದ್ರ ಪ್ರಸಾದ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗೌತಮ್ ರವರ ಕುಮ್ಮಕ್ಕಿನಿಂದ ಅರ್ಚಕ ಮಂಜುನಾಥ್ ದೀಕ್ಷಿತ್ ದೇವಾಲಯದಲ್ಲಿ ಸಮರ್ಪಕವಾಗಿ ಪೂಜೆ ಸಲ್ಲಿಸದೆ ವಿನಾಕಾರಣ ಪ್ರತಿ ದೇವತಾ ಕಾರ್ಯಗಳಿಗೂ ಕ್ಯಾತೆ ತೆಗೆಯುವುದಲ್ಲದೆ ಉತ್ಸವ ಮೂರ್ತಿಗಳನ್ನು ಬದಲಿಸಿರುವ ಅನುಮಾನ ಮೂಡುತ್ತಾ ಇದೆ ಪ್ರತಿ ವರ್ಷದಂತೆ ನಡೆಯಬೇಕಾಗಿದ್ದ ದೇವರ ಜಾತ್ರೆ ಮತ್ತು ಬ್ರಹ್ಮ ರಥೋತ್ಸವಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ದೇವರ ಕೆಲಸಕ್ಕೆ ಅಡ್ಡಿ ಪಡಿಸಿರುವುದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಇಲ್ಲವಾಗಿದ್ದು,ತಕ್ಷಣ ಅವರನ್ನು ಬದಲಿಸಿ ಅರ್ಚಕ ಚಂದ್ರಶೇಖರ್ ರವರನ್ನು ಮುಂದುವರೆಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಶಿವಕುಮಾರ್ ಮಾತನಾಡಿ ಬೆಟ್ಟದ ಶಿವಗಂಗೆ ಗ್ರಾಮದ ವೆಂಕಟರಾಮಪ್ಪ, ಬಿನ್ ಮುನಿಶಾಮಪ್ಪ ಅವರು ಸ್ಮಶಾನ ಮತ್ತು ಸರ್ಕಾರಿ ಖರಾಬು ಜಾಗವನ್ನು ಜೆಸಿಬಿಗಳಿಂದ ಜಾಗವನ್ನು ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದು ಇದನ್ನು ತಡೆಯಬೇಕು ಹಾಗೂ ಸ್ಮಶಾನ ಜಾಗ ಮತ್ತು ಸರ್ಕಾರಿ ಜಾಗವನ್ನು ಉಳಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತೇರಹಳ್ಳಿ ಗ್ರಾಮಸ್ಥರಾದ ಚೌಡಪ್ಪ, ಬೈರಪ್ಪ, ಕೃಷ್ಣಪ್ಪ, ಸೀನಪ್ಪ, ಮುನಿಯಪ್ಪ, ನಾರಾಯಣಸ್ವಾಮಿ, ಕರ್ನಾಟಕ ಮಾನವ ಹಕ್ಕುಗಳ ರಕ್ಷಣ ಸಮಿತಿ ರಾಜ್ಯಾಧ್ಯಕ್ಷ ಗಲ್ ಪೇಟೆ ಸಂತೋಷ್, ಜಿಲ್ಲಾಧ್ಯಕ್ಷ ಶ್ರೀನಾಥ್ ಮುಂತಾದವರು ಇದ್ದರು

Ramesh Babu

Journalist

Recent Posts

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

2 hours ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

3 hours ago

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

16 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

16 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

17 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

23 hours ago