ಕೋಲಾರ: ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ರಾಜ್ಯಗಳಿಗೆ ತೆರಿಗೆ ವಂಚನೆ ಮಾಡುವ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಕೇಂದ್ರ ಆಡಳಿತ ಸರ್ಕಾರ ನಡೆಸುತ್ತಿದೆ. ಒಕ್ಕೂಟ ವ್ಯವಸ್ಥೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ವಿಚಾರವಾದಿ, ವಿಮರ್ಶಕ ಡಾ.ಹೆಚ್.ವಿ.ವಾಸು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಲೋಕನಾಯಕ ಜೆ.ಪಿ ವಿಚಾರ ವೇದಿಕೆ ಮತ್ತು ಸಮಾನ ಮನಸ್ಕ ಸ್ನೇಹಿತರ ವತಿಯಿಂದ ಗುರುವಾರ ನಡೆದ ಪ್ರಜಾಪ್ರಭುತ್ವದಲ್ಲಿ ರಾಜ್ಯ ಮತ್ತು ಒಕ್ಕೂಟ ವ್ಯವಸ್ಥೆ ಉಳಿಸಲು ಸರ್ಕಾರಗಳ ಸಂಬಂಧ ಮತ್ತು ಜನಾಭಿಪ್ರಾಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 200 ವರ್ಷಗಳ ಕಾಲ ಭಿನ್ನ ಭಾಷೆ, ಸಂಸ್ಕೃತಿ, ಧರ್ಮ ಇತ್ಯಾದಿ ಪಾಲನೆ ಮಾಡುತ್ತಿದ್ದ ರಾಜರ ಸಂಸ್ಥಾನಗಳು, ಬ್ರಿಟಿಷ್ ಆಡಳಿತ ಸಂಸ್ಥಾನಗಳು, ನಿಜಾಮರ ಆಳ್ವಿಕೆಗೆ ಒಳಪಟ್ಟ ಸಂಸ್ಥಾನಗಳು ಹೀಗೆ ಬಿಡಿ ಬಿಡಿಯಾಗಿ ಇದ್ದ ಪ್ರದೇಶಗಳನ್ನು ಬ್ರಿಟಿಷರು ತಮ್ಮ ಅಧೀನದಲ್ಲಿ ಇಟ್ಟು ಕೊಂಡಿದ್ದರು. ಪರಕೀಯರ ಆಳ್ವಿಕೆಗೆ ಬೇಸತ್ತು ಇವರೆಲ್ಲ ಸೇರಿ ಒಂದು ಒಕ್ಕೂಟವಾಗಿ ಗಳಿಸಿದ ಸ್ವಾತಂತ್ರ್ಯ ನಂತರ ಸಂವಿಧಾನದ ಮೊದಲನೇ ಪರಿಚ್ಛೇದದಲ್ಲೇ ಭಾರತ ಅಂದರೆ ರಾಜ್ಯಗಳ ಒಕ್ಕೂಟವಾಗೆ ಇರುತ್ತದೆ ಎಂದು ಬರೆಯಲಾಗಿದೆ ಎಂದು ಹೇಳಿದರು.
ಕಳೆದ ಎರಡು ಮೂರು ತಿಂಗಳಿಂದ ರಾಜ್ಯಕ್ಕೆ ಹಣಕಾಸು ಆಯೋಗದ ಸಮಿತಿ ಬಂದು ಹೋದಾಗಿನಿಂದ ರಾಜ್ಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಹಣಕಾಸು ಆಯೋಗದ ಸಮಿತಿ ಶಿಫಾರಸ್ಸು ಸಹ ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕವೂ ಸೇರಿದಂತೆ ಈ ದೇಶದ ಬೇರೆ ಬೇರೆ ರಾಜ್ಯಗಳ ಮೇಲೆ ಸಂವಿಧಾನಾತ್ಮಕವಾಗಿ, ರಾಜಕೀಯಾತ್ಮಕವಾಗಿ, ಶಾಸನಾತ್ಮಕವಾಗಿ, ಸಾಂಸ್ಕೃತಿಕವಾಗಿ ಮತ್ತು ವಿತ್ತೀಯವಾಗಿ ಬಹಳ ದೊಡ್ಡ ದಾಳಿ ನಡೆಯುತ್ತಿದೆ ಎಂದು ತಿಳಿಸಿದರು.
ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ, ಕೇಂದ್ರ ಹಣಕಾಸು ಆಯೋಗದ ನಿರ್ದಾರದಂತೆ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಕೇಂದ್ರ ಸೆಸ್ ಮತ್ತು ಸರ್ ಚಾರ್ಜ್ ಮೂಲಕ ಜನರಿಂದ ತೆರಿಗೆ ವಸೂಲಿ ಮಾಡಿ ರಾಜ್ಯಗಳಿಗೆ ವಂಚನೆ ಮಾಡುವ ಮೂಲಕ ರಾಜ್ಯಗಳನ್ನು ಬಡ ರಾಜ್ಯಗಳಾಗಿ ಮಾಡಲು ಕೇಂದ್ರದ ಅಧಿಕಾರ ಹಿಡಿದಿರುವ ಸಂಚು ಮಾಡಿದೆ ಎಂದು ಆರೋಪಿಸಿದರು.
ನಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಜನಾಂದೋಲನ ಮಾಡುವ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ದೇಶದ ಭವಿಷ್ಯ ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಇವತ್ತಿನ ಯುವ ಸಮುದಾಯದ ಜವಾಬ್ದಾರಿಯಾಗಬೇಕು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಜನಾಂದೋಲನಗಳು ಮೂಲಕ ಜಾಗೃತಿ ಸಭೆಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು ಅದರಿಂದ ದೇಶದ ನಾಗರೀಕರಿಗೆ ಒಳಿತಾಗುತ್ತದೆ ದೇಶವು ಸದೃಢವಾಗಲು ರಾಜ್ಯಗಳೂ ಸಹ ಸಧೃಡ ಆಗಬೇಕಾಗಿದೆ. ಇಲ್ಲವಾದರೆ ದೇಶ ಸದೃಢ ಆಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆಳುವ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದರು,
ದಕ್ಷಿಣ ಭಾರತ ರಾಜ್ಯಗಳಲ್ಲಿ ಜನಾಂದೋಲನ ನಡೆಸುವ ನಿಟ್ಟಿನಲ್ಲಿ ಚರ್ಚೆಗಳು ಹೆಚ್ಚಾಗಬೇಕು ಹಕ್ಕು ಮತ್ತು ಜವಾಬ್ದಾರಿ ನಿರ್ವಹಣೆಗಾಗಿ ಪ್ರತಿರೋಧ ಕಾರ್ಯಕ್ರಮಗಳು ನಡೆಸಬೇಕು ಕೇಂದ್ರದಲ್ಲಿ ಬಿಜೆಪಿಯ ದ್ವೇಷದ ರಾಜಕಾರಣ ಹೆಚ್ಚಾಗಿದೆ ಜನಸಂಖ್ಯಾ ಗಣತಿಯ ಆಧಾರದ ಮೇಲೆ ತೀರ್ಮಾನಗಳು ನಡೆದಿವೆ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕು ಅಧಿವೇಶನದಲ್ಲಿ ಆಗಬೇಕಾದ ನೈಜ ಚರ್ಚೆಗಳು ಆಗುತ್ತಿಲ್ಲ ಈ ಎಲ್ಲಾ ವಿಚಾರಗಳಲ್ಲಿ ಸುಧಾರಣೆ ತರಲು ಜನರು ಒಕ್ಕೂಟ ವ್ಯವಸ್ಥೆ ವಿರೋಧಿಗಳ ವಿರುದ್ದ ಜನಾಂದೋಲನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ವಿ ಗೌತಮ್ ದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಗಾಂಧೀಜಿಯವರು ಬಂದ ನಂತರದಿಂದ ಹೋರಾಟದ ಚಳುವಳಿಗಳು ಹೆಚ್ಚಾದವು ರಾಜ್ಯಗಳಲ್ಲಿನ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ ಸರಕಾರಗಳಿಂದ ನಡೆದಿದೆ ಧರ್ಮದ ರಾಜಕೀಯ ಹೆಚ್ಚಾಗಿ ಅಭಿವೃದ್ಧಿ ಶೂನ್ಯವಾಗಿದೆ ಸಂವಿಧಾನ ಕೇವಲ ಹೆಸರಿಗೆ ಅಷ್ಟೇ ಸೀಮಿತಗೊಳಿಸಲು ಹೊರಟಿದ್ದಾರೆ ರಾಷ್ಟ್ರದ ಭವಿಷ್ಯದ ಜೊತೆಗೆ ರಾಜ್ಯಗಳ ಭವಿಷ್ಯ ಉಳಿವಿಗಾಗಿ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜೆಪಿ ವಿಚಾರ ವೇದಿಕೆ ಮುಖಂಡ ಗದ್ದೆಕಣ್ಣೂರು ದಯಾನಂದ್ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಛೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವುದೇ ಬಿಜೆಪಿ ಅಜೆಂಡಾವಾಗಿದೆ ಇದಕ್ಕೆ ಪ್ರತಿರೋಧ ಶಕ್ತಿಗಳು ಒಗ್ಗಟ್ಟಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡರಾದ ಟಿ.ವಿಜಿಕುಮಾರ್, ಶ್ರೀಕೃಷ್ಣ, ಮೌಲ್ವಿ ಅತೀಖ್ ಉರ್ ರೆಹಮಾನ್, ಸಂಘಟಕರಾದ ಉಮಾಶಂಕರ್, ಅನ್ವರ್ ಪಾಷ, ದೊಡ್ಡಹಸಾಳ ರಘುಕುಮಾರ್, ಕೋಡಿರಾಮಸಂದ್ರ ಚಂದ್ರಶೇಖರ್, ಸಂದೀಪ್ ಶ್ರೀಕೃಷ್ಣ, ಬೀರಮಾನಹಳ್ಳಿ ಚೌಡರೆಡ್ಡಿ, ಜೈದೀಪ್ ಮುಂತಾದವರು ಇದ್ದರು.
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು,…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…
ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…
ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು…
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…