ತಾಳಿ ಕಟ್ಟುವ ಶುಭವೇಳೆಯೇ ವಧುವೇ ಮದುವೆ ಬೇಡವೆಂದ ಪ್ರಕರಣ ಮತ್ತೊಂದು ರೀತಿಯಲ್ಲಿ ಸುಖಾಂತ್ಯ ಕಂಡಿದೆ. ಕಡೆಗೂ ವಧುವಿನ ಇಚ್ಛೆಯಂತೆ ತಾನು ಪ್ರೀತಿಸಿದ ಯುವಕನೊಂದಿಗೆ ವಧು ವಿವಾಹ ನಡೆದಿದೆ.
ಆದರೆ, ಮದುವೆ ನಿಶ್ವಯವಾಗಿದ್ದ ವರ ಹಾಗೂ ಆತನ ಕುಟುಂಬಸ್ಥರು ನೋವಿನಿಂದಲೇ ಕಲ್ಯಾಣ ಮಂಟಪದಿಂದ ಹೊರ ನಡೆದು ವಧುವಿಗೆ ನೀಡಿದ ಒಡವೆ, ಧಾರೆ ಸೀರೆ, ಖರ್ಚು ಮಾಡಿದ ಹಣ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ….
ಮದುವೆ ಮುರಿದು ಬಿದ್ದಿದ್ದರಿಂದ ವಧುವಿನ ಪೋಷಕರ ಆಘಾತಕ್ಕೆ ಒಳಗಾಗಿದ್ದರು. ಆದರೆ ಮಗಳ ಒತ್ತಾಯಕ್ಕೆ ಮಣಿದು ಆಕೆ ಇಷ್ಟಪಟ್ಟಿದ್ದವನ ಜೊತೆ ಒಲ್ಲದ ಮನಸ್ಸಿನಿಂದಲೇ ಮದುವೆ ನೆರವೇರಿಸಿದ್ದಾರೆ.
ಹಾಸನ ಹೊರವಲಯದ ಬೂವನಹಳ್ಳಿಯ ಪಲ್ಲವಿ ಮತ್ತು ಆಲೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೇಣುಗೋಪಾಲ ಜಿ. ನಡುವೆ ಮೂರು ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು.
ಗುರು ಹಿರಿಯರ ನಿಶ್ಚಯದಂತೆ ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟದಲ್ಲಿ ವಿವಾಹ ಮಹೋತ್ಸವ ಏರ್ಪಡಿಸಲಾಗಿತ್ತು.
ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಪಲ್ಲವಿ ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಪಟ್ಟು ಹಿಡಿದ ಕಾರಣ ಮದುವೆ ಮುರಿದು ಬಿದ್ದಿತ್ತು.
ಯಾರು ಎಷ್ಟೇ ಮನವೊಲಿಸಿದರೂ ಮನಸ್ಸು ಬದಲಾಯಿಸಲಿಲ್ಲ. ಕಡೆಗೆ ತಾಯಿ ಹಾಗೂ ವರ ಕೇಳಿಕೊಂಡರೂ ಪಲ್ಲವಿ ಮನಸ್ಸು ಕರಗಲಿಲ್ಲ. ಪರಿಣಾಮ ಮದುವೆ ಮುರಿದು ಬಿದ್ದಿತ್ತು. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ, ಯಾವುದೇ ಫಲಪ್ರದ ಆಗಲಿಲ್ಲ. ಪಲ್ಲವಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವೆ ಎಂದು ಪೊಲೀಸರ ಮುಂದೆಯೂ ತಿಳಿಸಿದ್ದಳು.
ಇಷ್ಟೆಲ್ಲಾ ಬೆಳವಣಿಗೆ ಬಳಿಕ ರಾತ್ರಿ ವೇಳೆಗೆ ತಾನು ಪ್ರೀತಿಸಿದ ಯುವಕನೊಂದಿಗೆ ಪಲ್ಲವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಮಗಳ ಇಚ್ಛೆಯಂತೆಯೇ ಪ್ರಿಯಕರ ರಘು ಜೊತೆ ಪೋಷಕರು ಸರಳ ವಿವಾಹ ನೆರವೇರಿಸಿದರು.
ಪ್ರಿಯತಮೆ ಪಲ್ಲವಿಗೆ ಪ್ರಿಯಕರ ರಘು ತಾಳಿ ಕಟ್ಟಿದ್ದು, ಇದಕ್ಕೆ ಎರಡೂ ಕಡೆಯ ಕುಟುಂಬಸ್ಥರು ಸಾಕ್ಷಿಯಾದರು. ರಘು ಮೂಲತಃ ಹಾಸನ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾಗಿದ್ದು, ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡಿಕೊಂಡಿದ್ದಾನೆ. ಹಲವು ತಿಂಗಳುಗಳಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದನ್ನು ಹೆತ್ತವರ ಬಳಿ ಹೇಳಿಕೊಳ್ಳಲು ಪಲ್ಲವಿಗೆ ಧೈರ್ಯ ಇರಲಿಲ್ಲ. ಪರಿಣಾಮ ಮದುವೆಗೆ ಒಪ್ಪಿಕೊಂಡಿದ್ದಳು. ಈ ಸಂದರ್ಭದಲ್ಲಿ ಪ್ರಿಯಕರ ಕರೆ ಮಾಡಿ ನಾನೇ ನಿನ್ನನ್ನು ಮದುವೆ ಆಗುವೆ ಎಂದು ಹೇಳಿದ ನಂತರ ಕಡೇ ಕ್ಷಣದಲ್ಲಿ ತಾಳಿ ಕಟ್ಟಿಕೊಳ್ಳಲು ನಿರಾಕರಿಸಿದ್ದರಿಂದ ಮದುವೆ ಮುರಿದು ಬಿದ್ದಿತ್ತು. ಈಗ ಪರಸ್ಪರ ಪ್ರೀತಿಸಿದ್ದ ಜೋಡಿಗಳು ಒಂದಾಗಿವೆ.
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…