ದೊಡ್ಡಬಳ್ಳಾಪುರ ತಾಲ್ಲೂಕಿನ ಕೇಂದ್ರದಿಂದ ಗೌರಿಬಿದನೂರು ಕೇಂದ್ರದ ವರೆಗೆ ಹಾದುಹೋಗಿರುವ 220 ಕೆವಿ ವಿದ್ಯುತ್ ಲೈನ್ ಏಕ ಮಾರ್ಗವನ್ನು ಬದಲಾವಣೆ ಮಾಡಿ ದ್ವಿಮಾರ್ಗ ಮಾಡುತ್ತಿರುವ ಕೆಪಿಟಿಸಿಎಸ್ ಏಕಮುಖ ನಿರ್ಧಾರವನ್ನ ಖಂಡಿಸಿ ಮತ್ತು ರೈತರಿಂದ ವಶಕ್ಕೆ ಪಡೆಯುತ್ತಿರುವ ಭೂಮಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ಮಾ.30ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ಸೋಮವಾರ ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಗೌರಿಬಿದನೂರಿಗೆ 220 ಕೆವಿ ಹಾದುಹೋಗಿದೆ. ಈ ಹಿಂದೆ ಏಕರ್ಮಾಗದ ಕಾರಿಡಾರ್ ನಿರ್ಮಿಸಿ ರೈತರಿಗೆ 60 ವರ್ಷದವರೆಗೆ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಕೆಪಿಟಿಸಿಎಸ್ ಇದೀಗ ಏಕಾಏಕಿ ದ್ವಿಮಾರ್ಗ ಕಾರಿಡಾರ್ ಮಾಡಲು ಹೊರಟಿದೆ. ಇದಕ್ಕಾಗಿ ರೈತರಿಗೆ ನೀಡಬೇಕಾದ ಪರಿಹಾರ ಧನವನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ ಇದು ರೈತರಿಗೆ ಮಾರಕವಾಗಲಿದೆ ಎಂದರು.
ಬಮುಲ್ ನಿರ್ದೇಶಕ ಸತೀಶ್ ಮಾತನಾಡಿ, ಯಲಹಂಕದಲ್ಲಿ ಭೂಗತವಾಗಿ ಕೇಬಲ್ ಅಳವಡಿಸಲಾಗಿದೆ. ಖಾಸಗಿ ಬೃಹತ್ ಕಂಪನಿಯಾದ ಫಾಕ್ಸ್ ಕಾನ್ ಗೆ ಭೂಗತವಾಗಿ ವಿದ್ಯುತ್ ಸಂಪರ್ಕವನ್ನ ಸರ್ಕಾರ ನೀಡಿದೆ. ಆದರೆ ರೈತರಿಗೆ ಮಾತ್ರ ವಿದ್ಯುತ್ ಲೈನ್ ಗಳನ್ನು ಹಾಕುವ ಮೂಲಕ ಹೊಲಗಳಿಗೆ ಬೇಲಿ ಹಾಕುತ್ತಿದೆ.
ರೈತರಿಗೆ ಬಿಡಿಗಾಸು ಕೊಡುವುದನ್ನು ಬಿಟ್ಟು ಮಾರುಕಟ್ಟೆ ಬೆಲೆಯಂತೆ ದರವನ್ನು ನೀಡಬೇಕು. ಅವೈಜ್ಞಾನಿಕ ನೀತಿಯನ್ನ ಬಿಡಬೇಕು ಇಲ್ಲವಾದಲ್ಲಿ ಮಾ.೩೦ ರಂದು ಪ್ರತಿಭಟನೆ ಮಾಡುವುದು ಖಚಿತ ಎಂದರು.
ಈ ವೇಳೆ ರೈತ ಸಂಘದ ಮುಖಂಡರಾದ ಪ್ರಸನ್ನ, ಮುತ್ತೇಗೌಡ, ಹನುಮೇಗೌಡ, ತಿ.ರಂಗರಾಜು, ಬಮುಲ್ ನಿರ್ದೇಶಕ ಸತೀಶ್ ಮತ್ತಿತ್ತರರು ಇದ್ದರು.
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…
ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…