ತಾಲ್ಲೂಕಿನ 20 ಗ್ರಾಮಗಳಲ್ಲಿ ಹಾದುಹೋಗಿರುವ 220 ಕೆವಿ ವಿದ್ಯುತ್ ಕೇಬಲ್: ಭೂ ಪರಿಹಾರ ಹಣ ಹೆಚ್ಚಿಸಲು ರೈತ ಸಂಘ ಒತ್ತಾಯ

ದೊಡ್ಡಬಳ್ಳಾಪುರ ತಾಲ್ಲೂಕಿನ ಕೇಂದ್ರದಿಂದ ಗೌರಿಬಿದನೂರು ಕೇಂದ್ರದ ವರೆಗೆ ಹಾದುಹೋಗಿರುವ 220 ಕೆವಿ ವಿದ್ಯುತ್ ಲೈನ್ ಏಕ ಮಾರ್ಗವನ್ನು ಬದಲಾವಣೆ ಮಾಡಿ ದ್ವಿಮಾರ್ಗ ಮಾಡುತ್ತಿರುವ ಕೆಪಿಟಿಸಿಎಸ್ ಏಕಮುಖ ನಿರ್ಧಾರವನ್ನ ಖಂಡಿಸಿ ಮತ್ತು ರೈತರಿಂದ ವಶಕ್ಕೆ ಪಡೆಯುತ್ತಿರುವ ಭೂಮಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ಮಾ.30ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ಸೋಮವಾರ ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ತಾಲ್ಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಗೌರಿಬಿದನೂರಿಗೆ 220 ಕೆವಿ ಹಾದುಹೋಗಿದೆ. ಈ ಹಿಂದೆ ಏಕರ್ಮಾಗದ ಕಾರಿಡಾರ್ ನಿರ್ಮಿಸಿ ರೈತರಿಗೆ 60 ವರ್ಷದವರೆಗೆ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಕೆಪಿಟಿಸಿಎಸ್ ಇದೀಗ ಏಕಾಏಕಿ ದ್ವಿಮಾರ್ಗ ಕಾರಿಡಾರ್ ಮಾಡಲು ಹೊರಟಿದೆ. ಇದಕ್ಕಾಗಿ ರೈತರಿಗೆ ನೀಡಬೇಕಾದ ಪರಿಹಾರ ಧನವನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ ಇದು ರೈತರಿಗೆ ಮಾರಕವಾಗಲಿದೆ ಎಂದರು.

ಬಮುಲ್ ನಿರ್ದೇಶಕ ಸತೀಶ್ ಮಾತನಾಡಿ, ಯಲಹಂಕದಲ್ಲಿ ಭೂಗತವಾಗಿ ಕೇಬಲ್ ಅಳವಡಿಸಲಾಗಿದೆ. ಖಾಸಗಿ ಬೃಹತ್ ಕಂಪನಿಯಾದ ಫಾಕ್ಸ್ ಕಾನ್ ಗೆ ಭೂಗತವಾಗಿ ವಿದ್ಯುತ್ ಸಂಪರ್ಕವನ್ನ ಸರ್ಕಾರ ನೀಡಿದೆ. ಆದರೆ ರೈತರಿಗೆ ಮಾತ್ರ ವಿದ್ಯುತ್ ಲೈನ್ ಗಳನ್ನು ಹಾಕುವ ಮೂಲಕ ಹೊಲಗಳಿಗೆ ಬೇಲಿ ಹಾಕುತ್ತಿದೆ.
ರೈತರಿಗೆ ಬಿಡಿಗಾಸು ಕೊಡುವುದನ್ನು ಬಿಟ್ಟು ಮಾರುಕಟ್ಟೆ ಬೆಲೆಯಂತೆ ದರವನ್ನು ನೀಡಬೇಕು. ಅವೈಜ್ಞಾನಿಕ ನೀತಿಯನ್ನ ಬಿಡಬೇಕು ಇಲ್ಲವಾದಲ್ಲಿ ಮಾ.೩೦ ರಂದು ಪ್ರತಿಭಟನೆ ಮಾಡುವುದು ಖಚಿತ ಎಂದರು.

ಈ ವೇಳೆ ರೈತ ಸಂಘದ ಮುಖಂಡರಾದ ಪ್ರಸನ್ನ, ಮುತ್ತೇಗೌಡ, ಹನುಮೇಗೌಡ, ತಿ.ರಂಗರಾಜು, ಬಮುಲ್ ನಿರ್ದೇಶಕ ಸತೀಶ್ ಮತ್ತಿತ್ತರರು ಇದ್ದರು.

Ramesh Babu

Journalist

Recent Posts

ನ್ಯಾ. ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ: ಒಳಮೀಸಲಾತಿ ತಾರತಮ್ಯ ಸರಿಪಡಿಸುವಂತೆ ಅಗ್ರಹಿಸಿ ಮಾ. 25ರಂದು ಪ್ರತಿಭಟನೆ – ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನರೇಶ

ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ…

19 hours ago

ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ವರ್ಷಗಳೇ ಕಳೆದರೂ ಸ್ವಚ್ಛತೆ ಕಾಣದ ಹಾದ್ರಿಪುರ ಕಾಲೋನಿ:‌ ಪಂಚಾಯಿತಿ ಎದುರು ಚರಂಡಿ ನೀರು ಇಟ್ಟು ಪ್ರತಿಭಟನೆ

ಗ್ರಾಮ ಪಂಚಾಯಿತಿ ಕೂಗಳತೆ ದೂರದಲ್ಲಿರುವ ಹೆಚ್ಚು ದಲಿತರು ಇರುವ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.…

23 hours ago

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಬಸ್ ಅಪಘಾತ: ಹಬ್ಬ ಮುಗಿಸಿ ಬರ್ತಿದ್ದ ನಾಲ್ವರು ದಾರುಣ ಸಾವು…!

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಡೆದಿದೆ... ಕೇರಳ ಮೂಲದ…

1 day ago

ಅಪಘಾತ ತಪ್ಪಿಸಲು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್ ಡಿಕ್ಕಿ

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಚೆನ್ನದೇವಿ ಅಗ್ರಹಾರ ಪೆಟ್ರೋಲ್ ಬಂಕ್ ಸಮೀಪದ ತಿರುವಿನಲ್ಲಿ ಪದೇ ಪದೇ ಅಪಘಾತ ಪ್ರಕರಣಗಳು ಮರುಕಳಿಸುತ್ತಿವೆ....…

1 day ago

ಮಾ.23ಕ್ಕೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಬಜೆಟ್ ಪೂರ್ವಭಾವಿ ಸಭೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ 2026-27ನೇ ಸಾಲಿನ ಬಜೆಟ್ ಕುರಿತ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಮಾ.23ರಂದು ಹಮ್ಮಿಕೊಳ್ಳಲಾಗಿದೆ. ಪಟ್ಟಣ…

2 days ago

ಹಾದ್ರೀಪುರ ಕ್ರಿಕೆಟ್ ಟೂರ್ನಮೆಂಟ್-2 ಯಶಸ್ವಿ: ‘ಜೈ ಆಂಜನೇಯ ತಂಡ ವಿಜೇತ’: ಕ್ರೀಡೆಯಿಂದ ಯುವಕರಲ್ಲಿ ಹೆಚ್ಚಾದ ಬಾಂಧವ್ಯ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಯುವಕರ ಬಾಂಧವ್ಯ ಹೆಚ್ಚಾಗಲು ಎರಡನೇ ವರ್ಷದ ಕ್ರಿಕೆಟ್ ಆಯೋಜನೆ ಯಶಸ್ವಿಯಾಗಿದೆ. ಈ ಕ್ರೀಡಾಕೂಟದಲ್ಲಿ ಜೈ…

2 days ago