ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಯುವಕರ ಬಾಂಧವ್ಯ ಹೆಚ್ಚಾಗಲು ಎರಡನೇ ವರ್ಷದ ಕ್ರಿಕೆಟ್ ಆಯೋಜನೆ ಯಶಸ್ವಿಯಾಗಿದೆ.
ಈ ಕ್ರೀಡಾಕೂಟದಲ್ಲಿ ಜೈ ಆಂಜನೇಯ, ರಾಯಲ್ ಸ್ಟ್ರಾಂಗ್, ಎಬಿಡಿ ಸ್ಟ್ರೈಕರ್, ರಾಕ್ ಅಂಡ್ ರೋಲ್ ತಂಡಗಳು ಭಾಗವಹಿಸಿದ್ದವು. ಎರಡು ದಿನಗಳ ಕಾಲ ನಡೆದ ಟೂರ್ನಮೆಂಟ್ ನಲ್ಲಿ ‘ಜೈ ಆಂಜನೇಯ’ ತಂಡ ವಿಜೇತರಾಗಿ ಹೊರ ಹೊಮ್ಮಿದರೆ, ರಾಯಲ್ ಸ್ಟ್ರಾಂಗ್ ತಂಡ ರನ್ನರ್ ಅಪ್ ಆಗಿದೆ.
ಕೆಲಸ ನಿಮಿತ್ತ ಊರಿಂದ ಹೊರಹೋಗಿದ್ದ ಯುವಕರು ಕೂಡ, ಎರಡು ದಿನ ಕೆಲಸ ಬದಿಗೊತ್ತಿ ಎಲ್ಲರೂ ಕೂಡ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಾಲ್ಯ ಸ್ನೇಹಿತರೆಲ್ಲಾ ಜೊತೆಗೂಡಿ ಖುಷಿ ಖುಷಿಯಿಂದ ಕ್ರಿಕೆಟ್ ಆಟ ಆಡಿದರು. ಆಟ ಆಡುವ ವೇಳೆ ಬಾಲ್ಯದ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದು ವಿಶೇಷವಾಗಿತ್ತು.
ವಿಜೇತ ಜೈ ಆಂಜಿನೇಯ ತಂಡಕ್ಕೆ ಟ್ರೋಫಿ ಜೊತೆಗೆ ನಗದು ಬಹುಮಾನ, ರನ್ನರ್ ಅಪ್ ರಾಯಲ್ ಸ್ಟ್ರಾಂಗ್ ಮತ್ತು ಮೂರನೇ ಸ್ಥಾನ ಪಡೆದ ಎಬಿಡಿ ಸ್ಟ್ರೈಕರ್ ಗೆ ಟ್ರೋಫಿ ಜೊತೆಗೆ ನಗದು ಬಹುಮಾನ ನೀಡಲಾಯಿತು.
ಈ ವೇಳೆ ಗ್ರಾಮದ ಹಿರಿಯ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿದರು.
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…
ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…
ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…