ಪ್ರೀತಿ ವಾತ್ಸಲ್ಯದಿಂದ ಸಲುಹಿದ ತಾಯಿಯ ಅಕಾಲಿಕ ಮರಣ ನೆನೆದು ಮನನೊಂದ ಯುವಕ ನೇಣಿಗೆ ಶರಣಾದ ಘಟನೆ ನಗರದ ಮೈಕ್ರೋ ಸ್ಟೇಷನ್ ಚಿಕ್ಕಪೇಟೆಯಲ್ಲಿ ನಡೆದಿದೆ.
ವಿರಾಜಪೇಟೆ ನಗರದ ಚಿಕ್ಕಪೇಟೆ ಮೈಕ್ರೋ ಸ್ಟೇಷನ್ ನಿವಾಸಿ ದಿವಂಗತ ಮೋಹನ್ ಕುಮಾರ್ ಮತ್ತು ಪಟ್ಟು ದಂಪತಿಗಳ ಪುತ್ರ ಕ್ಯಾಟರಿಂಗ್ ಕೆಲಸ ಮಾಡುತಿದ್ದ ಎಸ್.ಎಂ. ಮಧುಸೂದನ್ 28 ವರ್ಷ ನೇಣಿಗೆ ಶರಣಾದ ವ್ಯಕ್ತಿ.
ಘಟನೆಯ ಸಾರ:
ಚಿಕ್ಕ ಪೇಟೆ ಮೈಕ್ರೋ ಸ್ಟೇಷನ್ ನಿವಾಸಿಯಾಗಿದ್ದ ದಿವಂಗತ ಮೋಹನ್ ಕುಮಾರ್ ಅವರಿಗೆ 6 ಮಂದಿ ಮಕ್ಕಳು ಪೈಕಿ ಇರ್ವರು ಪುತ್ರಿಯರು, ಮತ್ತು ನಾಲ್ಕು ಮಂದಿ ಪುತ್ರರು, ಮೃತನಾದ ಯುವಕ ಐದನೆಯವನು. ಕೆಲವು ತಿಂಗಳ ಹಿಂದೆ ಮೃತನ ತಾಯಿ ಪಟ್ಟು ವಯೊ ಸಹಜ ಕಾಯಿಲೆಗೆ ತುತ್ತಾಗಿ ಮೃತ ಹೊಂದಿದ್ದರು. ತಾಯಿಯ ಅಕಾಲಿಕ ಮರಣ ಯುವಕನ ಮೇಲೆ ಗಾಢವಾದ ಪ್ರಭಾವ ಬೀರಿತು. ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ, ಅ.25 ರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ಕೋಣೆಯ ಮೇಲ್ಚಾವಣಿಗೆ ಬಟ್ಟೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಅಣ್ಣ ಮಂಜುನಾಥ್ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುವೆಂಪು......... ಸಾಹಿತ್ಯ - ವಿಶ್ವ ಮಾನವ ಪ್ರಜ್ಞೆ...... ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ…
ಬಾಂಗ್ಲಾ......... ಒಂದು ಎಚ್ಚರಿಕೆಯ ಪಾಠ......... ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ...... ಬಾಂಗ್ಲಾದೇಶದಲ್ಲಿ…
ಜೆಸಿಬಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ…
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…