Categories: ಕೊಡಗು

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ 2 ವರ್ಷಗಳ ನಂತರ ಬಂಧನ

ಕಳೆದ 2 ವರ್ಷಗಳ ಹಿಂದೆ ಅಂದರೆ 07-02-2022 ರಂದು ಮಿದೇರಿರ ಚಿಣ್ಣಪ್ಪರವರು ಶ್ರೀಮಂಗಲ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮಾ ಮತ್ತು ತಂಗಿ ವೀಣಾ. ರವರ ತಲೆ, ಕುತ್ತಿಗೆ, ದೇಹದ ಭಾಗಗಳಿಗೆ ಯಾರೋ ಅಪರಿಚಿತರು ಹರಿತವಾದ ಕತ್ತಿಯಿಂದ ಕಡಿದು ಪ್ರೇಮಾರವರನ್ನು ಕೊಲೆ ಮಾಡಿ. ವೀಣಾರವರಿಗೆ ಗಂಭೀರ ಗಾಯವುಂಟುಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಮೊ.ಸಂ 07/2022 ಕಲಂ 307, 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ನಂತರ ಪ್ರಕರಣದಲ್ಲಿ ತನಿಖಾ ಸಂದರ್ಭದಲ್ಲಿ ಆಸ್ತಿಯ ವಿಚಾರದಲ್ಲಿ ಕುಟುಂಬಸ್ಥರಲ್ಲೇ ಯಾರೋ ಈ ಕೃತ್ಯ ಎಸಗಿರಬಹುದೆಂದು ಸಂಶಯ ವ್ಯಕ್ತಪಡಿಸಿರುತ್ತಾರೆ. ನಂತರ ಸಿ.ಡಿ.ಆರ್ ಮಾಹಿತಿ. ಟವರ್ ಲೊಕೇಶನ್ ಹಾಗೂ ಕೃತ್ಯಕ್ಕೆ ಮೂಲ ಉದ್ದೇಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಮೃತೆ ಪ್ರೇಮಾರವರ ಗಂಡ ಸೋಮಶೇಖರ್‌ರವರ ಅಕ್ಕನ ಮಗನಾದ ರಾಜೇಶ್, ತಂದೆ ಲೇಟ್ ಸಿದ್ದಪ್ಪ, ಪ್ರಾಯ 42 ವರ್ಷ, ವಾಸ: ಟಿ.ಶೆಟ್ಟಿಗೇರಿ ಗ್ರಾಮ, ಹಾಲಿ ವಾಸ: ಬೇಂದ್ರೆ, ತಣ್ಣೀರು ಬಾವಿ, ಮಂಗಳೂರು ನಗರ, ರವರು ಕೃತ್ಯ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮಾರ ದೃಶ್ಯಾವಳಿಯನ್ನು ಪರಿಶೀಲಿಸಲಾಗಿ ಮೃತೆ ಮತ್ತು ಗಾಯಾಳು ನಡೆದುಕೊಂಡು ಹೋಗುವ ಹಾಗೂ ರಾಜೇಶನು ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿರುವ ದೃಶ್ಯಾವಳಿ ಕಂಡು ಬಂದಿರುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಕ್ಷಮಾ ಮಿಶ್ರಾ ಇವರ ನಿರ್ದೆಶನದಂತೆ ವಿರಾಜಪೇಟೆ ಪೊಲೀಸ್ ಉಪ-ಅಧೀಕ್ಷಕರಾದ ಸಿ.ಟಿ. ಜಯಕುಮಾರ್‌ರವರ ಮಾರ್ಗದರ್ಶನದಲ್ಲಿ ಕುಟ್ಟಿ ವೃತ್ತದ ವೃತ್ತ ನಿರೀಕ್ಷಕರಾದ ಸಿ.ಎ ಮಂಜಪ್ಪ, ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ರವಿಶಂಕರ್ ರವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿಯವರನ್ನು ನಿಯೋಜಿಸಿ ಆರೋಪಿಯ ಪತ್ತೆಯ ಬಗ್ಗೆ ತಂಡಗಳನ್ನು ರಚಿಸಿದ್ದು, ಸದರಿ ತಂಡವು ಶಂಕಿತ ಆರೋಪಿ ರಾಜೇಶ್‌ನ ಪತ್ತೆಯ ಬಗ್ಗೆ ಪ್ರಕರಣ ದಾಖಲಾದಲ್ಲಿಂದ ಇಲ್ಲಿಯವರೆಗೆ ಸತತ ಪ್ರಯತ್ನ ನಡೆಸಿದರೂ ಸಹ ಶಂಕಿತ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಯಾವುದೇ ಮಾಹಿತಿ ತಿಳಿಯದೇ ಇದುದ್ದರಿಂದ ಆರೋಪಿಯ ಬಗ್ಗೆ ಮಾಹಿತಿ ತಿಳಿಯಲು ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ ನಿರ್ದೇಶನದಂತೆ, ವಿರಾಜಪೇಟೆ ಪೊಲೀಸ್ ಉಪ- ಅಧೀಕ್ಷಕರಾದ ಆರ್ ಮೋಹನ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಕುಟ್ಟ ವೃತ್ತದ ವೃತ್ತ ನಿರೀಕ್ಷಕರಾದ ಸಿ.ಎ ಮಂಜಪ್ಪ, ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐರವರಾದ ರವೀಂದ್ರರವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿಯವರಾದ ಶ್ರೀಮಂಗಲ ಪೊಲೀಸ್ ಠಾಣಾ ಎ.ಎಸ್.ಐ. ಪ್ರಮೋದ್ ಮತ್ತು ಪೊನ್ನಂಪೇಟೆ ಠಾಣೆಯ ಪಿ.ಸಿ 257ರ ಮಹದೇವಸ್ವಾಮಿ ರವರನ್ನು ನಿಯೋಜಿಸಿ ಪುತ್ತೂರಿನಲ್ಲಿ ಆರೋಪಿತನಾದ ರಾಜೇಶ್‌ನನ್ನು ದಿನಾಂಕ 24-09-2024 ರಂದು ವಶಕ್ಕೆ ಪಡೆದು ಕೊಳ್ಳಲಾಗಿದೆ.

*ಪ್ರಕರಣದ ಹಿನ್ನೆಲೆ*

ಆರೋಪಿ ರಾಜೇಶನು ದಿನಾಂಕ 05-02-2022 ರಂದು ಪೊನ್ನಂಪೇಟೆ ಕೊಡವ ಸಮಾಜಕ್ಕೆ ಮದುವೆ ಸಮಾರಂಭದ ಹಿಂದಿನ ದಿನವಾದ ಊರುಕೂಡುವ ದಿನದಂದು ಬಂದು ಸದರಿ ಸಮಾರಂಭಕ್ಕೆ ಪ್ರೇಮಾ
ರವರು ಬರುತ್ತಾರೆಂದು ತಿಳಿದು ಬಂದರೆ ಅಲ್ಲಿಯೇ ಆಕೆಯನ್ನು ಕೊಲೆ ಮಾಡಲು ಸಿದ್ದತೆಯೊಂದಿಗೆ ಬಂದು ಕಾದಿದ್ದು ಆದರೆ ಆ ದಿನ ಆಕೆಯು ಬಂದಿರಲಿಲ್ಲ. ಮಾರನೇ ದಿನ ಮದುವೆ ಸಮಾರಂಭಕ್ಕೆ ಮುಂಚಿತವಾಗಿ ಈತನು ಬಂದು ಕೊಡವ ಸಮಾಜದ ಒಳಗೆ ಕಾಯುತ್ತಿದ್ದು ಸ್ವಲ್ಪ ಸಮಯದ ಬಳಿಕ ಪ್ರೇಮಾರವರು ಆಕೆಯ ಸಹೋದರಿ ವೀಣಾ ರವರೊಂದಿಗೆ ಮದುವೆ ಸಮಾರಂಭಕ್ಕೆ ಬಂದಿದ್ದನ್ನು ಖಚಿತ ಪಡಿಸಿಕೊಂಡು ಆರೋಪಿ ರಾಜೇಶನು ಹೊರಗಡೆ ಬಂದು ಪ್ರೇಮಾಳಿಗಾಗಿ ಕಲ್ಯಾಣ ಮಂಟಪದ ಹೊರಗಡೆ ಗೇಟಿನ ಬಳಿಯೇ ಕೊಲ್ಲುವ ಉದ್ದೇಶದಿಂದ ಕಾಯುತ್ತಿರುತ್ತಾನೆ. ಆದರೆ ಜೊತೆಯಲ್ಲಿ ಮೃತೆ ಪ್ರೇಮಾ ಬರುವಾಗ ಪ್ರೇಮಾಳ ಜೊತೆ ಆರೋಪಿ ರಾಜೇಶನ ತಂಗಿಯು ಸಹ ಇದುದ್ದರಿಂದ ಅಲ್ಲಿ ಕೊಲೆ ಮಾಡಿರುವುದಿಲ್ಲ. ನಂತರ ಪ್ರೇಮಾಳು ಆಕೆಯ ಸಹೋದರಿಯೊಂದಿಗೆ ಟಿ.ಶೆಟ್ಟಿಗೇರಿ ಗ್ರಾಮಕ್ಕೆ ಖಾಸಗಿ ಬಸ್ಸಿನಲ್ಲಿ ಹತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿರುತ್ತಾನೆ.

ನಂತರ ಟಿ.ಶೆಟ್ಟಿಗೇರಿ ಗ್ರಾಮದ ಘಟನಾ ಸ್ಥಳಕ್ಕೆ ತಲುಪಿದಾಗ ಈತನು ಪ್ರೇಮಾ ಮತ್ತು ಆಕೆಯ ಸಹೋದರಿ ವೀಣಾಳನ್ನು ಹಿಂಬಾಲಿಸಿಕೊಂಡು ಹೋಗಿ ನನ್ನ ಮಾವನನ್ನು ಏಕೆ ಕೊಂದೆ ? ಎಂದು ಪ್ರೇಮಾಳನ್ನು ಕೇಳಿ ಕತ್ತಿಯಿಂದ ಕಡಿದು ಪ್ರೇಮಾಳನ್ನು ಕೊಂದು ವೀಣಾರವರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ.

ಘಟನೆಯ ಬಳಿಕ ಆರೋಪಿ ರಾಜೇಶನು ತನ್ನ ಮೋಟಾರು ಸೈಕಲ್ ಕೆ.ಎ 19 ಇಇ 5791 ಮೋಟಾರು ಸೈಕಲ್ಲಿನಲ್ಲಿ ಹೋಗಿದ್ದು ಸ್ವಲ್ಪ ದೂರದಲ್ಲಿ ಕೃತ್ಯಕ್ಕೆ ಬಳಸಿದ ಕತ್ತಿಯನ್ನು ಬಿಸಾಕಿ ನಂತರ ಮಂಗಳೂರು ಕಡೆಗೆ ಹೋಗುತ್ತಾ ದಾರಿಯಲ್ಲಿ, ತಾನು ಧರಿಸಿದ್ದ ರಕ್ತಸಿಕ್ತವಾದ ಬಟ್ಟೆಯನ್ನು ಬದಲಾಯಿಸಿ ಪುತ್ತೂರಿನಲ್ಲಿ ಆ ಬಟ್ಟೆಯನ್ನು ಸುಟ್ಟುಹಾಕಿದ್ದು ಹಾಗೆಯೇ ಮುರುಡೇಶ್ವರಕ್ಕೆ ಹೋಗುತ್ತಾ ಬಟ್ಕಳದ ಬಳಿ, ತನ್ನ ಬಳಿ ಇರುವ 2 ಮೊಬೈಲ್ ಪೋನ್‌ನ್ನು ರಸ್ತೆಗೆ ಒಡೆದು ನಾಶಪಡಿಸಿ ಅಲ್ಲಿಂದ ಮುರುಡೇಶ್ವರಕ್ಕೆ ತೆರಳಿ ತನ್ನ ಬೈಕ್ ನ್ನು ಒಂದು ಗ್ಯಾರೇಜ್ ಬಳಿ ನಿಲ್ಲಿಸಿ ಗ್ಯಾರೇಜ್ ಮಾಲೀಕನಿಗೆ ನಾಳೆ ಬರುತ್ತೇನೆಂದು ತಿಳಿಸಿ. ಕಾರವಾರದ ಕಡೆಗೆ ಬಸ್ಸಿನಲ್ಲಿ ತೆರಳುತ್ತಾನೆ. ಕಾರವಾರದಲ್ಲಿ 7-8 ದಿನ ಒಂದು ಹೊಟೇಲ್ ನಲ್ಲಿ ಕೆಲಸ ಮಾಡಿ ನಂತರ ಮಹಾರಾಷ್ಟ್ರದ ಪನ್‌ವೇಲ್‌ ಗೆ ರೈಲಿನಲ್ಲಿ ತೆರಳಿ ಅಲ್ಲಿ ಒಂದು ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾನೆ. ಆತನು ಪೊಲೀಸರು ತನ್ನ ಜಾಡು ಹಿಡಿಯಬಹುದೆಂದು ಯಾವುದೇ ಪೋನ್ ನ್ನು ಉಪಯೋಗಿಸುತ್ತಿರಲಿಲ್ಲ. ನಂತರ 4-5 ತಿಂಗಳು ಬಳಿಕ ತಾನು ಕೆಲಸ ಮಾಡಿದ ಸ್ಥಳದಿಂದ ಪೋನ್ ಮಾಡಿದರೆ ಪೊಲೀಸರು ತಾನು ಇರುವ ಜಾಗ ತಿಳಿಯಬಹುದೆಂದು ಬಾವಿಸಿ ಟ್ರೈನ್‌ನಲ್ಲಿ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ದಾರಿಹೋಕರ ಮೊಬೈಲ್ ನಿಂದ ತನ್ನ ಹೆಂಡತಿ ಮತ್ತು ತಂಗಿಗೆ ಪೋನ್ ಮಾಡಿ ಕೇಸಿನ ಬಗ್ಗೆ ವಿಚಾರಿಸಿರುತ್ತಾನೆ. ಆತನ ಹೆಂಡತಿ ಮತ್ತು ಸಹೋದರಿಯು ನೀನು ಪೊಲೀಸರಿಗೆ ಶರಣಾಗು ಎಂದು ಹೇಳಿದಾಗ ಆತನು ಪೋನ್ ಕಟ್ ಮಾಡಿ ಮಹಾರಾಷ್ಟ್ರಕ್ಕೆ ವಾಪಾಸ್ ತೆರಳುತ್ತಾನೆ. ನಂತರ 5-6 ತಿಂಗಳಿಗೆ ಒಮ್ಮೆ ಬಂದು ತಾನು ದುಡಿದ ಹಣವನ್ನು ತನ್ನ ಹೆಂಡತಿ ಕೆಲಸ ಮಾಡುವ ಜಾಗಕ್ಕೆ ತೆರಳುವ ದಾರಿಯಲ್ಲಿ ಕಾದು ಅವಳಿಗೆ ಹಣವನ್ನು ನೀಡಿ ಕೂಡಲೇ ಅಲ್ಲಿಂದ ಹೊರಟು ಹೋಗುತ್ತಾನೆ. ತನ್ನ ಹೆಂಡತಿಗೆ ಯಾವಾಗ ಬರುತ್ತಾನೆ ಮತ್ತು ಎಲ್ಲಿಗೆ ಹೋಗುತ್ತಾನೆಂದು ತಿಳಿಸುತ್ತಿರಲಿಲ್ಲ. ಇತ್ತೀಚೆಗೆ ಪುಟ್ ಪಾತ್ ನಲ್ಲಿರುವ ಒಬ್ಬ ವ್ಯಕ್ತಿಗೆ ಹಣವನ್ನು ನೀಡಿ ಆತನಿಂದ ಬೇಸಿಕ್ ಮೊಬೈಲ್ ಸೆಟ್ ನ್ನು ಪಡೆದುಕೊಂಡು ಉಪಯೋಗಿಸುತ್ತಿದ್ದನು. ಆತನು ತನ್ನ ಚಿಕ್ಕಪ್ಪನನ್ನು ಭೇಟಿಯಾಗಿ ಕೇಸಿನ ಬಗ್ಗೆ ತಿಳಿದುಕೊಳ್ಳಲು ಬರುವ ಸಮಯದಲ್ಲಿ ಬಾತ್ಮಿದಾರರಿಂದ ಮಾಹಿತಿ ಬಂದಿದ್ದು ಆತನನ್ನು ಪೊಲೀಸ್ ನವರು ಪುತ್ತೂರಿನಲ್ಲಿ ವಶಕ್ಕೆ ಪಡೆದು ನಂತರ ನ್ಯಾಯಾಲಯಕ್ಕೆ ಹಾಜರೂಪಡಿಸಲಾಯಿತ್ತು.

ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸಿ ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.

Ramesh Babu

Journalist

Recent Posts

ಆಶಾ ಭೋಸ್ಲೆ…..ಸುಮಾರು 12000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದವರು- ಅವರಿಗೆ ‌ಭಾವಪೂರ್ಣ ಶ್ರದ್ಧಾಂಜಲಿ……

ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…

6 hours ago

Документ_9

Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…

10 hours ago

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ- ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…

18 hours ago

ಹೆಣ್ಣಿನ‌ ಹಿತರಕ್ಷಣೆಗಾಗಿ ಮಹಿಳಾ ಪೊಲೀಸ್ ಠಾಣೆ ಸದಾ ಸನ್ನದ್ಧ- ಮಹಿಳಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪಂಕಜಾ

ಹೆಣ್ಣಿನ‌ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…

21 hours ago

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು…

1 day ago

Документ_12

In der heutigen akademischen Welt steht die Qualität der schriftlichen Arbeiten im Mittelpunkt des Interesses.…

1 day ago